ವೇದ-ಧರ್ಮ ೪೪

📗🌾📙 ವೇದ-ಧರ್ಮ 📗🌾📙 ಭಾಗ-೪೪

_ನ್ಯಾಯ ಕುಸುಮಾಂಜಲಿಯಲ್ಲಿ ಹೀಗಿದೆ *ಕಾರ್ಯಾಯೋಜನಧೃತ್ಯಾದೇಃ ಪದಾತ್ ಪ್ರತ್ಯಯತಃ ಶ್ರುತೇಃ ವಾಕ್ಯಾತ್ಸಂಖ್ಯಾವಿಶೇಷಾತ್ ಚಸಾಧ್ಯಸೋವಿಶ್ವವಿದವ್ಯಯಃ* ಎಂದು. ಜಗದ ಸೃಷ್ಟಿ ಕಾರ್ಯ, ಅದರಲ್ಲಿ ಪರಮಾಣುಗಳನ್ನು ಒಂದೂಗೂಡಿಸಿದ ವೈಚಿತ್ರ್ಯ, ಜಗದ ಧಾರಣೆ, ಪದ- ಪದಾರ್ಥಗಳ ಸಂಬಂಧದ ಮೂಲಕ, ವೇದವಾಕ್ಯಗಳ ಮೂಲಕ, ಅದೃಷ್ಟನಾದ ಒಬ್ಬನನ್ನು ಕಲ್ಪನೆ ಮಾಡುವ ಅನಿವಾರ್ತತೆಯಿಂದ ಈಶ್ವರನ ಅಸ್ತಿತ್ವವನ್ನು ಅಂಗೀಕರಿಸಬಹುದು. ವಿಜ್ಞಾನದ ಸಂಶೋಧನೆಗಳು ಎಷ್ಟು ನಡೆಸಲ್ಪಟ್ಟರೂ ಕೊನೆಗೊಂದು ಶಕ್ತಿಯನ್ನು ಕಲ್ಪಿಸಬೇಕಾಗುತ್ತದೆ. ದೇವಕಣವನ್ನು ಅಂದರೆ ಸೃಷ್ಟಿಯ ಮೂಲ ಸ್ರೋತವನ್ನು ಹುಡುಕಲು ಹೊರಟ ವಿಜ್ಞಾನಿಗಳ ದಂಡು ಇನ್ನೂ ಯಶಸ್ವಿಯಾಗಿಲ್ಲ. ಅದೇ ಮೂಲವನ್ನೇ ಭಗವಂತ ಎನ್ನಬಹುದೇನೋ!_

_ಯೋಗ ದರ್ಶನದ ಪ್ರಕಾರ ಇಪ್ಪತ್ತೈದು ತತ್ವಗಳಿಗಿಂತ ಅತಿರಿಕ್ತವಾದ ಇಪ್ಪತ್ತಾರನೇ ತತ್ವವನ್ನು ಈಶ್ವರ ಎನ್ನುತ್ತಾರೆ. ಸಾಂಖ್ಯರು ಈ ಇಪ್ಪತ್ತೈದು ತತ್ವ ಒಪ್ಪಿದರೂ ಅತಿರಿಕ್ತನಾದ ಪರಮಾತ್ಮನನ್ನು ಅಂಗೀಕರಿಸುವುದಿಲ್ಲ. ಹಾಗಾಗಿ ಈಶ್ವರಸಾಂಖ್ಯ ಅಂದರೆ ಯೋಗ ದರ್ಶನವೇ ಆಗಿದೆ. ಯೋಗ ಸೂತ್ರಗಳಲ್ಲಿ ಸಮಾಧಿ ಕಾಲದಲ್ಲಿ ಸಾಕ್ಷಾತ್ಕೃತನಾಗುವನು ಈಶ್ವರ, ಅಥವಾ ಅವನ ಅನುಗ್ರಹದಿಂದಲೇ ಸಮಾಧಿಯ ಸಾಧ್ಯತೆ ಎಂದೆಲ್ಲಾ ಹೇಳುತ್ತಾರೆ. ಅವರ ಮಾತು ಹೀಗಿದೆ *ಸ ಭವಾನೀಶ್ವರಃ ಪ್ರಸನ್ನಃ ಸನ್ ಅಂತರಾಯರೂಪಾನ್ ಕ್ಲೇಶಾನ್ ಪರಿಹೃತ್ಯ ಸಮಾಧಿಂ ಸಂಬೋಧಯತಿ*
_ಅಂದರೆ ದೇವನ ಒಲುಮೆಯಿಂದ ಪಾಪಗಳು ಕರಗಿ ಆನಂದದ ಚಿಲುಮೆ ಉಂಟಾಗುವುದು ಎಂದು._

ಮುಂದುವರೆಯುತ್ತದೆ...

http://shreenidhiabhyankar.blogspot.in/

ಮುಂದುವರಿಯುವುದು......

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩