ವೇದ ಧರ್ಮ ೪೮

📗🌾📙 ವೇದ-ಧರ್ಮ 📗🌾📙 ಭಾಗ-೪೮

_ಶಾಸ್ತ್ರ ಓದುವ ಮುನ್ನ ವೇದಗಳನ್ನು ಯಾಕೆ ಓದಬೇಕು ಎಂಬ ಪ್ರಶ್ನೆಗೆ ಉತ್ತರ ಹೀಗಿದೆ._ *ಅಪಹತಪಾಪ್ಮಾ ಸ್ವಾಧ್ಯಾಯೋ ದೇವಪವಿತ್ರಂ ವಾ ಏತತ್ ತಂ ಯೋನುಸೃಜತ್ಯಭಾಗೋ ವಾಚಿ ಭವತ್ಯಭಾಗೋ ನಾಕೇ*
_ಪಾಪಗಳನ್ನು ಕಳೆದು ಪವಿತ್ರನಾಗಿ, ಸ್ವರ್ಗದ ದಾರಿಯನ್ನು ಹಿಡಿಯುವನು ಎಂಬುದಾಗಿ. ಪಾಪದ ಸಂಪರ್ಕವು ಅಂತಹ ವ್ಯಕ್ತಿಯನ್ನು ತೊರೆಯುವುದು. ಇನ್ನೊಂದು ಕಡೆ ಬೃಹದಾರಣ್ಯಕದ ಮಾತು ಹೀಗಿದೆ._ *ಶ್ರೋತವ್ಯಃ ಶ್ರುತಿವಾಕ್ಯೇಭ್ಯೋ ಮಂತವ್ಯಶ್ಚೋಪಪತ್ತಿಭಿಃ*
_ಆತ್ಮನ ಬಗ್ಗೆ ಅರಿವು ಹುಟ್ಟಲು ವೇದದ ವಾಕ್ಯಗಳಿಂದ ಕೇಳಬೇಕು. ಅಂದರೆ ವೇದವನ್ನು ಓದಿ ಅರ್ಥೈಸಿಕೊಂಡು ಮನನ ಮಾಡಿದಾಗ ಆತ್ಮನ ಬಗೆಗೆ ಒಂದೊಂದೇ ಸತ್ಯಗಳು ತೆರೆದುಕೊಳ್ಳುತ್ತವೆ. ಇನ್ನು ವೇದದ ಅಂಗಗಳ ಅಧ್ಯಯನ ವೇದಾರ್ಥದ ಸಾಧನೆಗೆ ಅವಶ್ಯಕವಾದ ಕಾರಣ ಮಾಡಬೇಕು._

_ಇನ್ನು ಕರ್ಮಗಳ ಆಚರಣೆ. ಕರ್ಮವು ಎರಡು ಬಗೆ- ಅನುಷ್ಠೇಯ ಹಾಗೂ ತ್ಯಾಜ್ಯ. ಬಿಡಬೇಕಾದುದು ಮತ್ತೆರಡು ಬಗೆ- ಕಾಮ್ಯ ಅಂದರೆ ಜೀವನೋಪಾಯೋಗಿ ಬಯಕೆಗಳ ಪೂರೈಕೆಗೆ ಮಾಡುವ ಕರ್ಮ. ಸಹಜವಾಗಿ ಸಿಗುವ ಅನುಕೂಲಗಳನ್ನು ಶೀಘ್ರವಾಗಿ ಪಡೆಯಲು ಅಥವಾ ಯೋಗ್ಯತೆ ಮೀರಿದ ಅನುಕೂಲಕ್ಕಾಗಿ ಮಾಡುವ ಅನೇಕ ಆಸೆಗಳ ಸಂತುಲಿತ ಕರ್ಮಗಳು. ಸ್ವರ್ಗಾದಿಗಳು ಬೇಕೆನ್ನುವ ಕರ್ಮಗಳೂ ಕಾಮ್ಯವೇ ಆಗಿವೆ. ಒಬ್ಬರನ್ನು ಕೊಲ್ಲುವ, ನಿಂದಿಸುವ, ಪೀಡಿಸುವ, ಲೋಕಕ್ಕೆ ಕೆಡುಕನ್ನು ಬಯಸುವ ಎಲ್ಲಾ ವಿಧದ ಕರ್ಮಗಳು ನಿಷಿದ್ಧ ಕರ್ಮಗಳು._

_ಅನುಷ್ಠೇಯ ಕರ್ಮ ಎರಡು ವಿಧ- ನಿತ್ಯ ಕರ್ಮ, ನೈಮಿತ್ತಿಕ ಕರ್ಮ, ಪ್ರಾಯಶ್ಚಿತ್ತ ಕರ್ಮ, ಉಪಾಸನಾ ಕರ್ಮ. ಯಾವುದನ್ನು ಮಾಡದಿದ್ದರೆ ಪಾಪ ಉಂಟಾಗುವುದೋ ಅವೆಲ್ಲ ನಿತ್ಯಕರ್ಮಗಳು. ವರ್ಣ- ಜಾತಿಗನುಗುಣವಾಗಿ ಆಚರಿಸುವ ಕರ್ಮಗಳು. ಪಾಠ ಮಾಡುವ ಮೊದಲು ಸರಸ್ವತಿ ಸ್ತುತಿ, ಮರ ಹತ್ತುವ ಮೊದಲು ವೃಕ್ಷಕ್ಕೆ ನಮಸ್ಕಾರ, ದಿನವೂ ದೇವರ ಪೂಜೆ, ಗುರು ಹಿರಿಯರಿಗೆ ಅಪ್ಪ ಅಮ್ಮನಿಗೆ ಗೌರವ ನೀಡುವುದು, ಬೀಜ ಬಿತ್ತುವ ಮುನ್ನ ಭೂಮಿಯ ಪ್ರಾರ್ಥನೆ, ಬಿತ್ತಿದ ಮೇಲೆ ವೃಷ್ಟಿದೇವತೆಯ ಸ್ತುತಿ ಇತ್ಯಾದಿಗಳು._

http://shreenidhiabhyankar.blogspot.in/

ಮುಂದುವರಿಯುವುದು......

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩