ರಾಮಾಯಣ ೭೦
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೭೦
*ಯಃ ಸ್ಥಿತಂ ಯೋಜನೇ ಶೈಲಂ ಗಚ್ಛನ್ ಪಾರ್ಶ್ವೇನ ಸೇವತೇ ಊರ್ಧ್ವಂ ತಥೈವ ಕಾಯೇನ ಗತಃ ಪ್ರಾಪ್ನೋತಿ ಯೋಜನಮ್*
_ಸಾರಣನು ಮತ್ತೆ ಕಪಿವೀರರನ್ನು ತೋರಿಸುತ್ತಿದ್ದಾನೆ. ಒ ಅಲ್ಲಿ ನಿಂತಿರುವ ವಾನರನ ಹೆಸರು ಸನ್ನಾದ. ಅವನು ಒಂದು ಹೆಜ್ಜೆ ಇಟ್ಟರೆ ಯೋಜನದಷ್ಟು ದೂರದಲ್ಲಿರುವ ಪರ್ವತ ಸಮೀಪವಾಗುವುದು. ಅಷ್ಟು ವೇಗ ಹಾಗೂ ಬೃಹತ್ ಹೆಜ್ಜೆ ಅವನದು. ಹಾಗೆಯೇ ಎದ್ದು ನಿಂತರೆ ಒಂದು ಯೋಜನ ಎತ್ತರ ಆಕ್ರಮಿಸಿಕೊಳ್ಳುವನು. ನಾಲ್ಕು ಕಾಲಿನ ಪ್ರಾಣಿಗಳಲ್ಲಿ ಅವನಿಗಿಂತ ಮಹಾಕಾಯರು ಯಾರೂ ಇಲ್ಲ. ಕಪಿಗಳೆಲ್ಲರಿಗೂ ಅವನು ಪಿತಾಮಹ. ಈಗಿನ ಸಿನೆಮಾಗಳ ಕಾಲ್ಪನಿಕ ಪ್ರಾಣಿಗಳು ಆಗ ಇದ್ದವೆನ್ನುವುದಕ್ಕೆ ರಾಮಾಯಣ ಹೀಗೆ ಪ್ರಮಾಣ ಕೊಡುತ್ತದೆ. ಇವನು ಇಂದ್ರನೊಡನೆ ಸೇರಿ ಬಹಳ ಬಾರಿ ರಾಕ್ಷಸರನ್ನು ಓಡಿಸಿದ್ದಾನೆ. ಗಂಧರ್ವ ಕನ್ಯೆಯಲ್ಲಿ ಅಗ್ನಿಯ ಪುತ್ರನಾಗಿ ಜನಿಸಿದ ವೀರನಿವನು._
*ಹಸ್ತೀನಾಂ ವಾನರಾಣಾಂ ಚ ಪೂರ್ವವೈರಮನುಸ್ಮರನ್*
_ಇನ್ನೊಬ್ಬ ಪ್ರಮಾಥಿಯೆಂಬುವನನ್ನು ಉಲ್ಲೇಖಿಸುತ್ತಾ ಈ ಮಾತು ಹೇಳುವನು ಸಾರಣ. ಹಿಂದೆ ಶಂಬಸಾದನನೆಂಬ ರಾಕ್ಷಸನು ಗಜರೂಪವನ್ನು ಧರಿಸಿ ಮುನಿಗಳನ್ನೂ ವಾನರರನ್ನೂ ಪೀಡಿಸುತ್ತಿದ್ದನು. ಹನುಮನ ತಂದೆಯಾದ ಕೇಸರಿಯು ಅವನನ್ನು ಕೊಂದನು. ಹೀಗೆ ಆ ರಕ್ಕಸನಿಂದಾಗಿ ಗಜಗಳಿಗೂ ವಾನರರಿಗೂ ವೈರ ಉಂಟಾಗಿತ್ತು. ಅದನ್ನು ನೆನಪಿಟ್ಟುಕೊಂಡು ಆ ವಾನರನು ಗಂಗಾತೀರದ ಆನೆಗಳನ್ನು ಮರ್ದಿಸುತ್ತಿರುವನು ಈ ವಾನರ ._
*ಏತೇ ಅಸಿತಮುಖಾ ಘೋರಾ ಗೋಲಾಂಗೂಲಾ ಮಹಾಬಲಾಃ*
_ರಾಮ ರಾವಣ ಯುದ್ಧದಲ್ಲಿ ಸಿಂಗಳೀಕಗಳೂ ಪಾಲ್ಗೊಂಡಿದ್ದವು. ಕರಿಮೋರೆಯ ಭಯಾನಕ ಆಕಾರದ ಆ ಸಿಂಗಳಿಕಗಳು ಸುಮಾರು ಒಂದು ಲಕ್ಷದಷ್ಟಿದ್ದವು. ಅವುಗಳಿಗೆ ನಾಯಕನಾಗಿ ಗವಾಕ್ಷನಿದ್ದ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ