ಕಿರಾತಾರ್ಜುನೀಯ
🌸 ಕಿರಾತಾರ್ಜುನೀಯದ ಒಂದು ಸಾಯಕ 🌸
*अभिमानवतो मनस्विन: प्रियमुच्चै: पदमारुरुक्षत: । विनिपातनिवर्तनक्षमं मतमालम्बनमात्मपौरुषम् ।।*
_ಭೀಮನ ಮಾತು . ಧರ್ಮಜ, ಯಾರಿಗೆ ತನ್ನ ವಿದ್ಯೆಯ ಬಗೆಗೆ, ಕುಲದ ಬಗೆಗೆ,ದೇಶ- ಭಾಷೆಗಳ ಬಗೆಗೆ, ತನ್ನವರ ಬಗೆಗೆ ಅಭಿಮಾನ ಇದೆಯೋ, ಯಾರು ಉನ್ನತವಾದ ಆಕಾಂಕ್ಷೆಗಳನ್ನು ಹೊಂದಿರುವರೋ, ( ಪ್ರಸಿದ್ಧಿ, ಪದವಿ, ಪ್ರಾಮುಖ್ಯತೆ, ಪ್ರತಸಂಗ್ರಹ✍ ಪ್ರತೀತಿ ಇತ್ಯಾದಿ) ಅಂತಹ ಜನರು ಎಂದಿಗೂ ಇನ್ನೊಬ್ಬರನ್ನು ಅವಲಂಬಿಸಿ ಮುಂದುವರಿಯಲಾರ. ಸ್ವಾಭಿಮಾನಿಯಾದ ಅವನು ತನ್ನ ಬಗೆಗೆ ವಿಶ್ವಾಸವನ್ನು ತಾಳಿ ಕಾರ್ಯದಲ್ಲಿ ತೊಡಗಿ ಯಶಸ್ಸು ಕಾಣುತ್ತಾನೆ. ಮಾನಿಗಳಿಗೆ ಪರರ ಅವಲಂಬನೆಯು ಭೂಷಣವಲ್ಲ, ದೂಷಣವೇ ಆಗುವುದು. ಆತ್ಮಪ್ರಯತ್ನ ಅಥವಾ ಪೌರುಷಕ್ಕಿಂತ ಮಿಗಿಲಾದ ಸಂಗತಿ ಲೋಕದಲ್ಲಿ ಬೇರಾವುದಿದೆ! ಆತ್ಮವಿಶ್ವಾಸವು, ಕಾರ್ಯದಲ್ಲಿನ ಶ್ರದ್ಧೆ ಬದ್ಧತೆಗಳು, ಸಾಧಿಸುವೆನೆಂಬ ಛಲವಿದ್ದರೆ *ನಾಸ್ತ್ಯಸಾಧ್ಯಂ ನರಾಣಾಮ್* ಎಂಬಂತೆ ಎಲ್ಲವೂ ಈಡೇರುವುದು. ಪ್ರಕೃತ ನೀನು ದುರ್ಯೋಧನನಿಂದ ಮತ್ತೆ ರಾಜ್ಯ ಪಡೆಯಲು ಬೇರೆಯವರನ್ನು ಆಶ್ರಯಿಸುವ ಯೋಚನೆ ಬಿಟ್ಟು ನಮ್ಮ ಹಾಗೂ ನಿನ್ನ ಶ್ರಮದ ಮೇಲೆ, ಬುದ್ಧಿವಂತಿಕೆಯ ಮೇಲೆ ನಂಬಿಕೆ ಇಡು. ಅದೇ ನಮಗೆ ಜಯವನ್ನು ಕರುಣಿಸುತ್ತದೆ. ಎಷ್ಟು ಸತ್ಯವಾದ ಮಾತು. ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡದೇ ಪರರನ್ನು ಅವಲಂಬಿಸಿಯೇ ಪ್ರತಿಯೊಂದು ಸಾಧಿಸಲ್ಪಡುವುದೆಂದರೆ ಅದರ ಕೀರ್ತಿಯೂ ಫಲವೂ ಪರರ ಪಾಲಾಗುತ್ತದೆ. ನಮಗೇ ಬೇಕೆಂದಾದಲ್ಲಿ ಸ್ವಂತ ಪ್ರಯತ್ನ ಮುಖ್ಯವಾಗುತ್ತದೆ.ಅವರು ಮಾಡಲಿ ಆಮೇಲೆ ನೋಡೋಣ, ಅವರು ಮಾಡುತ್ತಾರೆ ಬಿಡು, ನನ್ನ ಸಾಮರ್ಥ್ಯ ಕಡಿಮೆ ಮುಂತಾದ ಋಣಾತ್ಮಕ ಚಿಂತನೆಯನ್ನು ಬಿಟ್ಟು ಇದು ನನಗೆ ಖಂಡಿತ ಸಾಧ್ಯ ಎಂಬ ನಂಬಿಕೆ ನಮ್ಮ ಮೇಲೆ ನಮಗಿರಲಿ.ಅದೇ ಕಾರ್ಯದ ಯಶಸ್ಸನ್ನು ಗಳಿಸಿಕೊಡುತ್ತದೆ._
http://shreenidhiabhyankar.blogspot.in/
📕 ಸಂಗ್ರಹ✍ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ