ಪ್ರತಿಜ್ಞಾ ಯೌಗಂಧರಾಯಣ ೫
🔥 ಪ್ರತಿಜ್ಞಾ ಯೌಗಂಧರಾಯಣ 🔥೫
*कथमगणितपूर्वं द्रक्ष्यते तं नरेन्द्र: कथमपुरुषवाक्यं श्रोष्यते सिद्धवाक्य: । कथमविषयबन्धं धारयिष्यत्यमर्षं प्रणिपतति निरुद्ध: सत्कृतो धर्षितो वा ।।*
_ಯೌಗಂಧರಾಯಣನ ಮಾತು. ಉದಯನನನ್ನು ಮಹಾಸೇನನು ಬಂಧಿಸಿ ಕರೆದೊಯ್ದಿದ್ದಾನೆ. ಅಲ್ಲಿ ಅವನ ಪರಿಸ್ಥಿತಿ ಹೇಗೋ ಏನೋ ಎಂದು ವಿಚಾರ ಮಾಡುತ್ತಿದ್ದಾನೆ. ಮಹಾಸೇನನ ಪರಿಚಯವೇ ಇಲ್ಲದ ನಮ್ಮ ಒಡೆಯನು ಅವನೊಡನೆ ಹೇಗೆ ವ್ಯವಹರಿಸುವನೋ ಏನೋ? ಅವನನ್ನು ಹೇಗೆ ಎದುರಿಸುವನೋ ಏನೋ? ಅಪರಿಚಿತರೊಡನೆ ಒಡನಾಟ ಬಹಳ ಜಾಗರೂಕತೆಯಿಂದ ಕೂಡಿರಬೇಕು. ಪ್ರಕೃತ ಮಹಾಸೇನನು ಕ್ರೂರಿ ಹಾಗೂ ವಂಚಕ. ಅಂತಹ ವ್ಯಕ್ತಿಯೊಡನೆ ವ್ಯವಹಾರವೂ ಕಷ್ಟ._
_ಎಂದಿಗೂ ಒಳ್ಳೆಯ ಮಾತನ್ನೇ ಆಡುವವನಿಗೆ ಕೆಟ್ಟ ಹಾಗೂ ಅಪಮಾನಕರವಾದ ಮಾತುಗಳನ್ನು ಕೇಳುವುದು ಸಾಧ್ಯವೇ? ಪ್ರಕೃತ ಉದಯನನನ್ನು ಹೀಯಾಳಿಸಿ, ಅಪಮಾನಿಸಿ ಕೊಂಕು ಮಾತನಾಡುವುದು ಸಹಜ. ಏಕೆಂದರೆ ಮಹಾಸೇನನು ಎಂದಿಗೂ ಶತ್ರುವಿಗೆ ಗೌರವ ಕೊಟ್ಟವನಲ್ಲ. ಅಪುರುಷವಾಕ್ಯ ಎಂದರೆ ಅತ್ಯಂತ ಕೊಳಕು ಮಾತುಗಳು. ಅಂತಹವನ್ನು ಕೇಳಿ ಹೇಗೆ ಸಹಿಸಿಯಾನು ನಮ್ಮೊಡೆಯ! ಕೋಪ ಉಕ್ಕೇರಿ ಬರುತ್ತಿದೆ, ಆದರೆ ಕೋಪದ ಕೊನೆಗೆ ವಿಜಯ ದೊರಕಿದ್ದರೆ ಸಾರ್ಥಕವಾಗುತ್ತಿತ್ತು. ಆದರೆ ಕೋಪವು ಯಾವ ಕಾರ್ಯವನ್ನೂ ಸಾಧಿಸದೆ ಪರ್ಯವಸಾನ ಹೊಂದಿದ ಕಾರಣ ವೃದ್ಧಿಯಾಗಿದೆ. ಉದಯನನು ಪರಾಕ್ರಮದಿಂದ ಹೋರಾಡಿದರೂ ಪರಾಜಯ ಹೊಂದಿದ ಕಾರಣ ಇನ್ನಷ್ಟು ಕೋಪಗೊಂಡಿದ್ದಾನೆ. ಬಂಧನಕ್ಕೊಳಗಾದ ನರನು ಪೂಜಿತನಾಗಲಿ, ಅಪಮಾನಿತನಾಗಲಿ ಏನೇ ಆಗಲಿ ಲಜ್ಜಿತನಾಗುವುದಂತೂ ಸತ್ಯವಾದ ವಿಷಯ. ಉದಯನನು ಶತ್ರುವಿನ ಬಂಧನದಲ್ಲಿದ್ದಾನೆ. ಅಲ್ಲಿ ಅವನಿಗೆ ರಾಜನೆಂಬ ಕಾರಣದಿಂದ ಒಂದಷ್ಟು ಗೌರವ ದೊರಕಬಹುದು,ಅಥವಾ ಶತ್ರುವೆಂಬ ಕಾರಣಕ್ಕೆ ಅಪಮಾನ-ತಿರಸ್ಕಾರಗಳೂ ಸಿಗಬಹುದು. ಆದರೆ ಅದೇನಿದ್ದರೂ ಬಂಧನದಲ್ಲಿರುವಾಗ ಅದನ್ನು ಸಹಿಸುವುದೇ ಕಷ್ಟವಾದಾಗ ಮಾನಾಪಮಾನಗಳು ಯಾವ ಲೆಕ್ಕ? ಪರರ ಹಂಗಿಗೆ ಒಳಗಾದ ಪ್ರತಿಯೊಬ್ಬನ ಮನದಾಳವನ್ನೇ ಕವಿ ನಮೂದಿಸಿದ್ದಾನೆ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ