🌺ಅವಿಮಾರಕದ ಒಂದು ಸಿಟ್ಟಿನ ಶ್ಲೋಕ🌺
*न भाषसे वृत्तमुपैषि रोषं निष्कारणं प्रक्षिपसि प्रकामम् | अभाजनं त्वं तपसां प्रकोपाद् ब्रह्मर्षिरूपेण भवाञ्छ्वपाक: ||*
_ಅವಿಮಾರಕನ ತಂದೆಯಾದ ಸೌವೀರರಾಜನೊಮ್ಮೆ ಬೇಟೆಗೆಂದು ಕಾಡಿಗೆ ತೆರಳಿರುತ್ತಾನೆ.ಆ ಸಮಯದಲ್ಲಿ ಚಂಡಭಾರ್ಗವ ಎಂಬ ಮಹರ್ಷಿಯನ್ನು ಸಂದರ್ಶಿಸುತ್ತಾನೆ.ಅದೇ ಸಮಯದಲ್ಲಿ ಅವನ ಶಿಷ್ಯನನ್ನು ಹುಲಿಯೊಂದು ಕೊಂದಿರುತ್ತದೆ. ರಾಜನನ್ನು ಕಂಡ ಕೂಡಲೇ ಋಷಿಯು ನಿಂದಿಸಲು ಆರಂಭಿಸುತ್ತಾನೆ.ರಾಜನು ಸ್ವಲ್ಪ ಹೊತ್ತು ಶಾಂತನಾಗಿದ್ದರೂ ಕೆಲವು ಮಾತಿನ ನಂತರ ಸಿಟ್ಟುಗೊಂಡು ಹೀಗೆ ನುಡಿಯುವನು. ನೀನು ವೃತ್ತಾಂತವನ್ನು ಸಂಪೂರ್ಣ ಅರಿಯದೇ,ನನ್ನ ಮಾತನ್ನು ಕೇಳದೇ ಕೋಪಗೊಂಡಿರುವೆ. ಕಾರಣವಿಲ್ಲದೆ ನನ್ನನ್ನು ನಿಂದಿಸುತ್ತಿರುವೆ.ನಿನ್ನ ಕೋಪದ ಕಾರಣವೇನೆಂದು ನುಡಿಯುತ್ತಿಲ್ಲ.ಈ ಅತಿಯಾದ ಕೋಪದ ಕಾರಣದಿಂದ ನೀನು ತಪಸ್ವಿಯಾಗಲು ಯೋಗ್ಯನಲ್ಲ.ನೀನು ನೋಡಲು ಬ್ರಹ್ಮರ್ಷಿಯಂತೆ ಕಂಡರೂ ನಿನ್ನ ವರ್ತನೆಯಿಂದ ಚಂಡಾಲನಾಗಿರುವೆ. ಹಾಗಾಗಿ ಬ್ರಹ್ಮರ್ಷಿರೂಪದಲ್ಲಿರುವ ಚಂಡಾಲನಾಗಿರುವೆ. ಇಲ್ಲಿ ರಾಜನು ಒಬ್ಬ ಋಷಿಯ ನಿಷ್ಕಾರಣ ಕೋಪವನ್ನು ಕಂಡು ಹೀಗೆ ನುಡಿಯುತ್ತಿರುವನು.ಹಾಗಾದರೆ ನಾವು ನಮ್ಮ ಜೀವನದಲ್ಲಿ ಎಷ್ಟೋ ಬಾರಿ ಕಾರಣವಿಲ್ಲದೆ ಕೊಪಗೊಳ್ಳುತ್ತೇವೆ ಆಗೆಲ್ಲ ನಮ್ಮ ವರ್ತನೆಯು ಚಾಂಡಾಲನಂತೆಯೇ ಸರಿ.ಸಕಾರಣವಾದರೂ ಕೋಪವು ನಮ್ಮ ನಿಯಂತ್ರಣ ಮೀರದಿದ್ದಾಗ ನಮಗೆ ಒಳಿತು.ಇಲ್ಲದಿದ್ದರೆ ನಮಗೂ ಇತರರಿಗೂ ಹಾನಿ ಖಂಡಿತ.ಹೀಗಾಗಿಯೇ ಕೃಷ್ಣನ ಮಾತು -ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್ .ನಮ್ಮ ಮಾತು ಇನ್ನೊಬ್ಬರ ಉದ್ವೇಗಕ್ಕೆ ಕಾರಣವಾಗಬಾರದು.ಸತ್ಯವೂ ಪ್ರಿಯವೂ ಕೇಳಲು ಹಾಗೂ ಜೀವನಕ್ಕೆ ಹಿತವೂ ಆಗಿರಬೇಕು.ಇದೇ ಜೀವನದ ಯಶಸ್ಸಿನ ದಾರಿ._
📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ