ವೇದ-ಧರ್ಮ ೪೫

📗🌾📙 ವೇದ-ಧರ್ಮ 📗🌾📙 ಭಾಗ-೪೫

_ಉಭಯ ಸಾಂಖ್ಯರ ಮತದಲ್ಲಿ ಈಶ್ವರನ ಬಗೆಗೆ ಶಂಕರರ ವ್ಯಾಖ್ಯಾನ ಹೀಗಿದೆ. *ಕೇಚಿತ್ತಾವತ್ ಸಾಂಖ್ಯಯೋಗವ್ಯಾಶ್ರಯಾಃ ಕಲ್ಪಯಂತಿ ಪ್ರಧಾನಪುರುಷಯೋರಧಿಷ್ಠಾತಾ ಕೇವಲಂ ನಿಮಿತ್ತಕಾರಣಮೀಶ್ವರಃ ಇತರೇತರವಿಲಕ್ಷಣಾಃ ಪ್ರಧಾನಪುರುಷೇಶ್ವರಾಃ*
_( ಬ್ರಹ್ಮಸೂತ್ರ ಶಂಕರಭಾಷ್ಯ)
ಇವರ ಪ್ರಕಾರ ಈಶ್ವರನು ನಿಮಿತ್ತ ಕಾರಣ. ಉಳಿದವರಿಗಿಂತ ವಿಲಕ್ಷಣನಾಗಿ ಪ್ರಧಾನ ಪುರುಷನಾದ  ಈಶ್ವರನಿದ್ದಾನೆ ಇತ್ಯಾದಿ. ಪ್ರಕೃತಿಯೇ ಈಶ್ವರ, ಪುರುಷನು ಅಧಿಷ್ಠಾತೃ ಆಗಿದ್ದಾನೆ ಇತ್ಯಾದಿ. ಪತಂಜಲಿಯ ಯೋಗಸೂತ್ರದಲ್ಲೂ ಅಭೇದ ಪರವಾದ ಇಂತಹ ಒಂದು ಮಾತಿದೆ_ *ಕ್ಲೇಶಕರ್ಮವಿಪಾಕಾಶಯೇರಪರಾಮೃಷ್ಟಃ ಪುರುಷವಿಶೇಷಃ ಈಶ್ವರಃ*
_ಅಜ್ಞಾನ, ರಾಗ,ದ್ವೇಷ ಮುಂತಾದ ಐದು ಕ್ಲೇಶಗಳಿಂದ ಹಾಗೂ ವಿಹಿತ-ಅವಿಹಿತ ಕರ್ಮಗಳಿಂದ , ಫಲಗಳಿಂದ, ವಾಸನೆಗಳಿಂದ ( ಫಲಸಂಬಂಧ) ಯಾರು ಮುಕ್ತರಾಗುವರೋ ಅವನೇ ಈಶ್ವರ ಎಂದು. ಇದಕ್ಕೆ ಭೇದ ಪರವಾಗಿಯೂ ಅಭೇದ ಪರವಾಗಿಯೂ ಅರ್ಥವನ್ನು ಹೇಳಬಹುದು. ಇವೆಲ್ಲವುಗಳಿಂದ ರಹಿತನೇ ಬ್ರಹ್ಮನೆಂದೂ ಅಥವಾ ಇವೆಲ್ಲವು ಯಾವ ಜೀವನಿಗೆ ಇಲ್ಲವೋ ಅವನೇ ಬ್ರಹ್ಮನೆಂದೂ ಪ್ರತಿಪಾದಿಸಬಹುದು._

_ವೇದಾಂತಿಗಳೆಲ್ಲರೂ ಬ್ರಹ್ಮನನ್ನು ವಿಶಿಷ್ಟನೆಂದು ಪ್ರತಿಪಾದಿಸುತ್ತಾರೆ. ಅದ್ವೈತಿಗಳು  ಉಪಾಸನಾ ಕಾಲದಲ್ಲಿ ಸಗುಣ ಹಾಗೂ ಅಜ್ಞಾನ ನಾಶವಾದ ನಂತರ ನಿರ್ಗುಣ ಬ್ರಹ್ಮನನ್ನೂ ಪ್ರತಿಪಾದಿಸುತ್ತಾರೆ. ವಿಶಿಷ್ಟಾದ್ವೈತಿಗಳು ಹಾಗೂ ದ್ವೈತಿಗಳೀರ್ವರೂ ಸಗುಣ ಬ್ರಹ್ಮನನ್ನೇ ಪ್ರತಿಪಾದಿಸುತ್ತಾರೆ.ಅವನು ಸರ್ವವ್ಯಾಪಕ, ಸರ್ವಜ್ಞ,ಸ್ವತಂತ್ರ, ಅಂತರ್ಯಾಮೀ, ಜಗತ್ಸ್ರಷ್ಟಾ, ಪಾಲನಕರ್ತಾ, ಸಂಹಾರಕರ್ತಾ ಇತ್ಯಾದಿ ವಿಶೇಷ ಅಂಶಗಳನ್ನು ಹೆಚ್ಚಿನ ವೇದಾಂತಿಗಳು ಬ್ರಹ್ಮನಿಗೆ ಒಪ್ಪುತ್ತಾರೆ. ಹೀಗೆ ಈಶ್ವರನನ್ನು ಪ್ರತ್ಯೇಕವಾಗಿ ಪ್ರಬಲವಾಗಿ ಪ್ರತಿಪಾದಿಸಿದ ಪ್ರತಿಫಲವಾಗಿ ವೇದಾಂತ ದರ್ಶನವು ಆಸ್ತಿಕ ದರ್ಶನಗಳಲ್ಲಿ ಜನಪ್ರಿಯವೂ ಬಹಳ ವ್ಯಾಪಕವೂ ಆಯಿತೆನ್ನಬಹುದು._



ಮುಂದುವರೆಯುತ್ತದೆ...

http://shreenidhiabhyankar.blogspot.in/

ಮುಂದುವರಿಯುವುದು......

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩