ಮೇಘದೂತ
🌹 ಮೇಘದೂತದ ಒಂದು ಬಿಂದು 🌹
*कच्चित्सौम्य व्यवसितमिदं बन्धुकृत्यं त्वया मे प्रत्यादेशान्न खलु भवतो धीरतां कल्पयामि | निश्शब्दोपि प्रदिशसि जलं याचितश्चातकेभ्य: प्रत्युक्तं हि प्रणयिषु सतामीप्सितार्थक्रियैव ||*
_ಎಲೈ ಸಾಧುವೇ, ಈ ನನ್ನ ಬಂಧುವಂತೆ ನನ್ನ ಕಾರ್ಯ ಮಾಡಲು ತೊಡಗಿದ ನಿನಗೆ ನಾನು ಯಾವೊಂದು ಪ್ರತ್ಯುತ್ತರವನ್ನೂ ನೀಡಲಾರೆ. ನಿನ್ನ ಗಂಭೀರ ಸ್ವಭಾವ ಅರಿತು ನಿನ್ನ ಮೇಲೆ ಅಪರಿಮಿತ ವಿಶ್ವಾಸ ಹೊಂದಿ ನನ್ನೆಲ್ಲ ಬಯಕೆಗಳನ್ನು ನೀನು ಪೂರೈಸುವ ವಿಶ್ವಾಸದಿ ಬೀಳ್ಕೊಡುವೆ. ನಿನ್ನ ಗುಣವೇ ಅಂತಹದ್ದು. ಎಂದಿಗೂ ನೀರು ಬೇಡುವ ಚಾತಕ ಪಕ್ಷಿಗಳೊಡನೆ ನೀನು ಒಂದೂ ಮಾತನಾಡದೆ ಗಂಭೀರನಾಗಿ ಧಾರಾಳ ನೀರು ಸುರಿಸುವೆ. ಸಜ್ಜನರ ಸ್ವಭಾವವೇ ಹೀಗೆ. ಯಾಚಕರ ಬೇಡಿಕೆಯನ್ನು ಉತ್ತರ ಹೇಳದೆ ಸಂಪಾದಿಸಿಕೊಡುವುದು. ಆಡದೆಲೆ ಮಾಡುವವನು ರೂಢಿಯೊಳಗುತ್ತಮನು. ಕಾರ್ಯ ಮಾಡಿ ತೋರುವುದೇ ಅವರಾಡುವ ನುಡಿ. ಅದರಂತೆ ಪುಷ್ಕರ ಆವರ್ತಕಗಳೆಂಬ ಶ್ರೇಷ್ಠ ಕುಲದಲ್ಲಿ ಜನಿಸಿದ ನಿನ್ನಂತಹ ಮಹಾತ್ಮರು ಗುಡುಗದೆ ಮೌನವಾಗಿ ನನ್ನ ಬಯಕೆಯನ್ನು ಈಡೇರಿಸುವೆಯೆಂದು ಭಾವಿಸಿದ್ದೇನೆ. ನೀನು ಯಾವ ಉತ್ತರ ನೀಡದಿದ್ದರೂ ನಿನ್ನ ಕಾರ್ಯ ಕುಶಲತೆಯನ್ನು ಅರಿತೇ ಹಾಗೂ ಅಪಾರ ನಂಬಿಕೆಯಿಂದಲೇ ಈ ಕಾರ್ಯ ನಡೆಸಿಕೊಡೆಂದು ಯಾಚಿಸುತ್ತಾ ಬೀಳ್ಕೊಡುತ್ತಿರುವೆನು. ನಿರ್ಜೀವ ಮೇಘವು ಎಂದಾದರೂ ಮಾತನಾಡಲು ಸಾಧ್ಯವೇ! ಕವಿ ಇದನ್ನೇ ಸಜ್ಜನರ ಗುಣವನ್ನಾಗಿ ವಿವರಿಸಿರುವ ಪರಿ ಸುಂದರ. ನಾವೂ ಹೆಚ್ಚು ಮಾತನಾಡದೇ ನಮ್ಮ ಸತ್ಕಾರ್ಯಗಳೇ ನಮ್ಮನ್ನು ಗುರುತಿಸುವಂತೆ ಮಾಡೋಣ_
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ