ಪ್ರತಿಜ್ಞಾ ಯೌಗಂಧರಾಯಣ ೬

🔥 ಪ್ರತಿಜ್ಞಾ ಯೌಗಂಧರಾಯಣ 🔥೬

*यदि शत्रुबलग्रस्तो राहुणा चन्द्रमा इव । मोचयामि न राजानं नास्मि यौगन्धरायण: ।।*

_ಯೌಗಂಧರಾಯಣನ ಮಾತು.  ಉದಯನನು ಶತ್ರುಬಂಧನದಲ್ಲಿದ್ದು ನಂಬಿಕಸ್ಥನಾದ ಯೌಗಂಧರಾಯಣನು ನನ್ನನ್ನು ನೋಡಲಿ ಎಂದು ಸೇವಕನ ಬಳಿ ಹೇಳಿ ಕಳುಹಿಸಿದ್ದಾನೆ. ರಾಜನಿಗೆ ಉಳಿದ ಎಲ್ಲಾ ಅಮಾತ್ಯರಿಗಿಂತ ತನ್ನ ಮೇಲೆ ಇರುವ ಅಪಾರ ವಿಶ್ವಾಸವನ್ನು ಮನಗಂಡು, ಹಾಗೆಯೇ ರಾಜನ ವಿಷಮಸ್ಥಿತಿಗೆ ಬೇಸರಪಡುತ್ತಾ ಮಂತ್ರಿಯು ರಾಜಮಾತೆಯ ಬಳಿ ಮಾಡುವ ಪ್ರತಿಜ್ಞೆ- ಅಮ್ಮಾ, ಶತ್ರುಗಳೆಂಬ ರಾಹುವಿನಿಂದ ಗ್ರಸ್ತನಾಗಿರುವನು ನಮ್ಮ ರಾಜಚಂದ್ರ. ಗ್ರಹಣವೆಂದಿಗೂ ಬಹಳ ಕಾಲ ಇರದು. ರಾಹುವು ಚಂದ್ರನನ್ನು ಕೆಲವು ಘಂಟೆಗಳ ಕಾಲ ಮಾತ್ರ ಪೀಡಿಸಬಹುದೇ ಹೊರತು ಚಿರಕಾಲವಲ್ಲ. ಪ್ರಕೃತ ನಮ್ಮ ರಾಜನೂ ಶತ್ರುವಾದ ಮಹಾಸೇನನಿಂದ ಪೀಡಿತನಾಗಿದ್ದಾನೆ. ಇದು ಬಹಳ ಕಾಲ ನಡೆಯದು. ನಾನು ಬುದ್ಧಿವಂತಿಕೆ ಹಾಗೂ ಸಾಹಸದಿಂದ ರಾಜನ ಬಂಧನವನ್ನು ನಿಶ್ಚಯವಾಗಿ ಬಿಡಿಸುವೆನು. ಹಾಗೆ ಮಾಡದಿದ್ದಲ್ಲಿ ನಾನು ಯೌಗಂಧರಾಯಣನೇ ಅಲ್ಲ. ನನ್ನ ಪ್ರತಿಜ್ಞೆ ಈಡೇರದಿದ್ದಲ್ಲಿ ಹೆಸರನ್ನೇ ಬದಲಾಯಿಸಿಕೊಳ್ಳುವೆನು. ಅಷ್ಟು ವಿಶ್ವಾಸ ಅವನ ಮಾತಿನಲ್ಲಿ ಕಂಡುಬರುತ್ತಿದೆ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩