🌺ಅವಿಮಾರಕದ ಒಂದು ಸುಮ🌺
*दृष्ट्वा तदानीं गजसंभ्रमे मां मद्विक्रमं ये परिकीर्तयन्ति | ते किन्नु वृत्तान्तमिमं विदित्वा चारित्रदोषं मयि पातयन्ति ||*
_ಅವಿಮಾರಕನು ತನ್ನಲ್ಲೇ ಹೇಳಿಕೊಳ್ಳುವ ಮಾತು.ಹಿಂದೆ ಅರಮನೆಯ ಉದ್ಯಾನದಲ್ಲಿ ಆನೆಯೊಂದು ಮದವೇರಿ ಎಲ್ಲವನ್ನೂ ದಮನ ಮಾಡಿ ರಾಜಕುಮಾರಿಯನ್ನು ಬೆನ್ನಟ್ಟಿ ಬಂದು ಎಲ್ಲರ ಆತಂಕಕ್ಕೆ ಕಾರಣವಾದಾಗ ನಾನು ಅವಳನ್ನು ರಕ್ಷಿಸಿ ಪರಾಕ್ರಮಿ ಎನಿಸಿದ್ದೆ.ಅಂದು ಆರಂಭವಾದ ಅವಳ ಮೇಲಿನ ಅನುರಾಗ ಇಂದು ಹೇಗಾದರೂ ಜೊತೆ ಸೇರಬೇಕೆಂದು ಬಯಸಿದೆ.ಆಗ ನನ್ನ ಪರಾಕ್ರಮವನ್ನು ಅನೇಕರು ಹೊಗಳಿದ್ದರು.ಆದರೆ ಈಗ ಪ್ರಿಯಳಿಗಾಗಿ ಮಾಯಾ ಉಂಗುರವನ್ನು ಧರಿಸಿ ಅವಳ ಅಂತ:ಪುರ ಸೇರಿದ ನನ್ನ ಕಾರ್ಯವನ್ನು ನೋಡಿ ನನ್ನ ನಡತೆಯನ್ನು ದೂಷಿಸಲಾರರೇ! ಹಿಂದೆ ಯಾರು ಗಜಸಂಭ್ರಮದ ರಕ್ಷಕನೆಂದು ಸ್ತುತಿಸಿದ್ದರೊ ಅವರೇ ಇಂದು ಈ ನನ್ನ ಮಾಯಾವೇಷದ ವೃತ್ತಾಂತ ಅರಿತು ನನ್ನ ನಡತೆಯನ್ನು ತೆಗಳಬಹುದೇ ! ಅಥವಾ ಈ ಕಾಮ ಪೀಡಿತರ ಹಣೆಬರಹವೇ ಇಷ್ಟು ಎನ್ನಬಹುದೇನೊ ! ವಿದ್ಯಾಧರನ ಅನುಗ್ರಹ ವಿಶೇಷವಾದ ಮಾಯಾ ಅಂಗುಲೀಯಕ ಧರಿಸಿ ಬಂದದ್ದು ಅವಳನ್ನು ಪಡೆದದ್ದು ಹೌದು ಆದರೆ ಜನರು ಇದನ್ನು ಸರಿಯೆನ್ನುವರೇ ಎನ್ನುವ ಆತಂಕ ನಾಯಕನ ಮನದ ಭಾವ.ನಮ್ಮ ಅನೇಕ ವರ್ತನೆಗಳು ಹಾಗೆಯೇ ಇರುತ್ತವೆ.ಆ ಕಾಲದ ಒತ್ತಡವೋ ,ಮಹಿಮೆಯೋ ,ನಮ್ಮ ಅಸಡ್ಡೆಯೋ ತಿಳಿದೂ ಅನೇಕ ಕಾರ್ಯಗಳನ್ನು ಮಾಡಿರುತ್ತೇವೆ.ಅದು ನಮಗೆ ಮಾತ್ರ ಒಪ್ಪಿಗೆಯಾದರೆ ಸಾಕೆ,ಉಳಿದವರು ಒಪ್ಪಿಯಾರೆ ಎನ್ನುವುದನ್ನು ನಾವು ಯೋಚಿಸುವುದಿಲ್ಲ.ಹೀಗಾಗಿಯೇ ಕೆಲವು ತಪ್ಪು ಕಾರ್ಯಗಳು ನಮ್ಮಿಂದ ಘಟಿಸುವವು ಅನುದಿನ.ಇದಕ್ಕಾಗಿಯೇ ಹಿರಿಯರು ಹೇಳಿದ್ದು - *ಪ್ರತ್ಯಹಂ ಪ್ರತ್ಯವೇಕ್ಷೇತ ನರಶ್ಚರಿತಮಾತ್ಮನ:* ಪ್ರತಿದಿನವೂ ತಾನು ಮಾಡಿದ ಕೆಲಸವನ್ನು ಮತ್ತೆ ಮತ್ತೆ ವಿಚಾರಿಸಬೇಕು.ಎಷ್ಟು ಸರಿ ಎಷ್ಟು ತಪ್ಪು ಎಂಬುದಾಗಿ.ಹೀಗೆ ಮಾಡಿದಾಗ ವರ್ತನೆ ಸದ್ವರ್ತನೆ ಆದೀತೇನೊ._
📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ