ಪ್ರತಿಮಾ ನಾಟಕ
🌺 ಪ್ರತಿಮಾ ನಾಟಕದ ಒಂದು ಸುಮ 🌺
*युद्धे येन सुरा: सदानवगणा: शक्रादयो निर्जिता दृष्ट्वा शूर्पणखाविरूपकरणं श्रुत्वा हतौ भ्रातरौ | दर्पाद् दुर्मतिमप्रमेयबलिनं रामं विलोभ्यच्छलै: स त्वां हर्तुमना विशालनयने प्राप्तोस्म्यहं रावण: ||*
_ರಾವಣ ಸೀತೆಯನ್ನು ಮಂತ್ರರಹಿತವಾದ ಆಹುತಿಯನ್ನು ಅಸುರರು ಅಪಹರಿಸಿದಂತೆ ಅಪಹರಿಸಿದ್ದಾನೆ. ರಾಮನೆಂಬ ಮಂತ್ರ ಇರುವ ತನಕ ಆ ಆಹುತಿ ಸುರಕ್ಷಿತವಾಗಿತ್ತು. ಈಗ ಮಾಯೆಯೆಂಬ ಮೃಗದ ಬೆನ್ನತ್ತಿ ಹೋದ ಸಮಯದಲ್ಲಿ ಸೀತೆಗೆ ಮಾಯೆಯೇ ಮರುಳಾಗಿಸಿ ಅಪಹರಿಸಿದೆ. ರಾವಣ ಸೀತೆ ಯಾರೆಂದು ಕೇಳಿದಾಗ ತನ್ನ ಪರಿಚಯ ಮಾಡಿಕೊಳ್ಳುವನು. ಸುಂದರ ನೇತ್ರಳೇ, ವಿಶಾಲಾಕ್ಷಿಯೇ, ಯಾರಿಂದ ಕೂಡಿದ ದಾನವರ ಸೇನೆಯು ಯುದ್ಧದಲ್ಲಿ ನಿರ್ದಯವಾಗಿ ದೇವಸೇನೆಯನ್ನು ಬಗ್ಗಿಸಿತೋ, ತನ್ನ ತಂಗಿಯ ವಿಕಲತೆಯು ಯಾರ ಬುದ್ಧಿಯನ್ನು ವಿಕಲವಾಗಿಸಿತೋ( ಕೆಟ್ಟದಾಗಿ ಯೋಚಿಸಲು ಪ್ರೇರೆಪಿಸಿತೋ) ತಮ್ಮಂದಿರಂತಿದ್ದ ಖರ ದೂಷಣರ ಮರಣವು ಯಾರ ಶೌರ್ಯ ಪರಾಕ್ರಮಗಳನ್ನು ಕೆರಳಿಸಿತೋ, ತನ್ನ ಶಕ್ತಿಯ ಮೇಲಿನ ನಂಬಿಕೆಯು ಯಾರ ಮತಿಯನ್ನು ದುಷ್ಟವಾಗಿಸಿತೋ, ಲೋಕದಲ್ಲಿ ಅಸಾಮಾನ್ಯ ಬಲಶಾಲಿಯಾದ ರಾಮನನ್ನು ಯಾರು ಮೋಸವೆಂಬ ಬಲೆಯಲ್ಲಿ ಬೀಳಿಸಿದರೋ, ಅಂತಹ ರಾವಣನು ನಿನ್ನನ್ನು ಅಪಹರಿಸಲೆಂದೇ ಈ ವನಸಮೀಪ ಬಂದಿದ್ದಾನೆ. ರಾವಣ ಮೊದಲಿಗೆ ತನ್ನ ಪರಾಕ್ರಮದ ಬಗ್ಗೆ ಬಹಳ ಹೇಳಿಕೊಳ್ಳುವನು. ಹಾಗಿದ್ದರೂ ರಾಮನ ಪ *ರಾ* ಕ್ರ *ಮ* ದ ಅರಿವು ಅವನಿಗಿದೆ. ಹಾಗಾಗಿಯೇ ಮೋಸದಿಂದ ವಂಚಿಸಿದ್ದಾನೆ. ಕವಿ ಇಲ್ಲಿ ರಾವಣನ ದುರಭಿಮಾನವನ್ನೂ ಅಹಂಕಾರವನ್ನೂ ಪರಿಚಯಿಸಿದ್ದಾನೆ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ