ಮಹಾಭಾರತದ ಕೆಲವು ಉತ್ತಮ ಶ್ಲೋಕಗಳು

*आपदस्तरणे प्राणान्धारयेद्येन येन हि । सर्वमादृत्य कर्तव्यं तद्धर्ममनुवर्तता ।।*

_ಹಿಡಿಂಬೆ ಧರ್ಮಜನನ್ನು ಉದ್ದೇಶಿಸಿ ಹೇಳುವ ಮಾತು.ಆಪತ್ತನ್ನು ದಾಟುವುದಕ್ಕೆ ಯಾವ ಯಾವ ಉಪಾಯದಿಂದ ಪ್ರಾಣರಕ್ಷಣೆ ಮಾಡಿಕೊಳ್ಳಬಹುದೋ ಅದೆಲ್ಲವನ್ನೂ ಧರ್ಮಾಚರಣೆ ಮಾಡುವ ನರನು ಆದರಪೂರ್ವಕವಾಗಿ ಮಾಡಬೇಕು.ಆಪತ್ತಿನಲ್ಲಿ ದೈವವೇ ತನ್ನನ್ನು ರಕ್ಷಿಸುವುದು ಅಥವಾ ತಾನು ಮಾಡಿದ ಕರ್ಮವೇ ಕಾಪಾಡುವುದು ಎಂದೆಲ್ಲ ಯೋಚಿಸದೇ ಆಪತ್ತಿನಿಂದ ಪಾರಾಗುವ ಬಗೆ ಹೇಗೆ ಎಂದು ಆಲೋಚಿಸುವುದು ಆಪದ್ಧರ್ಮ ಎನಿಸುತ್ತದೆ._

*आपत्सु यो धारयति धर्मं धर्मविदुत्तम: । व्यसनं ह्येव धर्मस्य धर्मिणामापदुच्यते ।।*
_ಅನೇಕ ಆಪತ್ತುಗಳಲ್ಲಿಯೂ ತನ್ನ ಧರ್ಮವನ್ನು ಯಾರು ರಕ್ಷಿಸುವನೋ ಅವನೇ  ಉತ್ತಮನಾದ ಧರ್ಮಜ್ಞ. ಧರ್ಮಿಷ್ಠರಾದವರಿಗೆ ಧರ್ಮಹಾನಿಯೇ ದೊಡ್ಡ ಆಪತ್ತೆನಿಸುತ್ತದೆ.ತನಗೆ ಆಪತ್ತು ಒದಗಿಬಂದಾಗಲೂ ಇನ್ನೊಬ್ಬರ ಆಪತ್ತು ಪರಿಹರಿಸಲು ಪ್ರಯತ್ನಿಸುವುದು ಧರ್ಮ.ಹೀಗಾಗಿಯೇ ಅಪಘಾತ ಭೂಕಂಪ ಸುನಾಮಿ ಅಥವಾ ಅವಘಡಗಳೇನಾದರೂ ಸಂಭವಿಸಿದಾಗ ಅವರ ರಕ್ಷಣೆಯೇ ಮುಖ್ಯ ಧರ್ಮ._

*पुण्यं प्राणान्धारयति पुण्यं प्राणदमुच्यते । येन येनाचरेद्धर्मं तस्मिन्गर्हा न विद्यते ।।*

_ಪುಣ್ಯವೇ ಪ್ರಾಣಗಳನ್ನು ರಕ್ಷಿಸುತ್ತದೆ.ಪುಣ್ಯವೇ ಪ್ರಾಣಪ್ರದವೆನ್ನುತ್ತಾರೆ. ಯಾವ ಯಾವ ವಿಧಾನದಿಂದ  ಪುಣ್ಯಸಂಪಾದನೆಯ ಧರ್ಮವನ್ನು ಆಚರಿಸಿದರೂ ಅದರಲ್ಲಿ ದೋಷವಿರುವುದಿಲ್ಲ.ಎಷ್ಟು ಒಳ್ಳೆಯ ಮಾತಲ್ಲವೇ.ನಾನು ರಾಕ್ಷಸಿ ಎಂದೆಲ್ಲ ನೀವು ಯೋಚಿಸದೇ ನನ್ನ ಗುಣ ರೂಪಗಳನ್ನು ನೋಡಿ ಭೀಮನ ಮಡದಿಯಾಗಿ ಸ್ವೀಕರಿಸಿ ಎಂಬ ನಯದ ಮಾತು.ಅವಳ ಮಾತುಗಳು ನಮಗೂ ಪ್ರೇರಕವಲ್ಲವೇ._

ಸಂಗ್ರಹ 📜ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩