ಧರ್ಮಾಚರಣೆ ೧೩
ಧರ್ಮಾಚರಣೆ-----೧೩
ವಿರುದ್ಧಂ ವರ್ಜಯೇತ್ಕರ್ಮ ಪ್ರೇತಧೂಮಂ ನದೀತರಮ್ | ಕೇಶಭಸ್ಮತುಷಾಂಗಾರ ಕಪಾಲೇಷು ಚ ಸಂಸ್ಥಿತಿಮ್ || ಯಾಜ್ಞವಲ್ಕ್ಯ ಸ್ಮೃತಿ ||
ದೇಶ, ಗ್ರಾಮ, ಕುಲಾಚಾರ, ಆರೋಗ್ಯ, ಆಯುಷ್ಯ ಇವುಗಳಿಗೆ ವಿರುದ್ಧವಾದ ಕರ್ಮ ಮಾಡಬಾರದು. ಯಾವ ಯಾವ ದೇಶದಲ್ಲಿ, ಗ್ರಾಮಗಳಲ್ಲಿ, ಮನೆಗಳಲ್ಲಿ ಏನೇನು ಸಂಪ್ರದಾಯ ಇದೆಯೋ ಅದನ್ನು ಗೌರವಿಸಬೇಕು. ನಮ್ಮ ಆರೋಗ್ಯ ಅಥವಾ ಆಯುಷ್ಯಕ್ಕೆ ಹಾನಿ ತರುವ ಸಂಪ್ರದಾಯ ಬಿಡಬೇಕು. ಶವ ಸುಡುವಾಗ ಬರುವ ಹೊಗೆ ಸೇವಿಸಬಾರದು. ಇಹಪರದಲ್ಲಿ ಅದು ಹಾನಿಕಾರಕ. ಪ್ರವಾಹದಲ್ಲಿ ಈಜುವ ಸಾಹಸ ಎಂದಿಗೂ ಸಲ್ಲದು. ಕೂದಲು, ಬೂದಿ, ಹೊಟ್ಟು, ಕೆಂಡ, ಹೆಂಚುಗಳ ಮೇಲೆ ಕುಳಿತುಕೊಳ್ಳಬಾರದು. ಮೊದಲಾಗಿ ಅಶುಚಿ, ಎರಡನೆಯದಾಗಿ ಸುಡುವ, ಬೀಳುವ, ಗಾಯ ಮಾಡಿಕೊಳ್ಳುವ ಪ್ರಸಂಗ ಬಂದೀತು.
ಸಂಗ್ರಹ : ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ