ಮಹಾಭಾರತ

📙🌾📗ಮಹಾಭಾರತದ ಅಪ್ರಸಿದ್ಧ ಕಥೆಗಳು📗🌾📙

_ಸೌದಾಸನು ಶಾಪಮುಕ್ತನಾಗಿ ಮತ್ತೆ ವಸಿಷ್ಠರ ಬಳಿ ಹೀಗೆ ನಿವೇದನೆ ಮಾಡಿಕೊಳ್ಳುವನು. 'ಮಹರ್ಷಿಯೇ, ವಿವಾಹವಾಗಿ ಬಹುಕಾಲವಾದರೂ ನನಗೆ ಮಕ್ಕಳಿಲ್ಲ. ಹಾಗಾಗಿ ನೀನು ನಿಯೋಗ ಪದ್ಧತಿಯಂತೆ ರಾಣಿಯನ್ನು ಕೂಡಿ ಉತ್ತಮ ಪುತ್ರನನ್ನು ಅನುಗ್ರಹಿಸು.ನಾನು ಪಿತೃಋಣದಿಂದ ಬಿಡುಗಡೆಯನ್ನು ಬಯಸಿದ್ದೇನೆ.'_

_ಅವನ ಬೇಡಿಕೆ ಒಪ್ಪಿದ ವಸಿಷ್ಠರು ಋತುಕಾಲವು ಸಮೀಪಿಸಿದಾಗ ರಾಣಿಯನ್ನು ಸೇರಿ ಗರ್ಭವನ್ನು ಅನುಗ್ರಹಿಸುತ್ತಾರೆ. ಅನಂತರ ರಾಜನಿಂದ ಗೌರವ ಪಡೆದು ದೇಶಾಂತರ ಹೊರಟುಹೋದನು. ತನ್ನ ನೂರು ಮಕ್ಕಳನ್ನು ತಿಂದವನಿಗೇ ಮಕ್ಕಳನ್ನು ಕರುಣಿಸುವ ವರಿಷ್ಠರ ಔದಾರ್ಯ ಎಣಿಸುವುದೂ ಕಷ್ಟ. ಬಹಳ ಕಾಲವಾದರೂ ಆ ಗರ್ಭ ಪ್ರಸೂತವಾಗದಿದ್ದಾಗ ಆ ರಾಣಿಯು ಒಂದು ಕಲ್ಲಿನಿಂದ ತನ್ನ ಹೊಟ್ಟೆಯನ್ನು ಭೇದಿಸಿಕೊಂಡಳು. ಹಾಗೆ ಹನ್ನೆರಡನೆಯ ವರ್ಷದಲ್ಲಿ ಹುಟ್ಟಿದ ಆ ಮಗುವಿಕೆ ಕಲ್ಲಿನಿಂದ ಹುಟ್ಟಿದ ಕಾರಣ ಅಶ್ಮಕ ಎಂದು ಹೆಸರಿಟ್ಟರು. ಗರ್ಭದ ಪ್ರಸವಕ್ಕೆ ಕಲ್ಲು ಕಾರಣವಾಗಿತ್ತು. ಅವನು ಮುಂದೆ ಪ್ರಸಿದ್ಧ ರಾಜರ್ಷಿಯಾಗಿ ಪೋತನ ಎಂಬ ನಗರವನ್ನು ಸ್ಥಾಪಿಸಿದನು._

_ಈ ಕಡೆ ಅದೇ ಸಮಯದಲ್ಲಿ ವರಿಷ್ಠರ ಸೊಸೆಯಾದ ಅದೃಶ್ಯಂತಿಯು ಶಕ್ತಿಯ ವಂಶವರ್ಧಕನಾದ ಪರಾಶರನೆಂಬ ಪುತ್ರನನ್ನು ಪ್ರಸವಿಸಿದಳು. ಶ್ರೇಷ್ಠನಾದ ವಸಿಷ್ಠನು ಆ ಮಗುವಿಗೆ ತಂದೆಯಂತೆ ಜಾತಕರ್ಮವೇ ಮೊದಲಾದ ಎಲ್ಲಾ ಸಂಸ್ಕಾರಗಳನ್ನು ನೇರವೇರಿಸಿದನು. ಮಗನ ಸ್ಥಾನದಲ್ಲಿ ನಿಂತು ಮೊಮ್ಮಗನ ಸಂಸ್ಕಾರ ಮಾಡುವಾಗಿನ ವಸಿಷ್ಠರ ಮನಸ್ಥಿತಿ ಎಷ್ಟು ಗಟ್ಟಿಯಾಗಿರಬಹುದು! ಒಂದು ಕಡೆ ದುಃಖ, ಮತ್ತೊಂದು ಕಡೆ ಮೊಮ್ಮಗನ ದರ್ಶನವು ಸುಖದಾಯಕ. ಹೀಗೆ ಆ ಮಗು ಬೆಳೆಯಿತ್ತಿತ್ತು._

_ಅಸುವನ್ನು ಅಂದರೆ ಪ್ರಾಣವನ್ನು ಕಳೆದುಕೊಳ್ಳಲಿದ್ದ ವಸಿಷ್ಠನನ್ನು ಬದುಕಿಸಿದ ಕಾರಣದಿಂದ ಪರಾಸುವನ್ನು ನಿಲ್ಲಿಸಿದ ಕಾರಣ ಅವನು ಪರಾಶರನೆನಿಸಿದನು._

📗 ಆಕರ - ಉದ್ಯೋಗಪರ್ವ ೧೬೯ ಅಧ್ಯಾಯ. ಸಂಗ್ರಹ ✍
ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩