🌺ಅವಿಮಾರಕದ ಒಂದು ಶ್ಲೋಕ🌺
*वेदै: पितामहमहं परितोषयामि गीतै: करोमि हरिमुद्गतरोमहर्षम् | उत्पादयाम्यहरहर्विविधैरुपायै: तन्त्रीषु च स्वरगणान् कलहांश्च लोके ||*
_ನಾರದನ ಸ್ವಗತ. ನಾನು ವೇದಪಾರಾಯಣದ ಮೂಲಕ ಬ್ರಹ್ಮ ದೇವನನ್ನು ದಿನವೂ ಸ್ತುತಿಸುತ್ತೇನೆ.ಹಾಗಾಗಿ ಅವನು ಪ್ರಸನ್ನನಾಗಿರುವನು. ಗೀತೆಗಳನ್ನು ಹಾಡಿ ವಿಷ್ಣುವನ್ನು ದಿನವೂ ಸ್ತುತಿಸಿ ಒಲಿಸಿಕೊಂಡಿದ್ದೇನೆ. ಪ್ರತಿದಿನವೂ ಬೇರೆ ಬೇರೆ ಉಪಾಯಗಳಿಂದ ವೀಣೆಯ ತಂತಿಗಳನ್ನು ಮೀಟಿ ಹೊಸ ರಾಗ ಸ್ವರಗಳನ್ನು, ಜೊತೆಗೆ ರಾಗ ಹೋಗುವ ಕಲಹಗಳನ್ನು ಜನರ ಮಧ್ಯೆ ಹುಟ್ಟುಹಾಕುತ್ತೇನೆ. ಕುಂತಿಭೋಜನ ಆಸ್ಥಾನಕ್ಕೆ ಬಂದ ನಾರದನ ಮಾತಿದು.ದಿನವೂ ವೇದವನ್ನು ಓದಿ ಅಂದರೆ ಜ್ಞಾನವನ್ನು ಸಂಪಾದಿಸುತ್ತಾ ಇತರರಿಗೆ ಹಂಚುತ್ತಾ ಜ್ಞಾನ ಕಾರ್ಯ ಮಾಡಿ ಬ್ರಹ್ಮನನ್ನು ಪ್ರಸನ್ನನಾಗಿಸುವುದು.ಬಗೆಬಗೆಯ ಸ್ತೋತ್ರಗಳಿಂದ ನಾಮಸ್ಮರಣೆಯಿಂದ ವಿಷ್ಣುವಿನ ಅನುಗ್ರಹಕ್ಕೆ ನಾರದರು ಪಾತ್ರರಾಗಿದ್ದಾರೆ.ಅಷ್ಟಲ್ಲದೇ ಅವರ ಮಹತೀ ಎಂಬ ವೀಣೆಯ ನಾದ ಕರ್ಣಾನಂದಕರ.ಸಂಗೀತದ ಸರ್ವಸ್ವ ಬಲ್ಲ ದೇವಗಾನಿಗಳಲ್ಲಿ ತುಂಬುರ ನಾರದರು ಪ್ರಮುಖರು.ಇನ್ನು ಕೊನೆಯ ಲಕ್ಷಣ ನಾವೆಲ್ಲ ನಾರದರಲ್ಲಿ ಕಾಣುವಂತಹದು.ಅಥವಾ ಅದನ್ನು ಮಾತ್ರ ಗುರುತಿಸುವುದು.ಕಲಹವನ್ನು ಉಂಟುಮಾಡುವುದರ ಮೂಲಕ ದೇವರ ಬಗೆಗಿನ ಶರಣಾಗತಿಯನ್ನು ತಂದುಕೊಟ್ಟು ಮೋಕ್ಷ ಕಾರಣರಾಗುವುದು ನಾರದರೇ.ನಾವು ಸಾಮಾನ್ಯ ಜನರಲ್ಲಿ ದೇವರ ಗುಣಗಳನ್ನು ಕಂಡಿರುತ್ತೇವೆ.ಕಲಹ ಉಂಟಾದಾಗ ದೇವನೊಬ್ಬನೇ ಸರಿಯಾದ ನಂಬಿಗಸ್ಥ ಎಂಬ ಭಾವ ಬಂದು ಇಲ್ಲಿನ ವಿಷಯಗಳ ಮೇಲಿನ ರಾಗ ಕಡಿಮೆಯಾಗುವುದು.ಇನ್ನೊಂದು ಅರ್ಥ ಕಮಲೋದ್ಭವ ಬ್ರಹ್ಮ,ಲಕ್ಷ್ಮೀಪತಿ ವಿಷ್ಣು, ಹರ ಶಿವ ಮೂವರಿಗೂ ತನ್ನ ಕಾರ್ಯದಿಂದ ಪ್ರಿಯನಾದವನು ಕಲಹಪ್ರಿಯ ನಾರದ._
📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ