🌺ಅವಿಮಾರಕದ ಸುಂದರ ಕುಸುಮ🌺

 *न ते न बुद्धिर्मम दूषणीया येन प्रकामं भवितास्मि हास्य:| प्राज्ञस्य मूर्खस्य च कार्ययोगे समत्वमभ्येति तनुर्नबुद्धि: ||*

_ಅವಿಮಾರಕ  ಹಾಗೂ ಕುರಂಗಿಯರ ಮಿಲನವಾಗಿ ಅಶ್ರುಬಾಷ್ಪಗಳನ್ನು ಸುರಿಸುತ್ತಿರುವರು. ವಿದೂಷಕನು ಅವರನ್ನು ನೋಡಿ ತನಗೆ ಕಣ್ಣೀರು ಬರುವುದಿಲ್ಲ ಎಂದು ಹಾಸ್ಯ ಮಾಡುವನು.ಆಗ ತಮಾಷೆ ಸಾಕೆಂದು ಅವಿಮಾರಕನು ನುಡಿಯುವ ಮಾತು.ಸ್ನೇಹವೆಂದರೆ ಬಿಡಿಸಲಾಗದ ಬಂಧ. ಈ ವಿಷಯದಲ್ಲಿ ನಿನ್ನ ಅಥವಾ ನನ್ನ ಬುದ್ಧಿಯನ್ನು ದೂಷಿಸಿ ಪ್ರಯೋಜನವಿಲ್ಲ.ನಮ್ಮ ಇಷ್ಟು ದಿನದ ಅವಸ್ಥೆ ಅದು ವಿಧಿ ಲಿಖಿತ. ಅದಕ್ಕಾಗಿ ದೂಷಣೆ ಸಲ್ಲ. ಹಾಗೆ ಹೇಳಿದರೆ ನನ್ನ ಕಾರ್ಯಗಳನ್ನು ನೀನು ಉಪಹಾಸ್ಯ ಮಾಡುವೆ. ಏಕೆಂದರೆ ಕೆಲಸ ಮುಗಿದಾಗ ಬುದ್ಧಿವಂತನ ಹಾಗೂ ಮೂರ್ಖನ ದೇಹ ಒಂದೇ ರೀತಿಯಲ್ಲಿ ಶ್ರಮಿಸಿರುತ್ತದೆ.ಆದರೆ ಬುದ್ಧಿ ಯಲ್ಲ. ನಾನು ಸಾಹಸ ಮಾಡಿ ದೈಹಿಕವಾಗಿ ತುಂಬಾ ಶ್ರಮಪಟ್ಟಿರುವುದು ಸತ್ಯವೇ ಆದರೂ ನಿನ್ನ ಬುದ್ಧಿವಂತಿಕೆ ನನ್ನ ಪ್ರಯತ್ನಕ್ಕೆ ಸಹಕಾರಿಯಾಗಿದೆ. ಹಾಗಾಗಿ ನಮ್ಮಿಬ್ಬರ ಸ್ನೇಹವು ಇದನ್ನು ಸಾಧ್ಯವಾಗಿಸಿದೆ.ಇಲ್ಲಿ ವಿದೂಷಕನು ಹೆಚ್ಚು ಪ್ರಯತ್ನ ಪಡದಿದ್ದರೂ ರಾಜನು ತನ್ನ ಗೆಳೆಯನನ್ನು ಬಿಟ್ಟುಕೊಡಲಾರ.ತನ್ನ ಪ್ರೀತಿ ಫಲಿಸಿದ್ದಕ್ಕೆ ಅವನೂ ಕಾರಣವೆಂದು ಹೊಗಳುತ್ತಿರುವನು.ಗೆಳೆತನದ ವಿಶಾಲತೆಯೇ ಅದು.ಕಾರ್ಯ ಯಶಸ್ಸು ಪಡೆಯಲು ಇಂತಹ ಆದರ್ಶ ಗೆಳೆತನ ಮುಖ್ಯ ಕಾರಣ ಎಂಬ ಭಾವ ಕವಿಯದ್ದು._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩