🌺ಶಾಕುಂತಲದ ಒಂದು ಸುರಭಿ🌹
*इदमशिशिरैरन्स्तापाद्विवर्णमणीकृतं निशि निशि भुजन्यस्तापाङ्गप्रसारिभिरश्रुभि:| अनभिलुलितज्याघाताङकं मुहुर्मणिबन्धनात् कनकवलयं स्रस्तं स्रस्तं मया प्रतिसार्यते ||*
_ದುಷ್ಯಂತನ ಪರಿಸ್ಥಿತಿಯನ್ನು ನೆನೆದು ಪ್ರಿಯಂವದೆ ಸಖಿಯ ಬಳಿ ರಾಜನು ಕೃಶನಾಗಿರಬೇಕೆಂದು ಹೇಳುವಾಗ ರಾಜ ತನ್ನಲ್ಲೇ ಆಡುವ ನುಡಿ. ನಿಜವಾಗಿಯೂ ಕಾಂತಿಹೀನನಾಗಿದ್ದೇನೆ. ತೋಳಿನ ಮೇಲೆ ತಲೆ ಇಟ್ಟು ಕಣ್ಣಿನ ಕುಡಿಯಿಂದ ಉದುರುವ ಮನದ ಬೇಗೆಯಿಂದ ಬೆಚ್ಚಗಿರುವ ಕಣ್ಣೀರು ಬಿದ್ದು ಕೈಯಲ್ಲಿ ಧರಿಸಿರುವ ರತ್ನ ಖಚಿತವಾದ ಬಳೆಯು ಮಲಿನವಾಗಿದೆ. ಕ್ಷತ್ರಿಯರಿಗೆ ಸಾಮಾನ್ಯವಾದ ಧನುಸ್ಸಿನ ಹೆದೆಯೇರಿಸುವಾಗ ಕೈಮೇಲೆ ಉಂಟಾದ ಗಾಯಕ್ಕೆ ತಾಗದಿರುವ ಆ ಬಳೆ ಆಹಾರ ನಿದ್ರೆಗಳ ಉಪವಾಸ ಸತ್ಯಾಗ್ರಹದಿಂದ ಮತ್ತೆ ಮತ್ತೆ ಮುಂಗೈಯಿಂದ ಕೆಳಗೆ ಸರಿದು ಗಾಯವನ್ನು ಕೆರಳಿಸುತ್ತಿರುವ ಕಡಗವನ್ನು ಪ್ರತಿಬಾರಿಯೂ ಹಿಂದೆ ಸರಿಸುತ್ತಿದ್ದೇನೆ. ಭುಜಗಳ ಮೇಲೆ ತಲೆ ಇಟ್ಟು ರೋದಿಸುವಾಗ ಕಣ್ಣೀರು ಕೆಳಗಿಳಿಯುತ್ತಿದೆ.ಅದು ಒಳಗಿನ ದು:ಖವೆಂಬ ಬೆಂಕಿಯನ್ನು ಹೊರ ಹಾಕುತ್ತಿದೆ.ಹಾಗಾಗಿ ಬಿಸಿಯಾಗಿದೆ. ದು:ಖದ ಸಂದರ್ಭದಲ್ಲಿ ಬರುವುದೆಲ್ಲ ಬಿಸಿಯೇ ಬಿಸಿಯುಸಿರು ಇತ್ಯಾದಿ. ಕಡಗದಲ್ಲಿ ಜೋಡಿಸಿದ ರತ್ನಗಳು ಮಲಿನವಾಗಿವೆ ಕಣ್ಣೀರಿನ ಸ್ಪರ್ಶದಿಂದ. ಸಾಮಾನ್ಯವಾಗಿ ರತ್ನಗಳು ನಿರಂತರ ನೀರಿನ ಸಂಪರ್ಕ ಪಡೆದು ನೈಜತೆ ಕಳೆದುಕೊಳ್ಳುವವು. ರಾಜನ ಪರಾಕ್ರಮಕ್ಕೆ ಸಾಕ್ಷಿ ಅವನ ಹೆದೆಯ ಗುರುತು. ಅದಕ್ಕೆ ಈಗ ಬಳೆ ತಾಗಿ ಇನ್ನಷ್ಟು ನೋಂವುಂಟಾಗುತ್ತಿದೆ. ಆಹಾರ ಸರಿಯಾಗಿ ಸ್ವೀಕರಿಸದಿರುವುದು ಕೃಶತೆಗೆ ಕಾರಣವಾಗಿ ಕಡಗ ಕೈಗೆ ಸಡಿಲವಾಗಿ ಜಾರುತ್ತಿದೆ. ಹೀಗೆ ಸೊರಗಿದ ಶರೀರ ಕಾಂತಿಹೀನವಾದ ಮೊಗ ಸದಾ ಕನವರಿಕೆ ಇವುಗಳಿಂದ ದುಷ್ಯಂತನ ಸಮಯ ಮುಂದೋಡುತ್ತಿದೆ.ಇಲ್ಲಿ ಅವನ ಪ್ರೇಮಕಾತರತೆಯ ಆಳ ವರ್ಣಿಸಲ್ಪಟ್ಟಿದೆ. ಸ್ವಭಾವೋಕ್ತಿ ಮತ್ತು ಶ್ಲೇಷ ಅಲಂಕಾರ._
📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ