ಧರ್ಮಾಚರಣೆ ೫
ಧರ್ಮಾಚರಣೆ------ ೫
ನ ಸ್ನಾನಮಾಚರೇದ್ಭುಕ್ತ್ವಾ ನಾತುರೋ ನ ಮಹಾನಿಶಿ | ನ ವಾಸೋಭಿಃ ಸಹ ಸ್ನಾನಂ ನಾವಿಜ್ಞಾತೇ ಜಲಾಶಯೇ|| ಮನುವಚನ. ಉಜ್ವಲಾ ಗ್ರಂಥ.
ಸ್ನಾನವನ್ನು ಎಂದಿಗೂ ಭೋಜನದ ಕೂಡಲೇ ಮಾಡಬಾರದು. ಇದು ವಮನ ಮೊದಲಾದ ತೊಂದರೆಗೆ ಕಾರಣವಾದೀತು.ದೇಹದಲ್ಲಿ ಶಕ್ತಿ ಇಲ್ಲದಿದ್ದಾಗ ಅಥವಾ ರೋಗಿಷ್ಠನಾದಾಗಲೂ ಸ್ನಾನ ಮಾಡಬಾರದು.ಏಕೆಂದರೆ ಅಂತಹ ಸ್ನಾನವೇ ಅಪಾಯಕ್ಕೆ ಕಾರಣವಾದೀತು. ಮಧ್ಯರಾತ್ರಿಯ ಸಮಯದಲ್ಲಿ ಸೆಕೆ ಎಂದೋ ಅಥವಾ ಕ್ಷುಲ್ಲಕ ಕಾರಣಗಳಿಗಾಗಿ ಸ್ನಾನ ಮಾಡಬಾರದು. ಆ ಸಮಯ ಸ್ನಾನಕ್ಕೆ ಯೋಗ್ಯ ಸಮಯವಲ್ಲ. ಅನೇಕ ಬಟ್ಟೆಗಳನ್ನು ಧರಿಸಿ ಸ್ನಾನ ಮಾಡಬಾರದು. ಇದು ದೇಹಶುದ್ಧಿ ಮಾಡದೇ ವಸ್ತ್ರಶುದ್ಧಿ ಮಾತ್ರ ಉಂಟುಮಾಡೀತು. ಗುರುತು ಪರಿಚಯ ಇಲ್ಲದ ನೀರಿನ ಜಾಗದಲ್ಲಿ ಅಂದರೆ ಕೆರೆ- ಸರೋವರ-ಕಲ್ಯಾಣಿ-ನದಿ ಮೊದಲಾದ ಪ್ರದೇಶಗಳಲ್ಲಿ ನೀರಿದೆಯೆಂದು ಸ್ನಾನ ಮಾಡಬಾರದು. ಆಳ-ಅಗಲ, ದುಷ್ಟ ಜಂತುಗಳ ಅರಿವಿಲ್ಲದೇ ಕೊನೇ ಸ್ನಾನ ಆಗಬಹುದು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ