ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*मदसिक्तमुखैर्मृगाधिप: करिभिर्वर्तयते स्वयं हतै: । लघयन् खलु तेजसा जगन्न महानिच्छति भूमिमन्यत: ।।*

_ಭೀಮನು ಮತ್ತೆ ನುಡಿಯುತ್ತಿದ್ದಾನೆ. ಅಣ್ಣ, ಮೃಗರಾಜವೊಂದು ಎಂದಿಗೂ ಮದವೇರಿದ ಆನೆಯನ್ನು ಬೇಟೆಯಾಡಿ ತನ್ನ ಹಸಿವನ್ನು ತಣಿಸಿಕೊಳ್ಳುತ್ತದೆ. ಗಂಡಸ್ಥಲದಲ್ಲಿ ಮದಜಲ ಒಸರುತ್ತಿರುವ ಗಜವನ್ನೇ ಬೇಟೆಯಾಡುವುದು  ಹೊರತು ದುರ್ಬಲವಾದ ಹಸ್ತಿಯನ್ನಲ್ಲ. ಸಿಂಹದಂತೆ ಉಳಿದ ಜಂತುಗಳಲ್ಲೂ ಅಂತಹ ವರ್ತನೆಯೇ ಕಂಡುಬರುತ್ತದೆ. ಸ್ವಾಭಿಮಾನ ಹೊಂದಿರುವ ವ್ಯಕ್ತಿಯೂ ಕೂಡ ಜಗದ ಜನರ ಸಾಮರ್ಥ್ಯವನ್ನು ಟೀಕೆ ಟಿಪ್ಪಣಿಗಳನ್ನು ಕಡೆಗಣಿಸಿ ತನ್ನ ತೇಜಸ್ಸಿನಿಂದ ಅಥವಾ ಅಪರಿಮಿತ ಉತ್ಸಾಹದ ಪ್ರಯತ್ನದಿಂದ ತಾನು ಬಯಸಿದ ಯಶಸ್ಸನ್ನು ಪಡೆಯುವನು. ಅದಕ್ಕಾಗಿ ಅವನೆಂದಿಗೂ ಪರರ ಸಹಾಯ ತಾನಾಗಿ ಬಯಸಲಾರನು. ಇದನ್ನೇ ಹಿರಿಯರು ಹೇಳಿದ್ದು - *ವಿನಾ ದೈನ್ಯೇನ ಜೀವನಮ್* ಎಂದು. ತನ್ನ ಏಳಿಗೆಯನ್ನು ಬಯಸುವ ವ್ಯಕ್ತಿ ತಾನೇ ಪ್ರಯತ್ನಪಟ್ಟು ಜೀವನದಲ್ಲಿ ಯಶಸ್ಸು ಪಡೆಯುವನೋ ಹೊರತು ಇನ್ನೊಬ್ಬರನ್ನು ಕಾಡಿ ಬೇಡಿ ಅಲ್ಲ.ಪ್ರಕೃತ ನೀನು ಪರಾಕ್ರಮಿಗಳಾದ ನಿನ್ನ ತಮ್ಮಂದಿರೊಡಗೂಡಿ ಮತ್ತೆ ಭೂಮಿಯನ್ನು ಪಡೆಯಲು ಪ್ರಯತ್ನಿಸು. ಯುದ್ಧ ಕಾಲದಲ್ಲಿ ಇನ್ಯಾರೋ ನೆರವಾಗುವರು ಎಂದೆಲ್ಲಾ ನಿರೀಕ್ಷೆ ಬಿಡು. ನಮ್ಮ ಉದ್ಧಾರಕ್ಕಾಗಿ ನಮ್ಮ ಪ್ರಯತ್ನವೇ ಮುಖ್ಯವಾಗುವುದು ಹೊರತು ಇನ್ನೊಬ್ಬರದ್ದಲ್ಲ. ಹಾಗೆಯೇ ದುರ್ಬಲನನ್ನು ಎದುರುಗೊಂಡು ಗೆದ್ದೆ ಅನ್ನುವ ಭಾವಕ್ಕಿಂತ ಪ್ರಬಲನಿಗೆ ಸರಿಸಮಾನ ನಿಂತು ಪಡೆಯುವ ಗೆಲುವು ಶಾಶ್ವತ ಕೀರ್ತಿ ತಂದುಕೊಡುತ್ತದೆ. ಅಂತಹ ಪ್ರಯತ್ನ ನಡೆಸು._

http://shreenidhiabhyankar.blogspot.in/

📕 ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩