ಮಹಾಭಾರತ ೨೦
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೨೦
*ಸಾ ತತ್ರ ಯೋಷಾ ರುದತೀ ಜಲಾರ್ಥಿನೀ ಗಂಗಾಂ ದೇವೀಂ ವ್ಯವಗಾಹ್ಯಾವತಿಷ್ಠತ್*
_ದೇವತೆಗಳು ಗಂಗೆಯಲ್ಲಿ ಕಮಲವೊಂದನ್ನು ಕಂಡರು. ಇಂದ್ರನು ಅದರ ಬಳಿಗೆ ತೆರಳಿ ಅಚ್ಚರಿಯನ್ನು ಅನುಭವಿಸಿದನು. ಅಗ್ನಿಯಂತೆ ಕಾಂತಿಯುತಳಾದ ಓರ್ವ ಸ್ತ್ರೀ ಅಲ್ಲಿ ನೀರಿಗೋಸ್ಕರ ಅಳುತ್ತಾ ನೀರೊಳಗೆ ನಿಂತಿದ್ದಳು. ಅವಳ ಕಣ್ಣೀರ ಬಿಂದು ಗಂಗೆಯೊಳಗೆ ಬಿದ್ದು ಅಲ್ಲಿ ಒಂದು ಚಿನ್ನದ ಕಮಲ ಹುಟ್ಟಿಕೊಂಡಿತು._
_ಇಂದ್ರನು ಅವಳ ಕುಲ- ಗೋತ್ರ ವಿಚಾರಿಸುತ್ತಾ ಅಳಲು ಕಾರಣವೇನೆಂದು ವಿಚಾರಿಸಿದನು. ಆಗವಳು ತನ್ನ ಬಗೆಗೆ ಮಾಹಿತಿ ಹಾಗೂ ಅಳುವಿನ ಕಾರಣ ಎರಡೂ ತಿಳಿಯಲು ತನ್ನನ್ನು ಹಿಂಬಾಲಿಸುವಂತೆ ಹೇಳುತ್ತಾಳೆ. ಹಾಗೆ ಇಂದ್ರನು ಮುಂದುವರೆದಾಗ ಸಮೀಪದಲ್ಲಿ ಇದ್ದ ಹಿಮಾಲಯದ ಶಿಖರದ ಮೇಲೆ ಯುವತಿಯೋರ್ವಳ ಜೊತೆ ಯುವಕನೊಬ್ಬನು ಪಗಡೆಯಾಡುವುದನ್ನು ಕಂಡನು.ಅದರಲ್ಲಿ ಮುಳುಗಿದ್ದ ಅವನನ್ನು ಕಂಡ ಇಂದ್ರನು ತನ್ನ ದೇವರಾಜತ್ವದ ಪರಿಚಯ ಮಾಡಿ ತಾನೇ ಮೂರು ಲೋಕದೊಡೆಯ ಎಂದನು ಅಹಂಕಾರದಿ._
_ಆಗ ನಕ್ಕ ಆ ಯುವಕ ನಿಧಾನವಾಗಿ ಕಣ್ತೆರೆದು ನೋಡಿದಾಗ ಇಂದ್ರನು ಸ್ತಬ್ಧನಾಗಿ ಮೋಟುಮರದಂತೆ ನಿಂತು ಬಿಟ್ಟನು._
*ಯದಾ ತು ಪರ್ಯಾಪ್ತಮಿಹಾಸ್ಯ ಕ್ರೀಡಯಾ ತದಾ ದೇವೀ ರುದತೀಂ ತಾಮುವಾಚ*
_ತನ್ನ ಆಟ ಮುಗಿದ ಮೇಲೆ ಅಳುತ್ತಿದ್ದ ಆ ದೇವಿಗೆ ಹೀಗೆಂದನು ಯುವಕ- ನಾನಿರುವ ಪ್ರದೇಶಕ್ಕೆ ಇವನನ್ನು ಕರೆ ತಾ. ಮತ್ತೆಂದೂ ಅಹಂಕಾರ ಪಡದಿರಲಿ ಎಂದು. ತರುವಾಯ ಅವಳು ಸ್ಪರ್ಶಿಸಿದೊಡನೆ ಇಂದ್ರನ ಅವಯವಗಳೆಲ್ಲ ಬಿದ್ದು ಹೋದಂತಾಗಿ ನೆಲದ ಮೇಲೆ ಬಿದ್ದನು._
ಮುಂದುವರಿಯುವುದು
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ