ಪ್ರತಿಮಾ ನಾಟಕ
🌺 ಪ್ರತಿಮಾ ನಾಟಕದ ಒಂದು ಸುಮ 🌺
*रामं वा शरणमुपेहि लक्ष्मणं वा स्वर्गस्थं दशरथमेव वा नरेन्द्रम् | किं वा स्यात् कुपुरुषसंश्रितैर्वचोभिर्न व्याघ्रं मृगशिशव: प्रघर्षयन्ति ||*
_ರಾವಣ ಸೀತೆಗೆ ನುಡಿಯುವ ಮಾತು. ಸೀತೆ, ನೀನು ಯಾರನ್ನು ಶರಣು ಹೊಕ್ಕರೂ ಪ್ರಯೋಜನವಿಲ್ಲ. ರಾಮನ್ನಾದರೂ ಕೂಗು, ಲಕ್ಷ್ಮಣನನ್ನಾದರೂ ಕೂಗು, ಅಥವಾ ಸ್ವರ್ಗಸ್ಥನಾದ ಪರಾಕ್ರಮಿ ರಾಜನಾಗಿದ್ದ ದಶರಥನನ್ನಾದರೂ ಶರಣೆನ್ನು. ಇವರಾರೂ ನಿನಗೆ ಸಹಾಯ ಮಾಡಲಾರರು. ಇಂತಹ ದುರ್ಬಲ ವ್ಯಕ್ತಿಗಳನ್ನಾಶ್ರಯಿಸಿ ಯಾವ ಪ್ರಯೋಜನವನ್ನು ನೀನು ಅಪೇಕ್ಷಿಸುವೆ! ಈ ರಾವಣನಿಗೆ ಅವರಾರೂ ಸಾಟಿಯಾಗಲಾರರು. ನನ್ನ ಪರಾಕ್ರಮದೆದುರು ಅವರೆಲ್ಲರೂ ತೃಣಸಮಾನರು. ಲೋಕದಲ್ಲಿ ಎಂದಾದರೂ ಜಿಂಕೆಮರಿಗಳು ಹುಲಿಯನ್ನು ಪೀಡಿಸಿದ ಕಥೆ ಇದೆಯೇ? ಎಂದಿಗೂ ಸಾಧ್ಯವಿಲ್ಲದ ಮಾತು. ಇವರೆಲ್ಲರೂ ಲೋಕದ ದೃಷ್ಟಿಯಲ್ಲಿ ಮಹಾಪರಾಕ್ರಮಿಗಳೆನಿಸಿದರೂ ನನ್ನೆದುರು ಹುಲ್ಲೆಗಳಂತೆ ಇದ್ದಾರೆ. ದೇವ ದಾನವರ ಮಣಿಸಿದ ಈ ರಾವಣನ ಕೂದಲು ಕೊಂಕಲು ಅವರಿಗೆ ಸಾಧ್ಯವಿಲ್ಲ. ನಿನ್ನ ವ್ಯರ್ಥ ಪ್ರಯತ್ನ ನಿಲ್ಲಿಸು. ನನ್ನೊಡನೆ ಸುಮ್ಮನೆ ನಡಿ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ