🌺ಅವಿಮಾರಕದ ಸುಂದರ ವರ್ಣನೀಯ ಹಾಗೂ
ಶೃಂಗಾರ ಶ್ಲೋಕ🌺
*व्योमार्णवोर्मिसदृशा निनदन्ति मेघा मेघप्ररोहसदृशा प्रपतन्ति धारा: | रक्षोङ्गनाभ्रुकुटिवत् तडित: स्फुरन्ति प्राप्तोग्रयौवनघनस्तमर्दकाल: ||*
_ಮಳೆಹನಿಗಳು ದೊಡ್ಡದಾಗಿವೆ. ಅದರಿಂದ ಉಂಟಾಗುತ್ತಿರುವ ಧ್ವನಿಯೂ ದಿಕ್ಕುಗಳಲ್ಲೆಲ್ಲ ಮಾರ್ದನಿಸುತ್ತಿದೆ. ನಾಯಕ ಈ ದೃಶ್ಯವನ್ನು ವರ್ಣಿಸುತ್ತಿದ್ದಾನೆ. ಈ ಮೋಡಗಳು ಆಕಾಶವೆಂಬ ಸಮುದ್ರದ ತರಂಗಗಳಂತೆ ಶಬ್ದಮಾಡುತ್ತಿವೆ. ( ಸಮುದ್ರದ ಅಲೆಗಳು ನಿರಂತರ ಬಡಿದು ತೀರದಲ್ಲಿ ದೊಡ್ದ ಧ್ವನಿ ಕೇಳುವಂತೆ ಇವುಗಳಿಂದ ಬೀಳುತ್ತಿರುವ ನೀರಿನ ಹನಿಗಳು ಹೆಚ್ಚು ಧ್ವನಿಯನ್ನು ಹುಟ್ಟಿಸುತ್ತಿವೆ. ನೀರಿನ ಧಾರೆ ಮೇಘವೆಂಬ ಬೃಹತ್ ಮರದ ಕೊಂಬೆಗಳಂತೆ ಎಲ್ಲೆಡೆ ಚಾಚಿವೆ. ( ಆಲ ಮುಂತಾದ ಮರಗಳ ರೆಂಬೆ ಕೊಂಬೆ ಹರಡುವಂತೆ ಮಳೆಹನಿಗಳು ಭೂಮಿಯಲ್ಲೆಲ್ಲ ಹರಡಿವೆ. ) ಮಧ್ಯದಲ್ಲಿ ಆಗೊಮ್ಮೆ ಈಗೊಮ್ಮೆ ಬರುವ ಮಿಂಚು ರಾಕ್ಷಸ ಸ್ತ್ರೀಯರ ಹುಬ್ಬಿನ ಕುಣಿತದಂತಿದೆ. ಅವರ ವಾರೆನೋಟವೂ ಅದೇ ಏನೋ ಅನ್ನುವಂತೆ ಎದೆಯಲ್ಲೊಮ್ಮೆ ಭಯ ಹುಟ್ಟಿಸುತ್ತಿದೆ. ಇವೆಲ್ಲವೂ ಈ ಕಾಲದ ಮತ್ತೊಂದು ಕಾರ್ಯಕ್ಕೆ ಸಹಕಾರ ಕೊಡುತ್ತಿವೆ. ಏನೆಂದರೆ ಈ ಕಾಲ ಯೌವನದ ಪ್ರಾರಂಭದಲ್ಲಿ ಮಾಡಬೇಕಾದ ಸ್ತನಗಳ ಮರ್ದನದ ಕಾಲ. ಆ ಕಾರ್ಯ ಮಾಡಲು ಇದೇ ಯೋಗ್ಯ ಸಮಯ. ಕಾಮಸುಖವನ್ನು ಅನುಭವಿಸಲು ಇದು ಸರಿಯಾದ ಕಾಲ ಎಂಬುದು ಕವಿಯ ಭಾವ._
📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ