🌺ಅವಿಮಾರಕದ ಒಂದು ಕುಸುಮ🌺

*शापे प्रसादेषु च सक्तबुद्धि: वेदेषु गीतेषु च रक्तकण्ठ: । स्निग्धेषु वैराण्युपपाद्य यत्नात् नष्टानि कार्याणि समीकरोति ।।*

_ನಾರದರ ಬಗೆಗಿನ ಮತ್ತೊಂದು ಶ್ಲೋಕ. ಅವಿಮಾರಕನು ನಾರದರನ್ನು ನೋಡಿ ಹೇಳುವ ಮಾತು.ಶಾಪ ಕೊಡುವುದಕ್ಕೂ ,ಅನುಗ್ರಹಿಸಲಿಕ್ಕೂ ಈತ ಸದಾ ಸಮರ್ಥ.ಅವೆರಡರಲ್ಲೂ ಸಮಾನವಾದ ಭಾವ ಇವನದ್ದು.ವಿಷ್ಣು ನಾಮಸ್ಮರಣೆಯೆಂಬ ತಪಸ್ಸಿನ ಪ್ರಭಾವದಿಂದ ಶಾಪ ಕೊಡಲು,ಹಾಗೂ ಅನುಗ್ರಹಿಸಲು ಶಕ್ತನಿದ್ದಾನೆ.ಸದಾ ವೇದಗಳನ್ನು ಪಠಿಸುತ್ತಾ ,ಬೇರೆ ಬೇರೆ ಗೀತೆಗಳನ್ನು ನುಡಿಸುತ್ತಾ ತನ್ನ ಗಂಟಲನ್ನು ಮಧುರವಾಗಿಸಿದ್ದಾನೆ. ಅಥವಾ ಅವೆರಡನ್ನೂ ಗಂಟಲಿಗೆ ಅಭ್ಯಾಸಮಾಡಿಬಿಟ್ಟಿದ್ದಾನೆ.ವೇದಮಂತ್ರಗಳು ಹಾಗೂ ಸ್ತುತಿ ಮಾಡುವ ಗೀತೆಗಳಲ್ಲಿ ರಾಗ ಇದೆ ಗಂಟಲಿಗೆ.ತುಂಬಾ ಪ್ರೀತಿ ಹೊಂದಿರುವ ವ್ಯಕ್ತಿಗಳಲ್ಲಿ ವೈರವನ್ನು ಹುಟ್ಟುಹಾಕುವನು ಇವನು.ಹೀಗೆ ಮಾಡುವುದರ ಮೂಲಕ ನಷ್ಟವಾದ ಕಾರ್ಯಗಳನ್ನು ಸರಿಮಾಡುವರು.ಅವರ ಸ್ನೇಹದಿಂದಾಗಿ ಅವರಿಂದ ಆಗಬೇಕಾಗಿದ್ದ ಲೋಕೋಪಕಾರಗಳನ್ನು ವೈರದ ಮೂಲಕ ನೆನಪಿಸಿ ಮಾಡಿಸುವರು ನಾರದರು.ಹೀಗೆ ನಾರದರ ಪ್ರತಿಯೊಂದು ಕಾರ್ಯವೂ ಸದುದ್ದೇಶದಿಂದ ಕೂಡಿದೆ.ನಾವು ಶಪಿಸಲು ಅಥವಾ ಅನುಗ್ರಹಿಸಲು ಶಕ್ತಿಯನ್ನು ಸಂಪಾದಿಸದಿದ್ದರೂ ಸಿಟ್ಟಿನಿಂದ ಯಾರನ್ನೋ ಶಪಿಸುತ್ತೇವೆ ,ಕೆಲವೊಮ್ಮೆ ತಲೆಬಾಗಿದವರನ್ನು ಭಾರೀ ಅನುಗ್ರಹಿಸುವಂತೆ ನಾಟಕಮಾಡುತ್ತೇವೆ.ನಿಜವಾಗಿ ನಮ್ಮಲ್ಲಿ ಅಷ್ಟು ಸಾಮರ್ಥ್ಯ ಇದೆಯೇ ಎನ್ನುವುದು ಪ್ರಶ್ನೆ. ನಾರದರಂತೆ ಸತತ ತಪಸ್ಸು ಆ ಯೋಗ್ಯತೆಯನ್ನು ತಂದುಕೊಡುತ್ತದೆ.ಬೇರೆ ವಿಚಾರಗಳನ್ನು ಮಾತಾಡದೇ ಸದಾ ಮಂತ್ರಗಳನ್ನು ಗೀತೆಗಳನ್ನು ( ದೇವರ ಸ್ತುತಿರೂಪದ) ಹಾಡುತ್ತಾ ಸದ್ವಿಚಾರಗಳಲ್ಲೇ ಅವರ ಆಸಕ್ತಿ. ಅದೂ ವ್ಯರ್ಥವಾದ ಮಾತುಗಳಿಂದ ನಮ್ಮನ್ನು ನಾವು ಸಮರ್ಥಿಸಿಕೊಳ್ಳುವುದೋ  ಇತರರನ್ನು ನಿಂದಿಸುವುದೋ ಮಾಡುವ ಮೊದಲು ನಾರದರ ಅನುಕರಣೆ ಮಾಡಬೇಕು. ಹೆಚ್ಚು ಆತ್ಮೀಯತೆ ಇದ್ದು ಮಾಡಬೇಕಾದ ಕೆಲಸ ಮರೆತಾಗ ಅವರನ್ನು ಕಲಹದಿಂದ ಬೇರ್ಪಡಿಸಿ ಲೋಕಕ್ಕೆ ಅವರಿಂದ ಆಗಬೇಕಾದ ಕಾರ್ಯಗಳನ್ನು ಜ್ಞಾಪಿಸಿ ಲೋಕೋಪಕಾರದ ಕಾರ್ಯವನ್ನೂ ಮಾಡುವರು ನಾರದರು.ನಾವು ಕಲಹ ಹುಟ್ಟು ಹಾಕುವುದಿದ್ದರೂ ಅದು ಲೋಕಕ್ಷೇಮವನ್ನು ಬಯಸುವಂತಿರಬೇಕು.ಹಾಗಾದಾಗ ಯಾರಿಗೂ ಬೇಸರ ತರದು.ಹೀಗೆ ಎಲ್ಲೆಡೆ ನಷ್ಟವಾಗುತ್ತಿರುವ ಶಕ್ತಿಯನ್ನು ಯುಕ್ತಿಯನ್ನು ,ಉಳಿದು ಹೋಗಿರುವ ಕಾರ್ಯಗಳನ್ನು ತನ್ನ ವರ್ತನೆಯಿಂದ ಪುನರುಜ್ಜೀವನಗೊಳಿಸುವ  ಮಹತ್ತರ ಕಾರ್ಯ ಮಾಡುವ ನಾರದರ ದಿನಚರಿ ನಮಗೆಲ್ಲ ಮಾರ್ಗದರ್ಶಕ._

📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩