ಪ್ರತಿಜ್ಞಾ ಯೌಗಂಧರಾಯಣ ೨
🔥 ಪ್ರತಿಜ್ಞಾ ಯೌಗಂಧರಾಯಣ 🔥 ೨
*व्यक्तं बलं बहु च तस्य न चैककार्यं सँखातवीरपुरुषं च न चानुरक्तम् । व्याजं तत: समभिनन्दति युद्धकाले सर्वं हि सैन्यमनुरागमृते कलत्रम् ।।*
_ಯೌಗಂಧರಾಯಣ ಪ್ರದ್ಯೋತನ ಬಗೆಗಾಡುವ ಮಾತು. ಪ್ರದ್ಯೋತನು ಸಾಕಷ್ಟು ಸೈನ್ಯವನ್ನೇನೋ ಹೊಂದಿದ್ದಾನೆ. ಆದರೆ ಸೈನ್ಯದ ಸಾಧನೆ ಒಂದೂ ಕಾಣುತ್ತಿಲ್ಲ. ಅನೇಕ ವೀರರಿರುವರು ಅವನ ಬಳಿ. ಆದರೆ ನಿಷ್ಠರಾದ ಅಥವಾ ಸ್ವಾಮಿಯ ಬಗೆಗೆ ಪ್ರೀತಿ ಉಳ್ಳವರು ಕಡಿಮೆ ಜನ. ಹಾಗಾಗಿಯೇ ಯುದ್ಧ ಕಾಲದಲ್ಲಿ ಅವನು ವಂಚನೆಯನ್ನು ಆಶ್ರಯಿಸುತ್ತಿದ್ದಾನೆ. ಎಷ್ಟೇ ದೊಡ್ಡ ಸೈನ್ಯವಿದ್ದರೂ ಒಡೆಯನ ಬಗೆಗೆ ಅನುರಾಗವಿಲ್ಲದಿರೆ ಪ್ರೀತಿಯಿಲ್ಲದಿರುವ ಮಡದಿಯಂತೆಯೇ ಸರಿ. ಮಡದಿ ಬಹಳ ಸುಂದರಿ, ಬುದ್ಧಿವಂತೆ ಆದರೆ ಗಂಡನ ಬಗೆಗೆ ಚೂರು ಪ್ರೀತಿಯೂ ಇಲ್ಲದಿದ್ದರೆ ಅವಳಿದ್ದೂ ಇಲ್ಲದಂತೆಯೇ ಸರಿ. ಮಹಾಸೇನನ ಕಥೆಯೂ ಹಾಗೇ ಆಗಿದೆ. ಹೆಸರಿಗೆ ತಕ್ಕಂತೆ ದೊಡ್ಡ ಸೈನ್ಯ ಇದೆ. ಆದರೆ ಯುದ್ಧದಲ್ಲಿ ಗೆಲ್ಲುವ ಧೈರ್ಯ ಅವನಿಗಿಲ್ಲ. ಏಕೆಂದರೆ ಸೈನಿಕರು ಸ್ವಾಮಿಗೇ ನಿಷ್ಠರಲ್ಲ. ಆ ವ್ಯಾಜದಿಂದಲೇ ಅವನು ವಂಚನೆಯನ್ನು ಅವಲಂಬಿಸಿ ಕೃತಕ ಆನೆಯ ಉಪಾಯದಿಂದ ವತ್ಸರಾಜನನ್ನು ಸೆರೆಹಿಡಿದಿದ್ದಾನೆ. ಹಾಗಾಗಿ ಅವನಿಗೆ ಸೈನ್ಯ ಇದ್ದೂ ಇಲ್ಲದಂತೆ ಆಗಿದೆ. ನಮ್ಮಲ್ಲೂ ಬುದ್ಧಿಶಕ್ತಿ ದೇಹಶಕ್ತಿ ಅಪಾರ ಇದ್ದರೂ ಸಮಯಕ್ಕೆ ಸರಿಯಾಗಿ ವಿನಿಯೋಗಿಸದಿದ್ದರೆ ಪ್ರದ್ಯೋತನ ಸೈನ್ಯದಂತೆ ವ್ಯರ್ಥವಾಗುವುದು. ಹೆಸರಿಗೆ ಮಾತ್ರ ಪದವಿ, ಪುರಸ್ಕಾರ ಸಾಧನೆ ಶೂನ್ಯ ಎಂದಾದೀತು. ಮಡದಿ ಮದದಿ ಇದ್ದರೆ ಸಾಲದು, ಮದನನನ್ನು ತೋರುವಳಾಗಬೇಕು. ಆಗ ಮಾತ್ರ ಅನುರೂಪ ದಾಂಪತ್ಯ ಸಾಧ್ಯ._
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ