ಧರ್ಮಾಚರಣೆ ೯

     ಧರ್ಮಾಚರಣೆ-----  ೯

ಕೌಶೇಯಂ ಕಂಬಲಂ ಚೈವ ಅಜಿನಂ ಪಟ್ಟಮೇವ ಚ | ದಾರುಜಂ ತಾಲಪತ್ರಂ ವಾ ಆಸನಂ ಪರಿಕಲ್ಪಯೇತ್ || ಕೃಷ್ಣಾಜಿನೇ ಜ್ಞಾನಸಿದ್ಧಿರ್ಮೋಕ್ಷಶ್ರೀರ್ವ್ಯಾಘ್ರಚರ್ಮಣಿ | ಕುಶಾಸನೇ ವ್ಯಾಧಿನಾಶಃ ಸರ್ವೇಷ್ಟಂ ಚಿತ್ರಕಂಬಲೇ|| ವ್ಯಾಸವಚನ.

ರೇಷ್ಮೆ ಬಟ್ಟೆ, ಕಂಬಳಿ, ಚರ್ಮ, ಮಣೆ ಮೊದಲಾದ ಮರದ ನಿರ್ಮಿತಿಗಳು, ತಾಳೆಎಲೆ, ದರ್ಭಾಸನ ಮೊದಲಾದವುಗಳು ಶುಭಕರ್ಮಗಳಲ್ಲಿ ಆಸನವಾಗಿ ಸ್ವೀಕರಿಸಬೇಕಾದವು. ಬರಿದೆ ನೆಲದಲ್ಲಿ ಕೂತು ಆರೋಗ್ಯಕ್ಕೂ ಹಾನಿ, ಶಾಸ್ತ್ರಕ್ಕೂ ಅಪಚಾರ. 
ಕೃಷ್ಣಮೃಗಾಜಿನವು ಜ್ಞಾನ ಸಿದ್ಧಿಯನ್ನು, ವ್ಯಾಘ್ರಾಜಿನವು ಮೋಕ್ಷಸಂಪತ್ತನ್ನೂ, ದರ್ಭಾಸನದಿಂದ ಅರೋಗತೆಯೂ, ಚಿತ್ರವರ್ಣದಕಂಬಳಿಯು ಇಷ್ಟಾರ್ಥವನ್ನು ಕೊಡುವುದು. ಸತ್ತ ಮೃಗದ ಚರ್ಮ ಹೊರತು ಸಾಯಿಸಿದ್ದಲ್ಲ. ಪ್ರಾಣಿವಧೆ ಮೇಲೆ ಆಸನ ಕೊಟ್ಟೀತು. ಒಟ್ಟಾರೆ ಆಸನದಲ್ಲಿ ಆಸೀನರಾಗಿಯೇ ಕರ್ಮಗಳಲ್ಲಿ ತೊಡಗಬೇಕು.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩