ಧರ್ಮಾಚರಣೆ ೮

     ಧರ್ಮಾಚರಣೆ---- ೮

ಇಕ್ಷುರ್ಮಧು ಘೃತಂಚೈವ ಪಯೋ ದಧಿ ಸಹೈವ ತು| ಪ್ರಸ್ಥಪ್ರಮಾಣಂ ವಾ ಗ್ರಾಹ್ಯಂ ಮಧುಪರ್ಕಮಿಹೋಚ್ಯತೇ || ಸುಧಾನಿಧಿ ಗ್ರಂಥ |

ಯಜ್ಞಗಳಲ್ಲಿ, ಪೂಜಾದಿಗಳಲ್ಲಿ ಮಧುಪರ್ಕ ಕೊಡುವ ಕ್ರಮ ಉಂಟು. ಆ ಮಧುಪರ್ಕದ ಕ್ರಮ ಹೀಗಿದೆ  ಕಬ್ಬಿನ ಹಾಲು- ಜೇನು- ತುಪ್ಪ- ಮೊಸರು ಇಷ್ಟನ್ನೂ ಒಂದು ದೊಡ್ಡ ಪಾತ್ರೆಯಲ್ಲಿ ತುಂಬುವಷ್ಟು ಅಂದರೆ ಪ್ರತಿಯೊಂದನ್ನೂ ಸುಮಾರು ಒಂದು ದೊಡ್ಡ ತಂಬಿಗೆಯಷ್ಟು ಕೊಟ್ಟಾಗ ಅದು ಮಧುಪರ್ಕ ಎನಿಸುವುದು. ಸಾರಭೂತವಾದ ಈ ದ್ರವ್ಯಗಳ ಸೇವನೆಯು ಯಾರಿಗೆ ತಾನೇ ತೃಪ್ತಿ ತರದು! ದೇವರಿಗೆ ಕೊಡುವಾಗಲೂ ಉತ್ತಮ ದ್ರವ್ಯವನ್ನೇ ನೀಡಬೇಕು, ಹಾಗಲ್ಲದೆ ನಾವು ಹೇಗೆ ಸುಖ  ಬಯಸಲು ಸಾಧ್ಯ? 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩