ಪ್ರತಿಮಾ ನಾಟಕ

🌺 ಪ್ರತಿಮಾ ನಾಟಕದ ಒಂದು ಸುಮ 🌺

*प्रख्यातसद्गुणगुण: प्रतिपक्षकालस्तिग्मांशुवंशतिलकस्त्रिदशेन्द्रकल्पा: | आज्ञावशादखिलभूपरिरक्षणस्थ: श्रीमानुदारकलभेभसमानयान: ||*

_ಭಾಸ ಇಲ್ಲಿ ಹೊಸದೊಂದು ದೃಶ್ಯವನ್ನು ಕಲ್ಪಿಸಿದ್ದಾನೆ. ಸೀತಾಪಹರಣದ ನಂತರ ಜನಸ್ಥಾನಕ್ಕೆ ಭೇಟಿಗೆಂದು ಭರತ- ಸುಮಂತ್ರರು ಬಂದಿದ್ದಾರೆ. ಕಂಚುಕಿಯು ಭರತನನ್ನು ವರ್ಣಿಸುತ್ತಿದ್ದಾನೆ. ಶೌರ್ಯ ಔದಾರ್ಯ ಮುಂತಾದ ಸದ್ಗುಣಗಳಿಂದ ಪ್ರಖ್ಯಾತನಾದವನು, ಶತ್ರುಗಳಿಗೆ ಯಮನಂತೆ ಭಯಂಕರನಾದವನು, ಸೂರ್ಯವಂಶಕ್ಕೆ ಕೀರ್ತಿಪ್ರಾಯವಾದವನು, ದೇವಾಧಿಪನಾದ ಸುರೇಂದ್ರನ ಸಮನಾದ ತೇಜಸ್ಸನ್ನು ಹೊಂದಿದವನು, ಅಷ್ಟಾಗಿಯೂ ಅಣ್ಣನ ಆಜ್ಞೆಯನ್ನು ತಲೆಯಲ್ಲಿ ಧರಿಸಿ ಮೆರೆಸುತ್ತಾ ಎಲ್ಲಾ ಸಾಮಂತರನ್ನು ಆದೇಶ ಪಾಲಿಸುವಂತೆ ನಿಯಮಿಸಿದವನೂ, ಉತ್ತಮನಡತೆ ಉಳ್ಳವನೂ, ರಮಣೀಯನೂ, ಎಳೆ ಆನೆಯ ಮರಿಯಂತೆ ಗಂಭೀರ ನಡಿಗೆಯವನೂ ಆದ ಭರತ ಬರುತ್ತಿರುವನು. ಭರತನ ಬಗೆಗೆ ಎಲ್ಲಾ ವಿಶೇಷಣಗಳನ್ನು ಕವಿ ಒಂದೇ ಶ್ಲೋಕದಲ್ಲಿ ಹಿಡಿದಿಡುವ ಪರಿ ಸುಂದರ. ಗುಣಗಳ ಗಣಿ ಅವನು, ಅರಿಗಳಿಗೆ ಹರಿಯೂ( ಸಿಂಹದಂತೆ), ಸೂರ್ಯನಂತೆ ಪ್ರಕಾಶಿಸುವವನೂ, ಇಂದ್ರನಂತೆ ಉತ್ತಮ ಆಡಳಿತಗಾರನೂ, ಅಣ್ಣನ ಆದೇಶದಂತೆ ರಾಜ್ಯದ ಆಡಳಿತವನ್ನು ಸರಿಯಾಗಿ ನಡೆಸುವವನೂ, ( ಅಣ್ಣನ ಅನುಪಸ್ಥಿತಿ ಪ್ರಜೆಗಳಿಗೆ ಕಾಡದಂತೆ) ಸಾಮಂತರು ದಂಗೆಯೇಳದೆ ಗದ್ದುಗೆಗೆ ವಿಧೇಯರಾಗಿರುವಂತೆ ಅವರನ್ನು ಇಟ್ಟುಕೊಂಡು, ಗಜದಂತೆ ಪರಾಕ್ರಮವೂ ಗಾಂಭೀರ್ಯವೂ ಮೇಳೈಸಿರುವವನೂ ಆದ ಭರತ ಎನ್ನುವ ಶಬ್ದದ ಅರ್ಥದಂತೆ ಪ್ರಜೆಗಳ ನಿಜರಕ್ಷಕನಾದ ರಾಮಾನುಜ ಬರುತ್ತಿದ್ದಾನೆ._

📜ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩