ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*स्फुटता न पदैरपाकृता न च न स्वीकृतमर्थगौरवम् । रचिता पृथगर्थता गिरां न च सामर्थ्यमपोहितं क्वचित् ।।*

_ಧರ್ಮಜನ ಮಾತು. ತಮ್ಮಾ, ನಿನ್ನ ಮಾತು ಮಧುರವಾಗಿದೆ. ಪದಗಳಲ್ಲಿ ಸ್ಪಷ್ಟತೆ ಎಲ್ಲೂ ಮರೆಯಾಗಿಲ್ಲ. ಅಷ್ಟಲ್ಲದೇ ಅರ್ಥದ ಗೌರವ ಕಡಿಮೆಯಾಗಿಲ್ಲ. ಎಲ್ಲವೂ ವಾಚ್ಯವಾದಾಗ ಧ್ವನಿ ಎನೂ ಇಲ್ಲದಂತಾಗುವುದು. ಆದರಿಲ್ಲಿ ಧ್ವನಿಯೂ ಕಾಣುತ್ತಿದೆ. ಹಾಗೆಯೇ ಪುನರುಕ್ತಿ ಅಂದರೆ ಹೇಳಿದ ವಿಷಯವೇ ಮತ್ತೆ ಹೇಳುವಂತಹ ಮಾತಿನ ದೋಷ ಇಲ್ಲಿ ಕಾಣುತ್ತಿಲ್ಲ. ಮೊದಲು ಹೇಳಿದ ವಿಷಯಕ್ಕೆ ವಿರೋಧವೂ ಕಾಣುತ್ತಿಲ್ಲ. ಇಷ್ಟೆಲ್ಲಾ ಹೊತ್ತು ಆಡಿದ ಮಾತಿನಲ್ಲಿ ಎಲ್ಲೂ ಅತ್ಮವಿಶ್ವಾಸದ ಕೊರತೆ ಅಲ್ಪವೂ ಕಂಡುಬರುತ್ತಿಲ್ಲ. ಹೀಗಾಗಿ ನಿನ್ನ ಮಾತುಗಳೆಲ್ಲ ನನಗೆ ಪೂರ್ಣವಾಗಿ ಸ್ವೀಕಾರಾರ್ಹವಾಗಿವೆ. ನಮ್ಮ ಮಾತಿನಲ್ಲೂ ಈ ದೋಷಗಳು ಕಂಡುಬರುತ್ತವೆ. ಕೆಲವೊಮ್ಮೆ ಪದಗಳಲ್ಲಿ ಸ್ಪಷ್ಟತೆ ಇರುವುದಿಲ್ಲ. ಕೆಲವೊಮ್ಮೆ ಗಟ್ಟಿಯಾದ ಅರ್ಥ ಇರುವುದಿಲ್ಲ. ಜಾಳಾದ ಮಾತಾಗಿರುತ್ತದೆ. ಇನ್ನು ಕೆಲವೊಮ್ಮೆ ಹೇಳಿದ್ದನ್ನೇ ಮತ್ತೆ ಹೇಳುವುದು ಅಥವಾ ಹಿಂದೆ ಹೇಳಿದ್ದಕ್ಕೂ ಈಗ ಹೇಳುತ್ತಿರುವುದಕ್ಕೂ ವಿರೋಧವೂ ಕಂಡುಬರುತ್ತದೆ. ಮತ್ತೆ ಕೆಲವು ಸಲ ಆತ್ಮವಿಶ್ವಾಸದ ಅಥವಾ ನಂಬಿಕೆಯ ಕೊರತೆ ಕಂಡುಬರುತ್ತದೆ. ಇವೆಲ್ಲವೂ ಇಲ್ಲದೆ ಭೀಮನ ಮಾತಿನಂತಿರಬೇಕು ನಮ್ಮ ನುಡಿ.ಆಗ ಮಾತ್ರ ಅದು ಬಂಗಾರ. ಇಲ್ಲದಿದ್ದರೆ ಮೌನವೇ ಲೇಸು._

htttp://shreenidhiabhyankar.blogspot.in/

📕 ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩