ಧರ್ಮಾಚರಣೆ ೭

       ಧರ್ಮಾಚರಣೆ----- ೭

ಪರಶಯ್ಯಾಸನೋದ್ಯಾನ ಗೃಹಯಾನಾನಿ ವರ್ಜಯೇತ್ | ಅದತ್ತಾನ್ಯಗ್ನಿಹೀನಸ್ಯ ನಾನ್ನಮದ್ಯಾದನಾಪದಿ || ಯಾಜ್ಞವಲ್ಕ್ಯಸ್ಮೃತಿ .

ಇನ್ನೊಬ್ಬರಿಗೆ ಸಂಬಂಧಿಸಿದ ಹಾಸಿಗೆ, ಆಸನ, ಉದ್ಯಾನ ಅಥವಾ ತೋಟ, ಮನೆ, ವಾಹನಗಳ ಬಳಕೆ ಅವರ ಅನುಮತಿ ಇಲ್ಲದೇ ಎಂದಿಗೂ ಸರಿಯಲ್ಲ. ಪ್ರತಿಯೊಬ್ಬರಿಗೂ ಒಂದಷ್ಟು ಮೋಹ ಇರುವ ಕಾರಣ ಆ ವಸ್ತುಗಳ ಅನುಮತಿ ಇಲ್ಲದ ಬಳಕೆ ಕಲಹಾದಿಗಳನ್ನು ಅಥವಾ ನಮಗೆ ಆಪತ್ತನ್ನು ತಂದುಕೊಡಬಲ್ಲದು. ಅದೇ ರೀತಿ ಪರರ ಆಹಾರಾದಿಗಳನ್ನು ಕೇಳದೇ  ಸ್ವೀಕರಿಸಲೂಬಾರದು. ಅಗ್ನಿ ಆರಾಧನೆ ಮಾಡದ  ವಿಪ್ರನಿರಲಿ ಯಾರೇ ಇರಲಿ ಅವರ ಅನ್ನವನ್ನೂ ಉಣ್ಣಬಾರದು. ಪ್ರತೀ ಮಾನವನಿಗೂ  ಒಂದಲ್ಲಾ ಒಂದು ಬಗೆಯ ಅಗ್ನಿಪೂಜೆ ವಿಹಿತವಾಗಿದೆ. ಹಾಗೆ ಮಾಡದೆ ಉಣ್ಣುವ ಅನ್ನ ಕೆಟ್ಟ ಅನ್ನ ಅಥವಾ ಕಳ್ಳತನದ ಅನ್ನವಾಗುವುದು. ಅಂತಹ ಅನ್ನವನ್ನು ಪ್ರಾಣ ಹೋಗುವ ಸಂದರ್ಭ ಬಿಟ್ಟು ಉಳಿದ ಸಮಯ ತಿನ್ನಬಾರದು. 

ಸಂಗ್ರಹ : ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩