ಪ್ರತಿಮಾ ನಾಟಕ
🌺 ಪ್ರತಿಮಾ ನಾಟಕದ ಒಂದು ಸುಮ 🌺
*विचेष्टमानेव भुजङ्गमाङ्गना विधूयमानेव च पुष्पिता लता | प्रसह्य पापेन दशाननेन सा तपोवनात् सिद्धिरिवापनीयते ||*
_ಸೀತಾಪಹರಣದ ಬಗ್ಗೆ ತಪಸ್ವಿಯೊಬ್ಬನ ನುಡಿ. ಸುಮ್ಮನೆ ಮಲಗಿರುವ ಸರ್ಪಿಣಿಯನ್ನು ಕೆಣಕಿದಂತೆ, ಅರಳಿದ ಹೂಗಳುಳ್ಳ ಬಳ್ಳಿಯನ್ನು ಅಲ್ಲಾಡಿಸುವಂತೆ ಅಥವಾ ಅದನ್ನು ಘಾಸಿಗೊಳಿಸುವಂತೆ, ಬಹುಕಾಲದ ತಪಸ್ಸಿನ ಫಲದಂತಿರುವ ಈ ಅಬಲೆಯನ್ನು ಪಾಪಿಯಾದ ಈ ರಾವಣನಿಂದ ಬಲಾತ್ಕಾರವಾಗಿ ಅಪಹರಿಸಲ್ಪಡುತ್ತಿದ್ದಾಳೆ. ಹೆಣ್ಣು ಸರ್ಪದಂತೆ ಎಂದಿರುವುದು ಸೀತೆಯ ಪ್ರಭಾವದ ಸೂಚಕ, ಅಥವಾ ಮುಂದೆ ಪತಿಯ ಮೂಲಕ ಪ್ರತೀಕಾರ ತೀರಿಸಿಕೊಳ್ಳುವಳು ಎಂಬ ವಿಶ್ವಾಸದ ದ್ಯೋತಕ, ಎರಡನೆಯ ಉಪಮೆ ಆಭರಣಗಳು - ಉಟ್ಟ ಬಟ್ಟೆ ಎಲ್ಲವೂ ಚೆಲ್ಲಾಪಿಲ್ಲಿಯಾಗಿದೆ ಎಂಬುದನ್ನು ಸೂಚಿಸುವುದು. ಹೂವು ಬಿಟ್ಟಿರುವ ಬಳ್ಳಿಯನ್ನು ಜೋರಾಗಿ ಅಲ್ಲಾಡಿಸಿದಾಗ ಹೆದರಿ ನಡುಗುವಂತೆ ರಾವಣನ ಬಲದ ಮುಂದೆ ಸೀತೆ ನಡುಗಿದ್ದಾಳೆ. ಸೀತೆ ಸರ್ವಥಾ ರಕ್ಷಣೆಗೆ ಯೋಗ್ಯಳು, ಏಕೆಂದರೆ ತಪಸ್ಸಿನ ಸಿದ್ಧಿಯಂತೆ ಅವಳು ಧರ್ಮಿಷ್ಠಳು ಪತಿವ್ರತೆ ಶುದ್ಧಳು. ಹಾಗಾಗಿ ರಕ್ಷಿಸಲೇಬೇಕಾದ ಅನಿವಾರ್ಯತೆ ಅವಳ ಬಗೆಗಿದೆ ಎನ್ನುವುದರ ಸೂಚಕ. ಕವಿ ಹೀಗೆ ಮಾಲೋಪಮಾ ಅಲಂಕಾರದ ಮೂಲಕ ಸೀತೆಯ ಮಹತ್ವವನ್ನು ಸಾರಿದ್ದಾನೆ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ