🌹ಶಾಕುಂತಲದ ಒಂದು ಶೃಂಗಾರ ಶ್ಲೋಕ🌹
*अपरिक्षतकोमलस्य यावत्कुसुमस्येव नवस्य षट्पदेन | अधरस्य पिपासता मया ते सदयं सुन्दरि गृह्यते रसोस्य ||*
_ದುಷ್ಯಂತ ಶಕುಂತಲೆಯರು ಒಂದುಗೂಡಿದ್ದಾರೆ. ಕಾಮತಪ್ತಳಾಗಿದ್ದರೂ ಸಭ್ಯತೆಯನ್ನು ಮೀರಬೇಡ,ಸ್ವತಂತ್ರಳಾಗಿ ವರ್ತಿಸಲಾರೆ ಎಂದು ಶಕುಂತಲೆ ನುಡಿದಾಗ ಗಾಂಧರ್ವ ವಿವಾಹ ಸಾಧುವೆಂದು ಸಮಾಧಾನ ಕೊಡುತ್ತಾನೆ ದುಷ್ಯಂತ. ಬಿಡು ಎಂದು ನಾಚಿಕೆಯಿಂದ ಬಿಡಬೇಡ ಎಂಬ ಭಾವದಲ್ಲಿ ನುಡಿದಾಗ ದುಷ್ಯಂತನಾಡುವ ಮಾತು. ಸುಂದರಿ,ಇಲ್ಲಿಯವರೆಗೆ ಯಾರೂ ಸವಿಯದಿರುವ ( ತಮ್ಮ ತುಟಿಯಿಂದ ಸ್ಪರ್ಶಿಸದಿರುವ) ಈ ನಿನ್ನ ಕೆಳತುಟಿಯ ಅಮೃತವನ್ನು ಸವಿಯುವ ಆಸೆ ತುಂಬಿದ ನಾನು ದುಂಬಿಯು ಹೊಸದಾಗಿ ಅರಳಿದ ಹೂವಿನ ಮಕರಂದವನ್ನು ಸವಿಯುವಂತೆ ಹಿತವಾಗಿ ಸವಿದು ಬಿಟ್ಟುಬಿಡುವೆನು. ಶೃಂಗಾರ ರಸದ ಮಧುರ ಕ್ಷಣ ಚುಂಬನ. ಕವಿ ಅದನ್ನು ದೃಶ್ಯದಲ್ಲಿ ತೋರಿಸದೇ ವರ್ಣನೆಯಿಂದಲೇ ಪ್ರೇಕ್ಷಕರು ರಸಾಸ್ವಾದ ಮಾಡುವಂತೆ ಮಾಡುವುದು ಸಂಸ್ಕೃತ ನಾಟಕಕಾರರ ಅದ್ಭುತ ಕಲ್ಪನೆ.ಕೆಲವು ದೃಶ್ಯಗಳು ತೆರೆಯ ಮೇಲೆ ಪ್ರದರ್ಶನ ಪಡುವಂತಿಲ್ಲ. ( ಈಗ ಎಲ್ಲವನ್ನೂ ಪ್ರದರ್ಶನ ಮಾಡುವರು ) ಅಂತಹ ದೃಶ್ಯಗಳು ಪ್ರೇಕ್ಷಕನ ಮನ ಮುಟ್ಟಿ ಆ ರಸದ ಆಸ್ವಾದನೆಗೆ ಭಂಗ ಬರಬಾರದೆಂಬ ಉದ್ದೇಶದಿಂದ ಇಂತಹ ವರ್ಣನೆಗಳು ಅಲ್ಲಲ್ಲಿ ಕಾಣುತ್ತವೆ. ಈವರೆಗೂ ಯಾರೂ ಕಚ್ಚದಿರುವ ಹಾಗಾಗಿಯೇ ಕೋಮಲವಾದ ,ರಾಜನ ರಸಿಕತೆ ಇಲ್ಲಿ ಎದ್ದು ಕಾಣುತ್ತದೆ. ಉಪಮಾ ಅಲಂಕಾರ. ಚುಂಬನವನ್ನು ಬಯಸಿದ ರಾಜ ಅವಳ ತುಟಿಗಳನ್ನು ಹೊಸದಾಗಿ ಅರಳಿ ನಿಂತು ಆಕರ್ಷಿಸುತ್ತಿರುವ ಸುಮಕ್ಕೆ ಹೋಲಿಸಿದ್ದಾನೆ. ದುಂಬಿ ಮಕರಂದ ಹೀರುವ ಬಯಕೆಯಿಂದ ಸುಮವನ್ನು ಸಮೀಪಿಸಿ ಅದಕ್ಕೆ ಘಾಸಿ ಮಾಡದೆ ಸವಿಯನ್ನು ನಿಧಾನವಾಗಿ ಅನುಭವಿಸುವುದೋ ಹಾಗೆಯೇ ನಾನೂ ಕೂಡ ನಿನ್ನ ತುಟಿಗಳಲ್ಲಿ ಅಡಗಿರುವ ಮಧುವನ್ನು ಹಿತವಾಗಿ ಸವಿದು ನಿನ್ನನ್ನು ಬಿಟ್ಟುಬಿಡುವೆನು._
📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ