🌹🌹🌹🌹🌹🌹🌹🌹
🌹ಶಾಕುಂತಲದ ಸುಂದರ ಕುಸುಮ🌹
*यास्यत्यद्य शकुन्तलेति हृदयं संस्पृष्टमुत्कण्ठया कण्ठ: स्तम्भितबाष्पवृत्तिकलुषश्चिन्ताजडं दर्शनम् | वैक्लव्यं मम तावदीदृशमिदं स्नेहादरण्यौकस: पीड्यन्ते गृहिण: कथं नु तनयाविश्लेषदुखैर्नवै: ||*
_ಕಣ್ವರು ಮುಂಜಾನೆಯ ಕರ್ಮಗಳನ್ನು ಮುಗಿಸಿ ಬಂದಿದ್ದಾರೆ.ಶಕುಂತಲೆಯನ್ನು ಪತಿಯ ಮನೆಗೆ ಕಳುಹಿಸಿಕೊಡಲು ನಿಶ್ಚಯಿಸಿದ್ದಾರೆ.ಅವರ ಭಾವ ಕಟ್ಟಿಕೊಡುವ ಸುಂದರ ಮಾತು ಇದು.ಇಂದು ಶಕುಂತಲೆ ಹೊರಡುವಳು ಎಂದು ನನ್ನ ಮನವು ಕಾತರತೆಯಿಂದ ಕೂಡಿದೆ.ಕಣ್ಣೀರುಗಳನ್ನು ತಡೆಹಿಡಿದಿದ್ದರಿಂದ ನನ್ನ ಕುತ್ತಿಗೆ ಬಿಗಿದಿದೆ. ಚಿಂತೆಯಿಂದ ದೃಷ್ಟಿ ಮಂದವಾಗಿದೆ.ಅರಣ್ಯವಾಸಿಯಾದ ನನಗೇ ಇಷ್ಟೊಂದು ದು:ಖ ಉಂಟಾಗಿರುವಾಗ ಮಗಳ ಅಗಲುವಿಕೆಯಿಂದ ಉಂಟಾಗುವ ದು:ಖದಿಂದ ಸಾಮಾನ್ಯ ಗೃಹಸ್ಥಾಶ್ರಮಿಗಳು ಎಷ್ಟು ಕಷ್ಟಪಡುವರೋ! ಶಾಕುಂತಲದ ಮುಖ್ಯ ನಾಲ್ಕು ಶ್ಲೋಕಗಳಲ್ಲಿ ಇದೂ ಒಂದು. ಇದರಲ್ಲಿ ವ್ಯಕ್ತವಾಗುವ ಭಾವನೆಗಳು ಸಾರ್ವಕಾಲಿಕ ಸಾರ್ವದೇಶಿಕ ಅನುಭವ ಸಾಕ್ಷಿಕವಾದವು.ಹೃದಯಸ್ಪರ್ಶಿ ಶ್ಲೊಕವಿದು.ಪ್ರೀತಿಯಿಂದ ಬೆಳೆಸಿದ ಮಗಳನ್ನು ಪತಿಯ ಮನೆಗೆ ಕಳುಹಿಸುವಾಗ ಎಲ್ಲಾ ತಂದೆ-ತಾಯಂದಿರಿಗೆ ಉಂಟಾಗುವ ಭಾವನೆ ಇಲ್ಲಿ ಮಾರ್ಮಿಕವಾಗಿ ವ್ಯಕ್ತವಾಗಿದೆ.ಶಕುಂತಲೆ ಹೋಗುವಳೆಂಬ ವಿಷಯವೇ ಹೃದಯತುಂಬಿಬರುವಂತೆ ಮಾಡುತ್ತಿದೆ.( ಇನ್ನು ಅವಳು ಇಲ್ಲೇ ಆಡಿಕೊಂಡಿರಲಾರಳು ) ಕಣ್ಣೀರುಗರೆದರೆ ಏನೆಂದುಕೊಂಡಾರೋ ಶಕುಂತಲೆ ಆದಿಯಾಗಿ ಎಂದು ಅಲ್ಲೇ ತಡೆಯಲ್ಪಟ್ಟ ಕಣ್ಣೀರಿನಿಂದ ಗಂಟಲುಕಟ್ಟಿದೆ.( ಏನೊಂದು ಮಾತೂ ಹೊರಡುತ್ತಿಲ್ಲ.) ಕಣ್ಣೀರು ತುಂಬಿದ ದೃಷ್ಟಿ ಮಂಜಾಗಿದೆ.ಮನವು ಚಿಂತೆಯಿಂದ ವ್ಯಾಪ್ತವಾಗಿರುವುದರಿಂದ ಇಂದ್ರಿಯಗಳು ತಮ್ಮ ತಮ್ಮ ವಿಷಯ ಗ್ರಹಿಸಲಾರವು.ಚಿಂತೆಯಿಂದ ಜಡವಾಗಿವೆ.ಅರಣ್ಯದಲ್ಲಿ ವಾಸಮಾಡುತ್ತಾ ವೈರಾಗ್ಯವೇ ಸಾಧನವಾಗಿರುವ ಅಷ್ಟಾಗಿ ಭಾವನಾಪ್ರಧಾನವಲ್ಲದ ನನಗೇ ಇಷ್ಟು ದು:ಖ ಕಾಡುತ್ತಿರುವಾಗ ಹೊತ್ತು ಹೆತ್ತು ಆಟಪಾಠ ನೊಡಿ ಆನಂದಿಸುತ್ತಾ ಕಣ್ಣೆದುರೇ ಬೆಳೆದ ಮಗಳನ್ನು ಧಾರೆ ಎರೆಯುವಾಗ ಭಾವನೆಯೇ ಉಸಿರಾಗಿರುವ ಲೋಕದ ಗೃಹಸ್ಥರ ಪಾಡೇನು! ಅವರು ಎಷ್ಟು ಕ್ಲೇಶಪಡುವರೇನೋ!ಹೀಗೆ ಕಣ್ವರು ವಿಸ್ಮಯ ವ್ಯಕ್ತಪಡಿಸುತ್ತಾರೆ.ಅರ್ಥಾಪತ್ತಿ ಅಲಂಕಾರ.ತಾನು ಬೇಸರಗೊಂಡರೂ ಲೋಕದ ಜನರ ಬೇಸರ ಎಷ್ಟು ಮಹತ್ತೆಂಬ ಉದಾರತೆ ಕಣ್ವರ ಮಾತಿನಲ್ಲಿ ಕಂಡುಬರುತ್ತದೆ.ಲೋಕದ ಕಣ್ಣೀರು ಕಂಡು ದು:ಖಪಡುವ ಋಷಿಯ ಮನಸ್ಸು ಅದು.ಪ್ರತಿಯೊಬ್ಬ ಕನ್ಯಾಪಿತನಿಗೂ ಈ ಸಂದರ್ಭ ಬಹಳ ದು:ಖದಾಯಕ._
*📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್*

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ