🌹ಶಾಕುಂತಲದ ಒಂದು ಕುಸುಮ 🌹
*क्षौमं केनचिन्दुपाण्डु तरुणा माङ्गल्यमाविष्कृतं निष्ठ्यूतश्चरणोपभोगसुलभो लाक्षारस: केनचित् | अन्येभ्यो वनदेवताकरतलैरापर्वभागोत्थितै: दत्तान्याभरणानि तत्किसलयोद्भेदप्रतिद्वन्द्विभि: ||*
_ಕಣ್ವರು ತನ್ನ ಮಗಳನ್ನು ಪತಿಗೃಹಕ್ಕೆ ಕಳುಹಿಸಲು ಅಣಿಯಾಗಿದ್ದಾರೆ.ಮಗಳ ಸಂಗಮದ ಬಗ್ಗೆ ಆತಂಕವೆನಿಸಿದರೂ ವಿಧಿಯೇ ನಿರ್ಣಯಿಸುವುದು ಕಾಲನ ನಡೆಯನ್ನೆಂದು ಅರಿತು ಮುಂದಡಿ ಇಡುತ್ತಿರುವರು. ಸಖಿಯರು ಅವಳನ್ನು ಅಲಂಕರಿಸಿ ಬೀಳ್ಕೊಡಲು ತಯಾರಿ ಮಾಡುತ್ತಿದ್ದಾರೆ.ಆಗ ಶಿಷ್ಯನೊಬ್ಬ ಆಭರಣಗಳನ್ನು ತಂದುಕೊಡುವನು.ಇವೆಲ್ಲ ಎಲ್ಲಿಂದ ಈ ಕಾಡಿನಲ್ಲೆಂದು ಎಲ್ಲರೂ ಆಶ್ಚರ್ಯ ಪಟ್ಟಾಗ ಶಿಷ್ಯನು ಹೇಳಿದ ಮಾತು. ಒಂದು ಮರದಿಂದ ಚಂದ್ರನಂತೆ ಶುಭ್ರವಾದ ಮಂಗಲಕರವಾದ ರೇಶಿಮೆಯ ಬಟ್ಟೆ ಹೊರಬಂದಿತು.ಇನ್ನೊಂದು ತರುವು ಕಾಲುಗಳಿಗೆ ಹಚ್ಚುವ ಲಾಕ್ಷಾರಸವನ್ನು ಹೊರಹಾಕಿತು.ಬೇರೆ ಕೆಲವು ಮರಗಳಿಂದ ಮೊಣಕೈಯವರೆಗೆ ಹೊರಚಾಚಿದ ಹೊಸದಾಗಿ ಹುಟ್ಟಿದ ಚಿಗುರೆಲೆಯಂತಿರುವ ಅಪ್ಸರೆಯರ ಕೈಗಳಿಂದ ಈ ಆಭರಣಗಳು ನೀಡಲ್ಪಟ್ಟವು.ಹೀಗೆ ಶಕುಂತಲೆಯ ಪತಿಗೃಹದ ಪ್ರಸ್ಥಾನಕ್ಕೆ ತರುಲತೆಗಳು ತಮ್ಮ ಕೊಡುಗೆಯನ್ನು ನೀಡಿ ಪ್ರೀತಿ ವ್ಯಕ್ತಪಡಿಸಿದವು.ಇದು ಕವಿಸಮಯ.ಕಲ್ಪನೆ ಎಂದೇ ತೋರಿದರೂ ನಾವು ದಿನವೂ ಆರೈಕೆ ಮಾಡುವ ಗಿಡಮರಗಳು ಹೇಗೆ ನಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗುತ್ತವೆ ಎಂಬುದನ್ನು ಕವಿ ಮಾರ್ಮಿಕವಾಗಿ ತೋರಿಸಿದ್ದಾನೆ.ವನದಲ್ಲೇ ಹುಟ್ಟಿ ಬೆಳೆದ ಶಕುಂತಲೆ ಮರದ ತೊಗಟೆಯನ್ನೇ ಅಥವಾ ನಾರುಬಟ್ಟೆಯನ್ನುಟ್ಟು ಬೆಳೆದವಳು.ಈಗ ರಾಜನ ಮಡದಿಯಾಗಿ ಅರಮನೆಗೆ ಹೋಗುವಾಗ ಆ ಬಟ್ಟೆ ಶೋಭಿಸಿತೇ!ಹಾಗಾಗಿ ರೇಶ್ಮೆವಸ್ತ್ರ.ಪ್ರಸಾಧನಗಳು ಕಡಿಮೆ ಉಪಯೋಗಿಸಲ್ಪಡುತ್ತಿದ್ದ ಕಾಲವದು.ಹಾಗಾಗಿ ಅಪರೂಪಕ್ಕೆ ಕಾಲುಗಳ ಸೌಂದರ್ಯ ಹೆಚ್ಚಿಸುವ ಲಾಕ್ಷಾರಸ.ಇನ್ನು ಕೆಲವು ಸಾಮಾನ್ಯ ಆಭರಣಗಳು. ಅಲಂಕಾರ ಏನಾದರೂ ವಿಶೇಷ ಸಂದರ್ಭದಲ್ಲಿ ಮಾಡಿಕೊಂಡಾಗ ತನ್ನ ಮೌಲ್ಯವನ್ನು ಉಳಿಸಿಕೊಳ್ಳುತ್ತದೆ.ದಿನವೂ ಅದೇ ರಾಗವಾದರೆ ನೋಡುಗನಿಗೆ ಸಂತಸತರಲಾರದು.ಶುಭಕಾರ್ಯಕ್ಕೆ ರೇಷ್ಮೆ ಶೋಭೆ ತರುವುದೆಂದು ಮತ್ತು ಪವಿತ್ರವೆಂದು ಕವಿಯು ಮಾಂಗಲ್ಯ ಎಂಬ ಪದದಿಂದ ಸೂಚಿಸಿರುವನು.ಅದು ಬೆಳ್ಳಗಿರುವುದು ಶುಭ್ರತೆಯ ಸಂಕೇತ. ವಸ್ತ್ರದಂತೆ ಮನವೂ ಶುದ್ಧವಿರಲಿ ಎಂಬುದು.ವನದೇವತೆಗಳ ಕೈಗಳ ಬಣ್ಣವು ಎಳೆಚಿಗುರಿನ ಹೊಂಬಣ್ಣದೊಂದಿಗೆ ಸ್ಪರ್ಧಿಸುತ್ತಿತ್ತು. ಅಷ್ಟು ಕೋಮಲ ಎನ್ನುವ ಧ್ವನಿ.ವನದೇವತೆಗಳು ತರುಗಳ ಮೂಲಕ ಅನುಗ್ರಹಿಸಿದ ಆಭರಣಗಳು ಅವೈಧವ್ಯ ಸೌಭಾಗ್ಯ ನೀಡುವವು,ಅವುಗಳು ಅನರ್ಘ್ಯ ಎಂಬ ಸೂಚನೆ. ಇದು ಕಣ್ವರ ಪ್ರಭಾವವನ್ನೂ ,ಶಕುಂತಲೆ ಸೋದರ ಸ್ನೇಹದಿಂದ ಕಾಣುತ್ತಿದ್ದ ಆಶ್ರಮ ವೃಕ್ಷಗಳ ಸೇವೆಯನ್ನು ತೋರಿಸಿಕೊಡುತ್ತದೆ.ಮಾನವ ಜೀವನ ನಿಸರ್ಗದೊಂದಿಗೆ ಬೆರೆತು ಸಹಕರಿಸುವ ಸನ್ನಿವೇಶ.ಸಸ್ಯಗಳೂ ಉಸಿರಾಡುತ್ತವೆ ಎಂಬುದನ್ನು ಭಾರತದವರೇ ಸ್ವಲ್ಪ ಹಿಂದೆ ಶೋಧಿಸಿದರು.ಕಾಳಿದಾಸನಿಗಾಗುವಾಗ ಅವುಗಳು ಜೀವತಳೆದು ಭಾವನೆಗಳನ್ನು ಹಂಚಿಕೊಳ್ಳುತ್ತವೆ.ಇತ್ತೀಚಿನ ಸಂಶೋಧನೆ ಇದನ್ನೇ ಹೇಳುತ್ತದೆ.ಹೆಚ್ಚು ಒಡನಾಟ ಇದ್ದರೆ ಫಲಪುಷ್ಪಗಳು ಹೆಚ್ಚಾಗುತ್ತವೆ.ಪ್ರಕೃತಿಯ ಒಡಗೂಡಿ ಸಹಜ ಆನಂದ ಪಡೆದು ಉದಾರತೆಯನ್ನು ಕಲಿತು ಒಂದಾಗಿ ಜೀವಿಸುವ ಪಾಠ ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಉಂಟಾಗಲಿ._
📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ