🌺ಅವಿಮಾರಕದ ಒಂದು ಗೆಳೆತನದ ಸೆಳೆತದ ಶ್ಲೋಕ🌺
*किं प्रेक्षसे मम मुखं चिरकालदृष्टो गाढं परिष्वज सखे स्मर बालभावम् | प्रीत्या भवन्तमनिवेषमवेक्षितुं मे स्नेहान्नवीकृत इवाद्य वयस्यभाव: ||*
_ಕುಂತಿಭೋಜ ಮತ್ತು ಸೌವೀರರಾಜರು ಬಹುಕಾಲದ ನಂತರ ಭೇಟಿಯಾಗಿದ್ದಾರೆ. ಅವರ ಗೆಳೆತನ ಮೊದಲಿಗೆ ಗಾಢವಾಗಿತ್ತು.ಬಹುಕಾಲದ ನಂತರ ಗೆಳೆಯನನ್ನು ನೋಡುತ್ತಾ ಸೌವೀರರಾಜನು ಮಾತನಾಡುವುದನ್ನು ಮರೆತು ಹಾಗೆಯೇ ನಿಂತುಬಿಡುತ್ತಾನೆ.ಆಗ ಕುಂತಿಭೋಜನಾಡುವ ಮಾತು. ಏನು ಗೆಳೆಯ ಸುಮ್ಮನೇ ನೋಡುತ್ತ ನಿಂತುಬಿಟ್ಟಿರುವೆಯಲ್ಲ.ನಿನ್ನನ್ನು ಭೇಟಿಯಾಗದೇ ಕಾಲ ದೂರ ಹೋಗಿದ್ದು ನಿಜವೇ.ನಮ್ಮ ಗೆಳೆತನಕ್ಕೆ ಸಾಕ್ಷಿಯೆಂಬಂತೆ ನನ್ನನ್ನು ಒಮ್ಮೆ ಗಾಢವಾಗಿ ಆಲಿಂಗಿಸು. ಆ ಚಿಕ್ಕ ವಯಸ್ಸಿನಲ್ಲಿ ನಾವು ಮಾಡಿದ ಬಾಲ್ಯಲೀಲೆಗಳನ್ನು ನೆನಪಿಗೆ ತಂದುಕೊ. ಗಟ್ಟಿಯಾಗಿ ಅಪ್ಪಿಹಿಡಿದು ನಮ್ಮೆಲ್ಲಾ ತುಂಟತನಗಳನ್ನು ನೆನಪು ಮಾಡಿಕೊ. ಪ್ರೀತಿಯಿಂದ ಬಿಡದೇ ನಿನ್ನನ್ನು ನೋಡುತ್ತಿದ್ದರೆ ಗೆಳೆತನದಿಂದಾಗಿ ನೀನು ಹೊಸದಾಗಿ ರೂಪುಗೊಂಡ ಆತ್ಮೀಯ ಗೆಳೆಯನಂತೆ ತೋರುತ್ತಿರುವೆ.ನಮ್ಮ ಗೆಳೆತನವೂ ನಿನ್ನೆ ಮೊನ್ನೆ ಆದದ್ದೇನೋ ಎಂಬಂತೆ ತೋರುತ್ತಿದೆ. ನಮಗೂ ಯಾರಲ್ಲಾದರೂ ತುಂಬಾ ಗೆಳೆತನ ಉಂಟಾದರೆ ಅವರನ್ನು ಬಹುಕಾಲದ ಬಳಿಕ ಭೇಟಿಯಾದಾಗ ಇಂತಹದೇ ಭಾವನೇ ಮನದಲ್ಲಿ ಹುಟ್ಟುವುದಲ್ಲವೇ.ಅವರು ನಮಗೆ ಸಹಾಯ ಮಾಡಿರಲಿ ಅಥವಾ ನಮ್ಮಿಂದ ಸಹಾಯ ಪಡೆದಿರಲಿ ಅದು ಗೆಳೆತನದಲ್ಲಿ ಮುಖ್ಯವಾಗುವುದಿಲ್ಲ. ಅಲ್ಲಿ ನಿಷ್ಕಲ್ಮಷ ಪ್ರೀತಿ ಒಂದೇ ಇರುವುದು. ಅಪರೂಪಕ್ಕೆ ಸಿಕ್ಕಿದ ಗೆಳೆಯನ ಜೊತೆಗೆ ವರ್ತಿಸುವ ಪರಿಯನ್ನು ಕವಿ ಸುಂದರವಾಗಿ ವರ್ಣಿಸಿದ್ದಾನೆ. ಹಾಗೆ ಸಿಕ್ಕಿದರೂ ಅವರ ಸ್ನೇಹ ಹೊಸದಾಗಿ ಹುಟ್ಟಿಕೊಂಡಂತೆ ಎಂಬ ಮಾತಂತೂ ಇನ್ನೂ ಸುಂದರ.ಅಲ್ಲಿ ಕಾಟಾಚಾರಕ್ಕೆಂಬಂತೆ ಕೈಕುಲುಕುವುದು,ನಮಸ್ಕಾರ ಮಾಡುವುದು, ಔಪಚಾರಿಕವಾಗಿ ಕೇಳುವ ಕುಶಲವೇ ಇತ್ಯಾದಿ ಮಾತುಗಳು ಮೊದಲಿಗೆ ಇಲ್ಲ. ಬಿಗಿಯಾದ ಅಪ್ಪುಗೆಯೇ ಕಣ್ಣೋಟಗಳನ್ನು ಆರ್ದ್ರವಾಗುವಂತೆ ಮಾಡಿದೆ. ನಾವೂ ನಮ್ಮ ಜೀವನದಲ್ಲಿ ಉತ್ತಮ ಗೆಳೆಯರನ್ನು ಹೊಂದೋಣ.( ಸಂವಾದಿ ಪದ್ಯ- ಕುಚಿಕು ಕುಚಿಕು ಗೆಳೆಯ)_
📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ