🌺ಅವಿಮಾರಕದ ಒಂದು ಸುಮ🌺
*सव्ये करे समुपवेश्य मुखं सुदीनं कालं मनोभवसहायममृषमाणा | व्यग्रा विचिन्तयति किञ्चिदलोलदृष्टि बाष्पं निवारयितुं ऊर्ध्वमवेक्षमाणा ||*
_ಅವಿಮಾರಕನು ತನ್ನ ಪ್ರಿಯಳ ಅವಸ್ಥೆಗಳನ್ನು ವರ್ಣಿಸುತ್ತಿರುವನು. ಸುಂದರ ಕವಿ ಕಲ್ಪನೆ. ಕುರಂಗಿಯು( ನಾಯಕಿ) ತನ್ನ ದು:ಖದಿಂದ ಬಸವಳಿದ ಅಥವಾ ಕಳಾಹೀನವಾದ ಮೊಗವನ್ನು ಎಡಗೈಯಲ್ಲಿ ಇರಿಸಿ ಅಥವಾ ಆನಿಸಿ ,ಕಾಮನ ಗೆಳೆಯನಾದ ಮಳೆಗಾಲದ ಈ ಸಮಯದಲ್ಲಿ ಪ್ರಿಯನ ವಿರಹವೇದನೆಯನ್ನು ತಾಳದೆ ಸದಾ ಅತ್ತಿತ್ತ ನೋಟ ಬೀರುತ್ತಿದ್ದ ಕಣ್ಣುಗಳ ನೋಟ ಇಂದು ಒಂದೇ ಕಡೆ ಬೀರುತ್ತಾ, ಅಥವಾ ಪ್ರಿಯನನ್ನೇ ಧ್ಯಾನಿಸುತ್ತಾ ಎಲ್ಲೋ ನೆಟ್ಟದೃಷ್ಟಿಯುಳ್ಳವಳಾಗಿ ,ಈ ಸ್ಥಿತಿಯಿಂದ ಮನಕ್ಕೆ ಸಮಾಧಾನವಿಲ್ಲದೆ ಮನದ ವ್ಯಾಪಾರ ಕೆಟ್ಟುಹೋದವಳಾಗಿ ( ವ್ಯಗ್ರಳಾಗಿ) ,ನಿರಂತರವಾಗಿ ಹರಿಯುತ್ತಿರುವ ಕಣ್ಣೀರನ್ನು ತಡೆಯಲೆಂಬಂತೆ ಮೇಲೆ ನೋಡುತ್ತಿರುವ ಇವಳ ಅವಸ್ಥೆಯನ್ನು ಏನೆಂದು ವರ್ಣಿಸಲಿ! ಇಲ್ಲಿ ಕವಿ ಒಂದೊಳ್ಳೆ ಚಿತ್ರವನ್ನು ಬರೆದಂತೆ ವರ್ಣಿಸಿದ್ದಾನೆ ವಿರಹದಲಿ ಬಳಲಿದ ಬಾಲೆಯನ್ನು.ಚಿಂತೆಯಿಲ್ಲ ಮುಳುಗಿದಾಗ ಎಡಗೈ ಅನಿಸಿ ಯೋಚಿಸುವುದು ಸಹಜ. ಕಾಮನಿಗೆ ಮನೋಭವ ಎಂಬ ಹೆಸರು ಮನದಲ್ಲೇ ಹುಟ್ಟುವ ಬಯಕೆಗಳು ಎಂಬ ಧ್ವನಿ ಅಡಗಿದೆ. ಅಮೃಷ್ಯಮಾಣಾ ಎಂದರೆ ಆ ವಿರಹವು ಸಹಿಸಲು ಅಸಾಧ್ಯ ಎಂದು. ವ್ಯಗ್ರತೆ ಎಂದರೆ ಕೋಪಗೊಳ್ಳುವುದಲ್ಲ ಪ್ರಕೃತ. ಅದು ಮನದ ಸಹಜತೆಯನ್ನು ಹಾಳುಮಾಡಿದ ಸ್ಥಿತಿ. ಅದರಿಂದಾಗಿ ಕೋಪವೊ ತಾಪವೋ ಉಂಟಾಗಬಹುದು. ಸದಾ ಚಂಚಲಾಕ್ಷಿಯರು ಬೆಡಗಿಯರು.( ಅವರನ್ನು ಕಂಡಾಗ ತರುಣರೂ) ಆದರೆ ಪ್ರಕೃತ ಅಲೋಲದೃಷ್ಟಿ ನಾಯಕಿಗೆ. ಎಲ್ಲೋ ದೃಷ್ಟಿ ನೆಟ್ಟಿದ್ದಾಳೆ.( ಈ ಲೋಕದಲ್ಲಿ ಇದ್ದ ಹಾಗಿಲ್ಲ ಎಂದು ನಾವು ನುಡಿಯುವಂತೆ) ಕಣ್ಣೀರುಗರೆಯುವುದು ತಿಳಿಯಬಾರದೆಂದು ಮೇಲೆ ನೋಡುತ್ತಿರುವಳು ಅಥವಾ ದು:ಖವನ್ನು ತಡೆಯಲು ಪ್ರಯತ್ನಿಸುತ್ತಿರುವಳು. ಅತ್ತರೆ ಎಲ್ಲಿ ಪರಿಜನರು ಸಾಂತ್ವನ ನೀಡುವರೊ ಎಂಬ ಭಾವದಲ್ಲಿ ಕಣ್ಣು ಮೇಲಿದೆ. ಒಟ್ಟಾರೆ ಅವಳ ಆ ಸ್ಥಿತಿ ನಿಜಕ್ಕೂ ಶೋಚನೀಯ._
✍ಸಂಗ್ರಹ📜ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ