ಪ್ರತಿಮಾ ನಾಟಕ

🌺 ಪ್ರತಿಮಾ ನಾಟಕದ ಒಂದು ಸುಮ 🌺

*भग्न: शक्र: कम्पितो वित्तनाथ: कृष्ट: सोमो मर्दित: सूर्यपुत्र: | धिग् भो स्वर्गं भीतदेवैर्निविष्टं धन्या भूमिर्वर्तते यत्र सीता ||*

_ರಾವಣ ಸೀತೆಯನ್ನು ಅಪಹರಿಸಿ ತನ್ನ ಪರಾಕ್ರಮವನ್ನು ಅವಳೆದುರು ಹೊಗಳಿಕೊಳ್ಳುತ್ತಿದ್ದಾನೆ. ಸೀತೆ, ನನ್ನ ಪರಾಕ್ರಮ ಏನೆಂದು ಹೇಳಲಿ, ನನ್ನನ್ನು ನೋಡಿ ಇಂದ್ರನು ಭಗ್ನನಾದನು. ಯುದ್ಧದಲ್ಲಿ ನನ್ನಿಂದ ಪರಾಜಿತನಾಗಿ ಓಡಿಹೋದ. ಇಂದ್ರನೇ ಹೆದರಿದ್ದನ್ನು ನೋಡಿ ಅವನ ಬೆಂಬಲಕ್ಕೆ ಧಾವಿಸಿದ ವಿತ್ತೇಶ ಕುಬೇರನು ನಡುಗಿದನು. ಇನ್ನು ಚಂದ್ರನು ತನ್ನ ವಾಸಸ್ಥಾನದಿಂದ ಪದಚ್ಯುತನಾದನು. ಅವನನ್ನು ನಾನು ನನ್ನ ಅರಮನೆಯ ಶಿಖರದ ಮೇಲೆ ಸ್ಥಾಪಿಸಿ ಸೇವಕನನ್ನಾಗಿಸಿದೆ. ಸೂರ್ಯಪುತ್ರನಾದ ಯಮನು ಅಪಮಾನ ಹೊಂದಿ ತನ್ನ ತೇಜಸ್ಸನ್ನು ಕಳೆದುಕೊಂಡನು. ಯಮನು ಮರಣ  ಕಲ್ಪಿಸುವ ತನ್ನ ಕಾರ್ಯದಿಂದ ಭ್ರಷ್ಟನನ್ನಾಗಿಸಿದೆ. ಇಂತಹ ಪರಾಕ್ರಮವಿದ್ದರೂ ನಾನು ಏಕೆ ಸ್ವರ್ಗವಾಸಿಯಾಗಿಲ್ಲವೆಂದೆಣಿಸುವೆಯಾ, ಪುಕ್ಕಲರಾದ ದೇವತೆಗಳಿಂದ ಕೂಡಿದ ಈ ಸ್ವರ್ಗಕ್ಕೆ ಧಿಕ್ಕಾರವಿರಲಿ. ಈ ಭೂಮಿಯೇ ಪ್ರಶಂಸನೀಯ. ಸೀತೆಯಂತಹ ರಮಣೀಯರೂಪದ ಗುಣವತಿಯಾದ ರಮಣಿಯನ್ನು ಹೊಂದಿದ ಈ ಭೂಮಿಯೇ ಧನ್ಯ. ಸೀತೆಗೋಸ್ಕರ ತಾನು ಸಕಲಭೋಗಗಳ ಆವಾಸವಾದ ಆ ವಾಸವನ ಮನೆಯಲ್ಲಿ ವಾಸವಾಗದೇ ಸೀತೆಯ ಸೌಂದರ್ಯದ ವಾಸನೆಯಿಂದ ಈ ಧರಣಿಯನ್ನೇ ಆಶ್ರಯಿಸಿದೆ. ದೇವತೆಗಳಿಗಾದರೂ ಇಂತಹ ಸುಂದರಿಯ ದರ್ಶನ ಹೇಗೆ ಸಿಕ್ಕೀತು? ಸಾಧ್ಯವೇ ಇಲ್ಲ. ಈ ಭೂಮಿಯೇ ಧನ್ಯ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩