ಪ್ರತಿಮಾ ನಾಟಕ

🌺 ಪ್ರತಿಮಾ ನಾಟಕದ ಒಂದು ಸುಮ 🌺

*पक्षाभ्यां परिभूय वीर्यविषयं द्वन्द्वं प्रतिव्यूहते तुण्डाभ्यां सुनिघृष्टतीक्ष्णमचल: संवेष्टनं चेष्टते | तीक्ष्णैरायसकण्टकैरिव नखैर्भीमान्तरं वक्षसो वज्राग्रैरिव दार्यमाणविषमाच्छैलाच्छिला पाट्यते ||*

_ಜಟಾಯು ಸೀತೆಯನ್ನು ರಕ್ಷಿಸಲು ರಾವಣನೊಡನೆ ಹೋರಾಡುತ್ತಿರುವ ದೃಶ್ಯದ ವರ್ಣನೆ ಇದು. ಕೇವಲ ತನ್ನ ಬಲಿಷ್ಠವಾದ ರೆಕ್ಕೆಗಳಿಂದ ರಾವಣನಿಗೆ ಸಮನಾದ ಪರಾಕ್ರಮ ತೋರುತ್ತಿರುವನು ಈ ಪಕ್ಷಿರಾಜ. ರಾವಣನಷ್ಟೇ ಪರಾಕ್ರಮ ತೋರುತ್ತಾ ಅವನೊಡನೆ ದ್ವಂದ್ವಯುದ್ಧಮಾಡುತ್ತಾ ಸೋಲಿಸುತ್ತಿದ್ದಾನೆ. ಇಷ್ಟಲ್ಲದೆ ತನ್ನ ಚೂಪಾದ ಕೊಕ್ಕಿನಿಂದ ಚುಚ್ಚಿ ಚುಚ್ಚಿ ಘಾಸಿಗೊಳಿಸುತ್ತಿದ್ದಾನೆ. ಸ್ವಲ್ಪವೂ ಹಿಂಜರಿಯದೆ ಗಟ್ಟಿಯಾಗಿ ನಿಂತು ಅಡಿಗಡಿಗೂ ರಾವಣನನ್ನು ಘಾಸಿಗೊಳಿಸುತ್ತಿರುವನು. ರಾವಣನನ್ನು ಮಧ್ಯದಲ್ಲಿ ತನ್ನ ಹೊಡೆತದಿಂದ ಬೀಳಿಸುತ್ತಾ ಅಮೋಘ ಪರಾಕ್ರಮ ತೋರುತ್ತಿದ್ದಾನೆ. ಅವನ ದಾಳಿ ಹೇಗಿದೆಯೆಂದರೆ ಇಂದ್ರನು ತನ್ನ ವಜ್ರಾಯುಧದಿಂದ ಪರ್ವತಗಳನ್ನು ಪುಡಿಗಟ್ಟಿದ ಹಾಗೆ ಈ ಜಟಾಯುವು ಕಬ್ಬಿಣದ ಚೂಪದ ಬಾಣಗಳಂತಿರುವ ತನ್ನ ಕೊಕ್ಕುಗಳಿಂದ ಅತ್ಯಂತ ಭಯಾನಕವಾಗಿ ದಾಳಿ ಇಡುತ್ತಿದ್ದಾನೆ. ಕವಿ ಒಂದು ಪಕ್ಷಿಯ ಪರಾಕ್ರಮವನ್ನು ತನ್ನ ಕಲ್ಪನೆಯಲ್ಲಿ ತಂದುಕೊಂಡು ವರ್ಣಿಸುವ ಪರಿ ಸುಂದರ._

📜ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩