ಪ್ರತಿಜ್ಞಾ ಯೌಗಂಧರಾಯಣ ೩

🔥 ಪ್ರತಿಜ್ಞಾ ಯೌಗಂಧರಾಯಣ 🔥೩

*यथा नरस्याकुलबान्धवस्य गत्वान्यदेशं गृहमागतस्य । तथा हि मे संप्रति बुद्धिशँका श्रोष्यामि किन्नु प्रियमप्रियं वा ।।*

_ಯೌಗಂಧರಾಯಣನ ಮಾತು. ರಾಜನೊಡನೆ ಹೋದ ಸೇವಕ ಮಾತ್ರ ಹಿಂತಿರುಗಿದ್ದಾನೆ. ಆದರೆ ಒಡೆಯನ ಪತ್ತೆಯೇ ಇಲ್ಲ. ಇವನು ಏನು ಹೇಳುವನೆಂಬ ಚಿಂತೆ ಕಾಡುತ್ತಿದೆ. ಕವಿ ಒಳ್ಳೆಯ ದೃಷ್ಟಾಂತ ಕೊಟ್ಟಿದ್ದಾನೆ.ಒಬ್ಬ ಬಹಳ ಕಾಲ ಮನೆಯಿಂದ ದೂರ ಹೋಗಿದ್ದನು. ಅನಂತರ ಒಂದು ದಿನ ಹಿಂತಿರುಗಿದಾಗ ಮನೆಯ ಸದಸ್ಯರು ಒಳ್ಳೆಯ ವಿಷಯ ಹೇಳುವರೋ,ಕೆಟ್ಟ ವಿಷಯ ಹೇಳುವರೋ ಎಂಬ ಶಂಕೆಯಿಂದ ಕೇಳಲು ಕುತೂಹಲ ಹೊಂದಿರುತ್ತಾನೋ ಅದರಂತೆಯೇ ಇಂದು ನನಗೂ ಸೇವಕನು ರಾಜನ ಬಗೆಗೆ ಏನು ನುಡಿಯುವನೋ ಎಂಬ ಕಾತುರ ಹೆಚ್ಚಾಗಿದೆ. ರಾಜನಿಗೆ ಏನಾದರೂ ಹೆಚ್ಚುಕಡಿಮೆ ಆಯಿತೇ, ಸೌಖ್ಯವಾಗಿರುವನೇ ಇತ್ಯಾದಿ ಶಂಕೆ ಮನದಲ್ಲಿ ಹುಟ್ಟುತ್ತಿದೆ. ಮನೆಯ ವ್ಯವಸ್ಥೆ ಏನಾದರೂ ತಪ್ಪಿತೇ,ಬಂಧುಗಳಿಗೇನಾದರೂ ಕೆಡುಕಾಯಿತೇ ಎಂಬ ಆತಂಕ ಗೃಹಸ್ಥನಿಗೆ ಕಾಡುವಂತೆ ಪ್ರಕೃತ ಯೌಗಂಧರಾಯಣನಿಗೆ ರಾಜನ ವಿಷಯದಲ್ಲಿ ಆತಂಕ ಉಂಟಾಗಿದೆ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩