🌹ಶಾಕುಂತಲದ ಸುಂದರ ಸುಮ🌹
*तस्या: पुष्पमयी शरीरलुलिता शय्या शिलायामियं क्लान्तो मन्मथलेख एष नलिनीपत्रे नखैरर्पित: | हस्ताद्भ्रष्टमिदं बिसाभरणमित्यासज्यमानेक्षणो निर्गन्तुं सहसा न वेतसगृहाच्छक्नोमि शून्यादपि ||*
_ಶಕುಂತಲೆ ಗೌತಮಿಯ ಆಜ್ಞೆಯಂತೆ ತೆರಳಿದ್ದಾಳೆ.ಅವಳಿಲ್ಲದ ಆ ನಲಿನೀಗೃಹ ಅಥವಾ ಬೆತ್ತದ ಮಂಟಪ ದುಷ್ಯಂತನಿಗೆ ಕಾಣುವುದು ಹೀಗೆ. ಇಲ್ಲಿ ಶಿಲೆಯ ಮೇಲೆ ಅವಳ ಶರೀರದ ಭಾರಕ್ಕೆ ಮುದುಡಿದ ಈ ಹೂವಿನ ಹಾಸಿಗೆಯಿದೆ. ಕಮಲದ ಎಲೆಯ ಮೇಲೆ ತನ್ನ ಕೋಮಲ ನಖಗಳಿಂದ ಗೀಚಿದ ಆದರೂ ಬಾಡಿದ ಪ್ರೇಮಪತ್ರವಿದೆ.ಪ್ರೀತಿಗಾಗಿ ಹಂಬಲಿಸಿ ಆಹಾರ ಬಿಟ್ಟು ಕೃಶವಾದ ಕೈಯಿಂದ ಜಾರಿದ ಕಮಲದ ದಂಟಿನಿಂದ ಮಾಡಿದ ಕಳಚಿಬಿದ್ದ ಬಳೆ ಇಲ್ಲಿದೆ. ಹೀಗೆ ಅವಳಿಲ್ಲದಿದ್ದರೂ ಕಣ್ಣುಗಳು ಅವಳಿರುವಂತೆಯೇ ಆಸಕ್ತವಾಗಿರುವುದರಿಂದ ಈ ಬೆತ್ತದ ಮಂಟಪದಿಂದ ಕೂಡಲೇ ಹೊರಡಲು ಶಕ್ತನಾಗುತ್ತಿಲ್ಲ.ಪ್ರಿಯಳು ಸಮೀಪದಲ್ಲಿ ಇಲ್ಲದಿದ್ದಾಗ ಅವಳು ಉಪಯೋಗಿಸುವ ವಸ್ತುಗಳಲ್ಲೆಲ್ಲ ಅವಳನ್ನೇ ಕಾಣುವನು ಪ್ರಿಯತಮ.ಪ್ರಕೃತ ಸಂದರ್ಭದಲ್ಲಿ ಶಕುಂತಲೆ ಇಲ್ಲದಿದ್ದರೂ ಅವಳು ಮಲಗಿದ ಹೂವಿನ ಹಾಸಿಗೆಯಿದೆ. ಕಾಮಪೀಡೆಯಿಂದ ಅವಳು ಮುದುಡಿದಂತೆ ಅವಳಿಗೆ ಆಶ್ರಯಕೊಟ್ಟ ಈ ಹೂವಿನ ಪಲ್ಲಂಗ ಮುದುಡಿದೆ.ನನಗಾಗಿ ಅತ್ಯಂತ ಪ್ರೀತಿಯಿಂದ ಮನದ ಭಾವನೆಗಳನ್ನು ಅಕ್ಷರ ರೂಪಕ್ಕಿಳಿಸಿದ ಉಗುರುಗಳಿಂದ ಅಕ್ಷರಗಳಿಗೆ ರೂಪ ಕೊಟ್ಟ ಪ್ರೇಮಪತ್ರವಿದೆ. ಅದು ಬಿಸಿಲಿಗೆ ಬಾಡಿದ್ದರೂ ( ಕಮಲದ ಎಲೆಯಾದ್ದರಿಂದ) ಅಕ್ಷರಗಳು ಇನ್ನೂ ಕ್ಷರವಾಗಿಲ್ಲ.ಭಾವರಹಿತವಾಗಿಲ್ಲ. ಅವಳನ್ನೇ ಸ್ಪರ್ಶಿಸಿದ ಅನುಭವ ಕೊಡುತ್ತಿರುವ ಈ ಬಳೆ ನನ್ನ ವಿರಹದ ದು:ಖವನ್ನು ಮರೆಮಾಚುತ್ತಿದೆ.ಹೀಗೆ ಕಣ್ಣುಗಳು ಅವಳ ಮನದ ಪ್ರೇರಣೆಯಂತೆ ಮತ್ತೆ ಮತ್ತೆ ಅವಳನ್ನು ಇಲ್ಲಿ ಕಾಣುತ್ತಿರುವುದರಿಂದ ( ಅವಳ ಸ್ಪರ್ಶ ಅಲ್ಲೆಲ್ಲ ಹರಡಿರುವುದರಿಂದ ಅವಳೇ ಇದ್ದ ಹಾಗೆ) ಇದು ನಿಜ ಜಗತ್ತಿಗೆ ಶೂನ್ಯವಾಗಿದ್ದರೂ ನನಗೆ ಪೂರ್ಣವೆಂಬಂತೆ ತೋರುತ್ತಿದೆ.ಹಾಗಾಗಿ ಹೋಗಲು ಮನಸ್ಸಾಗುತ್ತಿಲ್ಲ.ನಮಗೂ ಆಪ್ತರು ಯಾರಾದರೂ ಅಗಲಿದರೆ,ದೂರಹೋದರೆ ಇದೇ ಭಾವನೆ ಹುಟ್ಟುವುದಲ್ಲವೇ! ಅವರ ಬಳಕೆಯ ವಸ್ತುಗಳು,ಶಬ್ದಗಳು ನಮ್ಮಿಂದ ದೂರ ಹೋಗಲಾರವು.ವಿಭಾವನಾ ಮತ್ತು ವಿಶೇಷೋಕ್ತಿ ಅಲಂಕಾರಗಳು._
📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ