🌺ಅವಿಮಾರಕದ ಸುಂದರ ಕುಸುಮ🌺
*सततपरिचितो मनोभियोगात् अधिकरस: प्रथमात् समागमात् | रणशिरसि नृपेण साहसाद्यो विजय इवाद्य मयानुभूयते ||*
_ಅವಿಮಾರಕನ ಪ್ರೇಯಸಿ ಪ್ರಿಯನಿಲ್ಲದೆ ನೇಣು ಹಾಕಿಕೊಂಡು ಪ್ರಾಣ ಬಿಡಲು ಉದ್ಯುಕ್ತಳಾದಾಗ ವಿದ್ಯಾಧರನಿಂದ ಮಾಯಾ ಉಂಗುರ ಪಡೆದ ಅವಿಮಾರಕನು ಅದೃಶ್ಯನಾಗಿಯೇ ಅವಳನ್ನು ಕಾಪಾಡಿ ತನ್ನ ಹಸ್ತಗಳಲ್ಲಿ ಹಿಡಿದಿದ್ದಾನೆ.ಆ ಕ್ಷಣದಲ್ಲೇ ಅವಳ ಶರೀರದ ಜ್ವರವೆಲ್ಲ ಶಾಂತವಾಗಿದೆ.ನಾಯಕನಿಗೂ ಈ ಸ್ಪರ್ಶ ರೋಮಾಂಚನವನ್ನು ತಂದುಕೊಟ್ಟಿದೆ. ಸ್ಪರ್ಶದ ಕುರಿತು ನಾಯಕನ ವರ್ಣನೆಯ ಶ್ಲೋಕ. ಇವಳ ಈ ಸ್ಪರ್ಶ ನನಗೆ ವಿಶೇಷ .ಏಕೆಂದರೆ ನಮ್ಮಿಬ್ಬರ ಮನಗಳು ಇಂದಿಗೆ ಒಂದಾಗಿವೆ. ಹೀಗಾಗಿ ಯಾವಾಗಲೂ ನೆನಪು ಮಾಡಿಕೊಳ್ಳುವ ಆ ಮೊದಲ ಭೇಟಿಗಿಂತಲೂ ಆ ಮೊದಲ ಸ್ಪರ್ಶಕ್ಕಿಂತಲೂ ಇಂದಿನ ಈ ಸ್ಪರ್ಶ ನಿಜವಾಗಿಯೂ ವಿಶಿಷ್ಟ. ಆಗ ಬರಿದೆ ಆಕರ್ಷಣೆ ಅಥವಾ ಮೋಹವಿತ್ತು.ಈಗ ಬಹುಕಾಲದ ವಿರಹದ ಕಾರಣ ಪ್ರೀತಿ ಮಾಗಿ ಮಧುರವಾಗಿದೆ. ಬರಿಯ ದೇಹಗಳು ಸೇರದೆ ಈಗ ಮನವೂ ಒಂದಾಗಿರುವುದು ವಿಶೇಷ. ಇದು ಹೇಗೆಂದರೆ ರಣದಲ್ಲಿ ಕಲಿಗಳೊಡನೆ ಸತತವಾಗಿ ಹೋರಾಡುತ್ತಾ ಸಾಹಸದಿಂದ ಪಡೆದ ವಿಜಯವು ಆ ರಾಜನಿಗೆ ಮರೆಯಲಾಗದ ಘಟನೆಯಂತೆ ನನಗೆ ಈ ಪ್ರಿಯೆಯ ಮಿಲನವು ಮರೆಯಲಾಗದ ಅನುಭವ. ಇಲ್ಲಿ ನಾಯಕನು ಕ್ಷತ್ರಿಯನಾದ್ದರಿಂದ ದೃಷ್ಟಾಂತವೂ ರಣದ ಬಗ್ಗೆಯೇ ಇದೆ. ಕವಿ ತಾನು ಪಾತ್ರವಾಗಿ ಆಲೋಚನೆ ಮಾಡುವ ಪರಿ ಇದು. ಮೊದಲ ಸಂಪರ್ಕ ಕಾಲದಲ್ಲಿ ನೀರಿನ ಹನಿಯಂತಿದ್ದ ಪ್ರೀತಿ ಈಗ ಸಾಗರೋಪಾದಿ ವರ್ಧಿಸಿದೆ. ಹಾಗಾಗಿ ರೋಮಾಂಚಕಾರಿ ಎಂಬ ಭಾವ.ಅವಳನ್ನು ಪಡೆಯಲು ಜಗವೆಂಬ ರಣದಲ್ಲಿ ನಾಯಕನು ಮಾಡಿದ ಸಾಹಸಗಳೆಷ್ಟೋ, ಪ್ರೀತಿ ಮೂಡಿಸಲು ಪಟ್ಟ ಕಷ್ಟವೆಷ್ಟೋ.ಕಡೆಗೂ ವಿಜಯ ಸಿಕ್ಕಿದ್ದು ನಾಯಕನಿಗೆ ಇನ್ನಿಲ್ಲದ ಸುಖವನ್ನು ತಂದುಕೊಟ್ಟಿದೆ. ( ಸಂವಾದಿ ಪದ್ಯ- ಈ ಟಚ್ಚಲಿ ಏನೊ ಇದೆ.😀)_
📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ