ಮಹಾಭಾರತ ೨೮

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೨೮

*ಈಪ್ಸಿತಶ್ಚ ಗುಣಃ ಸ್ತ್ರೀಣಾಮೇಕಸ್ಯಾ ಬಹುಭರ್ತೃತಾ ತಂ ಚ ಪ್ರಾಪ್ತವತೀ ಕೃಷ್ಣಾ ನಸಾ ಭೇದಯಿತುಂ ಸುಖಮ್*

_ಕರ್ಣ ಸುಯೋಧನನ ಬಳಿ ತನ್ನ ಮಾತು ಮುಂದುವರೆಸುತ್ತಿದ್ದಾನೆ. ದ್ರೌಪದಿಗೆ ಆಮಿಷ ಒಡ್ಡಿ ನಮ್ಮೆಡೆಗೆ ತರಲು ಯೋಚಿಸಿರುವೆ. ಇದು ಅಸಾಧ್ಯ. ಏಕೆಂದರೆ ಸ್ತ್ರೀಯರಿಗೆ ಬಹುಮಂದಿ ಪತಿಗಳು ದೊರಕುವುದು ಅಪೇಕ್ಷಿತ ಗುಣ. ದ್ರೌಪದಿ ಅದನ್ನು ಸುಲಭವಾಗಿ ಪಡೆದಿದ್ದಾಳೆ. ಅವಳನ್ನು ಅವರಿಂದ ಬೇರ್ಪಡಿಸುವುದು ಕಷ್ಟ. ಕರ್ಣನ ಅಭಿಪ್ರಾಯ ಆ ಕಾಲದ ಸ್ತ್ರೀಯರ ಮನೋಭಾವನೆ ಬಿಂಬಿಸುತ್ತದೋ ಅಥವಾ ಸ್ತ್ರೀಯರ ಆಂತರ್ಯದಲ್ಲಿ ಅಂತಹ ಭಾವನೆ ಇರುತ್ತದೆಯೋ ವ್ಯಾಸರೇ ಬಲ್ಲರು._

*ಆರ್ಯವೃತ್ತಶ್ಚ ಪಾಂಚಾಲ್ಯೋ ನ ಸ ರಾಜಾ ಧನಪ್ರಿಯಃ*

_ದ್ರೋಣನಿಗೆ ಅಪಮಾನ ಮಾಡಿದ ಘಟನೆ ಬಿಟ್ಟರೆ ದ್ರುಪದ ನಿಜಕ್ಕೂ ಒಳ್ಳೆಯ ನಡತೆಯವನು.ಇಲ್ಲಿ  ಗಮನಿಸಬೇಕಾದ ಅಂಶ ಆರ್ಯ ಅಂದರೆ ಬ್ರಾಹ್ಮಣ ಅಲ್ಲ. ನಡತೆ ಪರಿಶುದ್ಧನಾಗಿರುವವನು ಯಾವ ಕುಲದವನಾದರೂ ಅವನು ಆರ್ಯನೇ ಸರಿ. ಒಂದು ವೇಳೆ ಆರ್ಯರು ವಿದೇಶದಿಂದ ಬಂದವರೆಂದರೆ ಇಲ್ಲಿ ಎಲ್ಲರೂ ನಡತೆಗೆಟ್ಟವರಿದ್ದರೆನ್ನುವ ಮೂರ್ಖ ಪ್ರತಿಪಾದನೆಗೆ ಅವಕಾಶ ದೊರಕುತ್ತದೆ. ಆ ರಾಜನು ಹಣದ ಆಸೆಯುಳ್ಳವನೂ ಅಲ್ಲ. ಹಾಗಾಗಿ ಆಮಿಷ ಒಡ್ಡಿ ಅವನನ್ನು ನಿನ್ನವನನ್ನಾಗಿ ಮಾಡಿಕೊಳ್ಳುವ ಪ್ರಯತ್ನವೂ ಸರಿಯಲ್ಲ._

*ಯಾವನ್ನ ಕೃತಮೂಲಾಸ್ತೇ ಪಾಂಡವೇಯಾ ವಿಶಾಂ ಪತೇ ತಾವತ್ಪ್ರಹರಣೀಯಾಸ್ತೇ ರೋಚತಾಂ ತವ ವಿಕ್ರಮಃ*

_ಶ್ರೇಷ್ಠನೇ, ಪಾಂಡವರು ದೃಢವಾಗಿ ಬೇರೂರುವ ಒಳಗೆ ಅವರನ್ನು ಹೊಡೆದು ಹಾಕುವುದೊಂದೇ ನಮಗುಳಿದಿರುವ ದಾರಿ. ನಮ್ಮ ಪಕ್ಷ ಪ್ರಕೃತ ಪ್ರಬಲವಾಗಿದ್ದು ಅವರು ದುರ್ಬಲರಾಗಿದ್ದಾರೆ. ಅವರು ಮಿತ್ರರನ್ನೂ ರಥಗಳನ್ನು ಶಸ್ತ್ರಾಸ್ತ್ರಗಳನ್ನು ಹೆಚ್ಚು ಸಂಪಾದಿಸುವ ಒಳಗೆ ಅವರನ್ನು ಬಡಿದುಬಿಡಬೇಕು. ಶತ್ರುವಿನ ಬಗೆಗೆ ಎಂತಹ ನೀತಿ ಇರಬೇಕೆಂಬುದು ಇಲ್ಲಿ ಅರಿವಾಗುತ್ತದೆ. ಒಂದು ಕಾಲದಲ್ಲಿ ನಮ್ಮನ್ನು ಆಶ್ರಯಿಸಿದ್ದ ಚೀನಾವನ್ನು ಆಗಲೇ ನಿಯಂತ್ರಣ ಮಾಡಿದ್ದರೆ ಈಗ ನಾವು ಅಲ್ಲಿ ಇಲ್ಲಿ ಬೇಡುವ ಹೊಡೆದಾಡುವ ವಿಶ್ವಾಸ ಗಳಿಸುವ ಪ್ರಯತ್ನ ಬೇಡವಾಗಿರುತ್ತಿತ್ತು. ಅದನ್ನು ಭದ್ರತಾ ಮಂಡಳಿಯಲ್ಲಿ ಸೇರಿಸಿ ನಾವು ಹೊರಗಿದ್ದು ನಮ್ಮ ತಲೆ ಮೇಲೆ ನಾವೇ ಕಲ್ಲು ಎಳೆದುಕೊಂಡ ನೀತಿ ನಮ್ಮದಾಗಿದೆ._

ಮುಂದುವರಿಯುವುದು

http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩