🌹ಶಾಕುಂತಲದ ಒಂದು ಆಶೀರ್ವಚನ🌹
*ययातेरिव शर्मिष्ठा भर्तुर्बहुमता भव । सुतं त्वमपि सम्राजं पूरुमवाप्नुहि ।।*
_ಗೌತಮಿಯ ಮಾತಿನಂತೆ ಆಶ್ರಮದಿಂದ ಹೊರಡುವ ಮುನ್ನ ಕಣ್ವರಿಗೆ ನಮಸ್ಕರಿಸುತ್ತಿದ್ದಾಳೆ ಶಕುಂತಲೆ.ಆ ಸಮಯದಲ್ಲಿ ಕಣ್ವರು ಕೊಡುವ ಆಶೀರ್ವಾದ. ಶರ್ಮಿಷ್ಠೆಯು ತನ್ನ ಪತಿ ಯಯಾತಿಯ ಬಹುಮಾನಕ್ಕೆ ಪಾತ್ರಳಾದಂತೆ ನೀನೂ ಆಗು.ಅವಳು 'ಪುರು' ಎಂಬ ಚಕ್ರವರ್ತಿಯನ್ನು ಮಗನಾಗಿ ಪಡೆದಂತೆ ನಿನಗೂ ಚಕ್ರವರ್ತಿಯಾಗುವ ಮಗ ಜನಿಸಲಿ.ಯಯಾತಿ ಪ್ರಖ್ಯಾತ ದೊರೆ.ಅವನು ಶಾಸ್ತ್ರೋಕ್ತವಾಗಿ ಕೈ ಹಿಡಿದದ್ದು ಶುಕ್ರಾಚಾರ್ಯರ ಮಗಳು ದೇವಯಾನಿಯನ್ನು.ಅವಳ ದಾಸಿಯಾಗಿ ಅವಳ ಜೊತೆಗೆ ಅಂತ:ಪುರ ಸೇರಿ ತನ್ನ ನಡತೆಯಿಂದ ಯಯಾತಿಯ ಮನಗೆದ್ದು ಗಾಂಧರ್ವರೀತಿಯಲ್ಲಿ ಅವನನ್ನು ವರಿಸಿದಳು ಶರ್ಮಿಷ್ಠೆ.ತನ್ನ ಕುಲದ ಶ್ರೇಯಸ್ಸಿಗಾಗಿ ತನ್ನ ಸುಖವನ್ನು ತ್ಯಾಗ ಮಾಡಿ ದಾಸಿಯಾಗಿ ಬಂದವಳು ಮಹಿಮಾನ್ವಿತ ಸ್ತ್ರೀ. ಅವಳ ಗುಣಗಳಿಗೆ ಮಾರುಹೋದ ಯಯಾತಿ ಅವಳಿಗೆ ಮೂವರು ಮಕ್ಕಳನ್ನು ಕರುಣಿಸಿದ.ಅದರಲ್ಲಿ ತಾಯಿಯಂತೆ ತ್ಯಾಗಜೀವಿಯಾಗಿ ಮುಂದೆ ಚಕ್ರವರ್ತಿಯಾಗಿ ಮೆರೆದವನು ಪುರು.ಅವನಂತೆಯೇ ಉತ್ತಮ ಮಗನನ್ನು ಪಡೆ ಎಂಬ ಮಾತಿನಿಂದ ತಂದೆತಾಯಂದಿರಿಗೆ ವಿಧೇಯರಾದ ಶ್ರೇಷ್ಟ ಮಕ್ಕಳು ಜನಿಸಲಿ ಎಂಬ ಆಶಯ.ಇನ್ನು 'ರಾಜಾನೋ ಬಹುವಲ್ಲಭಾ:' ಎಂಬಂತೆ ಅನೇಕ ಜನ ಪತ್ನಿಯರಿದ್ದಾಗ ಎಲ್ಲರೂ ರಾಜನ ಪ್ರಿಯರಾಗುವರೆಂಬ ನಿಶ್ಚಯವಿರುವುದಿಲ್ಲ. ಹಾಗಿದ್ದಾಗಲೂ ತನ್ನ ಉತ್ತಮ ಗುಣ ನಡತೆಯಿಂದ ಪತಿಯ ಮನಸ್ಸನ್ನು ಅರಿತು ನಡೆಯುವವಳು ಅವನಾದರಕ್ಕೆ ಪಾತ್ರಳಾಗುತ್ತಾಳೆ.ಅಂತಹ ವರ್ತನೆ ಅನುಸರಿಸಿ ಅನೇಕ ಪತ್ನಿಯರಿದ್ದರೂ ದುಷ್ಯಂತನ ಮನದನ್ನೆಯಾಗು ಎಂಬ ಆಶಯ.( ದಶರಥನಿಗೆ ಮೂವರು ಪತ್ನಿಯರಿದ್ದರೂ ಹೆಚ್ಚು ಪ್ರೀತಿ ಹೆದರಿಕೆ ಇದ್ದದ್ದು ಕೈಕೆಯಿಯಲ್ಲಿ ) ಹೀಗೆ ರಾಣಿಯರಿದ್ದರೂ ಮನದ ರಾಣಿ ನೀನೆ ಆಗು ,ನಿನ್ನ ಮನ ಪತಿಯ ಪ್ರೀತಿಯ ಕೊರತೆ ಕಾಣದಿರಲಿ ಎಂಬ ಭಾವವೂ ಕಣ್ವರ ಮಾತಿನಲ್ಲಿ ಕಾಣುವುದು._
📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ