🌺ಅವಿಮಾರಕದ ಸುಂದರ ಶ್ಲೋಕ🌺
*जलदसमयघोषणाडम्बरानेकरूपक्रियाजम्भका वज्रभृद्गृष्टय: भगणयवनिकास्तडित्पन्नगीवासवल्मीकभूता नभोमार्गरूढक्षुपा: | मदनशरनिशानशैला: प्ररुष्टाङ्गनासन्धिपाला: गिरिस्नापनाम्भोघटा: उदधिसलिलभैक्षहारा रवीन्द्वर्गला देवयन्त्रप्रपा भान्तिनीलाम्बुदा: ||*
_ಮಳೆಗಾಲದ ಅಂಬರವನ್ನು ವರ್ಣಿಸುವ ಒಂದು ಆಕಾಶದಷ್ಟೇ ವಿಶಾಲವಾದ ಛಂದಸ್ಸಿನ ಸುಂದರ ಶ್ಲೋಕ. ಮಳೆಗಾಲದ ಸಮಯವೆಂದು ಘೋಷಣೆ ಕೂಗುತ್ತಿರುವಂತೆ ನಾನಾ ಸೂಚನೆಗಳನ್ನು ಕೊಡುತ್ತಿರುವ ಅದನ್ನು ನಾನಾವಿಧದ ಆಡಂಬರದ ಕ್ರಿಯೆಗಳಿಂದ ಸಾರುತ್ತಿರುವ ಇಂದ್ರನ ಹಸುಗಳಂತೆ ಮಿಂಚುತ್ತಿರುವ ಮೋಡಗಳು,( ಗುಡುಗು,ಸಿಡಿಲು,ಬಿರುಗಾಳಿ, ಮಿಂಚು,ಕತ್ತಲೆ ಕವಿಯುವುದು,ಬರುವ ಮೊದಲೇ ಬೃಹತ್ ಶಬ್ದ ಇವೆಲ್ಲ ಸೂಚನೆ) ( ಲೋಕದ ಕ್ಷೇಮಕ್ಕೆ ಅಗತ್ಯವಾದ ನೀರನ್ನು ಇಂದ್ರನು ಮೋಡಗಳಿಂದ ಕರೆಯುವುದರಿಂದ ಹಸುಗಳಂತೆ) ,ಇವುಗಳಿಗೆ ನಕ್ಷತ್ರಗಳ ಸಮೂಹವೇ ಆವರಣದಂತೆ ಅಥವಾ ವಿಶಾಲವಾದ ಕೈಗಳಂತೆ, ಮಿಂಚೆಂಬ ಹಾವುಗಳಿಗೆ ವಾಸಸ್ಥಾನವಾದ ಹುತ್ತಗಳು ಈ ಮೋಡಗಳು, ಆಕಾಶದ ದಾರಿಯಲ್ಲಿ ಹುಟ್ಟಿಕೊಂಡ ಬೃಹತ್ ಮರಗಳು ಈ ಮೇಘಗಳು,( ದಾರಿಯ ಇಕ್ಕೆಲಗಳಲ್ಲಿ ಮರಗಳಿರುವಂತೆ ಆಕಾಶಮಾರ್ಗದಲ್ಲಿ ಮೋಡಗಳು) ,ಇನ್ನೂ ಹೇಳಬೇಕೆಂದರೆ ಮನ್ಮಥನ ಕಾಮಬಾಣಗಳನ್ನು ಚೂಪುಮಾಡುವ ಕಲ್ಲುಗಳು,( ಈ ಸಮಯ ಪ್ರೇಮಾಭಿವೃದ್ಧಿಗೆ ಸುಸಮಯ ) ಬಹುಕಾಲದ ವಿರಹದಿಂದ ಕೋಪಗೊಂಡ ಮಹಿಳೆಯರಿಗೆ ಪ್ರಿಯನ ಅನುನಯದ ಮಾತುಗಳಿಂದ ಸಂಧಾನ ಏರ್ಪಡಿಸುವ ಕಾಲ,( ವ್ಯಾಪಾರ ಯುದ್ಧವೆಂದು ಬಹಳ ಸಮಯ ದೂರವಿದ್ದ ಗಂಡಂದಿರು ಮಳೆಗಾಲವೆಂದು ಹಿಂತಿರುಗಿದಾಗ ) ,ಪರ್ವತಗಳ ಸ್ನಾನಕ್ಕಾಗಿ ಜೋಡಿಸಿಟ್ಟ ಕಲಶಗಳಂತಿವೆ ಈ ಕರಿಮೋಡಗಳು, ಸಮುದ್ರಗಳಿಗೆ ನೀರೆಂಬ ಭಿಕ್ಷೆಯನ್ನು ನೀಡಲು ಪಾತ್ರೆಗಳನ್ನು ಹಿಡಿದಿರುವಂತಿವೆ ಈ ಮೇಘಗಳು,ಸೂರ್ಯಚಂದ್ರರನ್ನು ಮರೆಮಾಚುವ ಕವಾಟದ ಬಾಗಿಲಿನಂತೆ ಇರುವ, ಅಥವಾ ದೇವತೆಗಳಿಂದ ಯಂತ್ರಗಳ ಮೂಲಕ ನಿಯಂತ್ರಿಸಲ್ಪಡುವ ಪಾನೀಯದ ಶಾಲೆಗಳಂತೆ ಹೊಳೆಯುತ್ತಿವೆ ಈ ಕರಿಮೋಡಗಳು. ಕವಿಗೆ ಮಳೆಗಾಲದ ಅಂಬರ ಹಾಗೂ ತುಂಬಿದ ಮೋಡಗಳು ನಾನಾ ಕಲ್ಪನೆಯನ್ನು ಹುಟ್ಟುಹಾಕಿವೆ._
📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ