ಕಿರಾತಾರ್ಜುನೀಯ ೧

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*कृतप्रणामस्य महीं महीभुजे जितां सपत्नेन निवेदयिष्यत: | न विव्यथे तस्य मनो न हि प्रियं प्रवक्तुमिच्छन्ति मृषा हितैषिण: ||*

_ಯುಧಿಷ್ಠಿರ ಗೂಢಚಾರನೊಬ್ಬನನ್ನು ದುರ್ಯೋಧನನ ಆಡಳಿತದ ಸ್ಥಿತಿ ಹೇಗಿದೆಯೆಂಬುದನ್ನು ಅರಿಯಲು ಕಳುಹಿಸಿರುತ್ತಾನೆ. ಅವನು ಹಿಂತಿರುಗಿ ಬಂದು ಒಡೆಯನ ಬಳಿ ಯಥಾರ್ಥವನ್ನು ನಿವೇದಿಸುತ್ತಿರುವನು. ಧರ್ಮಜನನ್ನು ನಮಸ್ಕರಿಸಿ ಶತ್ರುವಾದ ದುರ್ಯೋಧನನಿಂದ ಮೋಸದಿಂದ ಗೆದ್ದಿರುವ ಭೂಮಿಯ ಬಗೆಗೆ ಯಾವ ಬೇಸರವಿಲ್ಲದೆ ನಿವೇದಿಸಿದನು. ತನ್ನ ಒಡೆಯನ ಬಳಿ ಇದ್ದ ಧರಣಿ ಈಗ ಶತ್ರುವಿನ ಬಳಿ ಇರುವಳು. ಅವನ ಆಡಳಿತ ಒಳ್ಳೆಯದಿದ್ದರೂ ಕೆಟ್ಟದಿದ್ದರೂ ಒಡೆಯನ ಬಳಿ ಹೇಳಲು ಯಾವ ವ್ಯಥೆ ಇಲ್ಲದೆ ಗೂಢಚರನು ನಿವೇದಿಸಿದನು. ಕವಿಯ ಮುಂದಿನ ಮಾತು ಸುಂದರ. ನಮ್ಮ ಹಿತವನ್ನು ಯಾರು ಬಯಸುವರೋ ಅವರೆಂದಿಗೂ ಸುಳ್ಳಾಡಲಾರರು. ಒಡೆಯನ ಹಿತವನ್ನು ನಿಜವಾಗಿ ಬಯಸುವ ಸೇವಕನು ಅಪ್ರಿಯವಾದರೂ ಸತ್ಯವನ್ನೇ ನುಡಿಯುವನು. ಪ್ರಿಯವೆಂದು ಸುಳ್ಳಾಡಿದರೆ ಅದು ಒಡೆಯನನ್ನು ವಂಚಿಸಿದಂತಾಗುವುದು. ಇದನ್ನೇ ಸುಭಾಷಿತ ಹೇಳಿದ್ದು- *ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್* ಸತ್ಯವಾದ   ಹಾಗೂ ಪ್ರಿಯವಾದ ಮಾತನ್ನು ಆಡಬೇಕು. ಅಸತ್ಯವನ್ನು ಪ್ರಿಯವೆಂದು ಮಾತನಾಡಬಾರದು. ನಮ್ಮ ನಡತೆಯೂ ಹೀಗೆ ಇರಬೇಕು. ಪರರಿಗೆ ಪ್ರಿಯವೆಂದು ಎಂದಿಗೂ ಸುಳ್ಳು ಹೇಳಬಾರದು. ಅಪ್ರಿಯವಾದರೂ ನಮ್ಮ ಆಪ್ತರಲ್ಲಿ ಸತ್ಯವನ್ನೇ ನುಡಿಯಬೇಕು. ಸತ್ಯ ನುಡಿದರೆ ವಸ್ತುಸ್ಥಿತಿ ಅರಿತು ಮುಂದಿನ ಕಾರ್ಯದಲ್ಲಿ ತೊಡಗಬಹುದು. ಅದೇ ಸುಳ್ಳು ಹೇಳಿದರೆ ಮುಂದಿನ ಪರಿಣಾಮ ವಿಷಮವಾಗಬಹುದು.ಹಾಗಾಗಿ ನಿಜವಾದ ಹಿತೈಷಿಗಳೆಂದಿಗೂ ಸಟೆಯಾಡಲಾರರು._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩