ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*ज्वलतस्तव जातवेदस: सततं वैरिकृतस्य चेतसि । विदधातु शमं शिवेतरा रिपुनारीनयनाम्बुसन्तति: ।।*

_ಭೀಮನ ಭೀಷಣವಾದ ಮಾತು. ಅಣ್ಣ, ನಿನ್ನ ಮನದಲ್ಲಿ ಶತ್ರುಗಳಿಂದ ಉಂಟಾದ ಅಪಮಾನವೆಂಬ ಬೆಂಕಿ ನಿರಂತರವಾಗಿ ಉರಿಯುತ್ತಿದೆ. ಅವರಿಂದ ಸೋತು ಹೋದೆನಲ್ಲಾ, ಸಮೃದ್ಧ ರಾಜ್ಯವನ್ನು ಕಳೆದುಕೊಂಡೆ, ಮನದರಸಿಯ ಮಾನವೂ ಕಳೆಯಲ್ಪಟ್ಟಿತು ಎಂದೆಲ್ಲಾ ಚಿಂತೆಗಳು ಒಟ್ಟಾಗಿ ನಿನ್ನ ಮನಸ್ಸನ್ನು ಸುಡುತ್ತಿವೆ. ಆ ಉರಿಯುವ ಬೆಂಕಿಯನ್ನು ನಿವಾರಿಸಲು ನೀರು ಬೇಕು. ಅದು ಯಾವುದೆಂದರೆ ಶತ್ರುಗಳ ಹೆಂಗಳೆಯರು ಸುರಿಸುವ ಕಣ್ಣೀರು ಆ ಬೆಂಕಿಯನ್ನು ಬೇಗನೇ ತಣಿಸಬಲ್ಲದು‌. ಶತ್ರುಗಳೊಡನೆ ಕಾದಾಟದಲ್ಲಿ ಅವರ ಅಸು-ನೀಗಿದಾಗ  ದುಃಖದಲ್ಲಿ ಅವರ ಮಡದಿಯರು ಸುರಿಸುವ ಕಣ್ಣೀರು ನಿನ್ನ ಚಿಂತೆಯೆಂಬ ಬೆಂಕಿಯನ್ನು ಸ್ವಲ್ಪವೂ ಅವಶೇಷ ಉಳಿಯದಂತೆ ತಣಿಸುತ್ತದೆ. ಹಾಗಾಗಿ ನೀನೀಗ ಯುದ್ಧೋನ್ಮುಖನಾಗಿ ಆಲೋಚಿಸು. ಅದೇ ನಿನ್ನ ದುಃಖವನ್ನು ಪರಿಹರಿಸುವುದೇ ಹೊರತು ಬೇರೆ ಯಾರ ಮಾತೂ ಅಲ್ಲ.‌ ಭಾರವಿ ಸುಂದರ ಉಪಮೆಗಳ ಜೊತೆಗೆ ಕೆಲವೊಮ್ಮೆ ಭೀಕರ ಉಪಮೆಗಳನ್ನು ಅರ್ಥದಲ್ಲಿ ಪರಿಣಾಮಕಾರಿಯಾಗಿ ತೋರುವಂತೆ ಕೊಡುವುದು ಅವನ ಶೈಲಿಯ ವೈಶಿಷ್ಟ್ಯ._

http://shreenidhiabhyankar.blogspot.in/

📕 ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩