🌹ಶಾಕುಂತಲದ ಅತಿಮುಖ್ಯ ಶ್ಲೋಕ🌹

*विचिन्तयन्ती यमनन्यमानसा तपोधनं वेत्सि न मामुपस्थितम् | स्मरिष्यति त्वां न स बोधितोपि सन् कथां प्रमत्त: प्रथमं कृतामिव ||*

_ದೂರ್ವಾಸರು ಕಣ್ವರ ಆಶ್ರಮಕ್ಕೆ ಬಂದಿದ್ದಾರೆ.ಕಣ್ವರು ಯಜ್ಞಕ್ಕಾಗಿ ಬೇರೆಡೆಗೆ ತೆರಳಿದ್ದಾರೆ.ಬಂದ ಮಹರ್ಷಿಗಳನ್ನು ಶಕುಂತಲೆ ಉಪೇಕ್ಷಿಸಿದ್ದಾಳೆ.ನಲ್ಲನ ಕನವರಿಕೆಯಲ್ಲೇ ಕಾಲ ಕಳೆಯುತ್ತಿರುವಳು.ಬಂದವರು ಕೋಪವೇ ಭೂಷಣವಾಗಿರುವ ದೂರ್ವಾಸರಾದರೂ ಅವಳ ಗಮನವೆಲ್ಲ ರಾಜನಲ್ಲೇ ಇದೆ. ಸಿಟ್ಟುಗೊಂಡ ಮಹರ್ಷಿಗಳು ನೀಡಿದ ತಾಪ ಕೊಡುವ ಶಾಪ. ಯಾರನ್ನು ಒಂದೇ ಮನಸ್ಸಿನಿಂದ ಯೋಚಿಸುತ್ತ ನಾನು ಬಂದಿದುದನ್ನು ಗಮನಿಸದೇ ನನಗೆ ಅಪಮಾನವೆಸಗಿದ್ದೀಯೋ , ಅಂತಹ ನಿನ್ನ ಮನದ ಲಹರಿಯ ವ್ಯಕ್ತಿಯು ಬುದ್ಧಿಮಾಂದ್ಯನು ಆಗಿಹೋದ ಘಟನೆಗಳನ್ನು ಮರೆಯುವಂತೆ ,ನೀನಾಗಿ ನೆನಪಿಸಿದರೂ ಅವನು ನಿನ್ನ ನೆನಪು ಪಡೆಯಲಾರ.ಇದು ದುಷ್ಯಂತ ಶಕುಂತಲೆಯರ ಸಮಾಗಮಕ್ಕೆ ಅಡ್ಡಿತಂದದ್ದು.ತಾನಾಗಿ ಸ್ಮರಿಸಲಾರ,ಯಾರಾದರೂ ನೆನಪಿಸಿದರೂ ಸ್ಮರಿಸಲಾರ.ಬುದ್ಧಿಮಾಂದ್ಯತೆ ಹೊಂದಿದ ವ್ಯಕ್ತಿ ಹೇಗೆ ತನ್ನ ಜೀವನದಲ್ಲಿ ಹಿಂದೆ ನಡೆದ ಘಟನೆಗಳನ್ನು ಸಂಪೂರ್ಣ ಮರೆಯುವನೋ ಹಾಗೆಯೇ ನಿನ್ನ ಮನದ ಅರಸನೂ ಬುದ್ಧಿವಂತನಾದರೂ ನನ್ನ ಶಾಪದಿಂದಾಗಿ ಮರೆಯುವನು.ಕಾವ್ಯಲಿಂಗ ಮತ್ತು ಉಪಮಾ ಅಲಂಕಾರ. ಮಹಾಭಾರತದಲ್ಲಿ ಈ ಶಾಪದ ಉಲ್ಲೇಖವಿಲ್ಲ.ಹಾಗಾಗಿ ದುಷ್ಯಂತನು ರಾಜರ್ಷಿಯೆಂದು ಒಪ್ಪಲು ತಿರಸ್ಕರಿಸುವ ಘಟನೆ ಅಡ್ಡ ಬರುವುದು.ಅದಕ್ಕಾಗಿ ಕಾಳಿದಾಸನು ಶಾಪವನ್ನು ಸೃಷ್ಟಿಸಿ ದುಷ್ಯಂತನ ಪಾತ್ರಕ್ಕೆ ಮೆರಗು ಕೊಟ್ಟಿರುವನು.ಶಾಪದಿಂದಾಗಿ ಮರೆತ ಎಂದರೆ ಜನರು ತಪ್ಪುತಿಳಿಯರಾರರು,ದುಷ್ಯಂತನ ಶ್ರೇಷ್ಠತೆಗೂ ಭಂಗ ಬಂದಿಲ್ಲ._

 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩