ಧರ್ಮಾಚರಣೆ ೩

      ಧರ್ಮಾಚರಣೆ ---೩

ಋಷಿರ್ಗುರುತ್ವಾತ್ ಶಿರಸಿ, ಛಂದೋಕ್ಷರತ್ವಾತ್ ಮುಖೇ, ಧ್ಯೇಯತ್ವಾತ್ ಹೃದಿ ದೇವತಾ.

ಮೂಲ- ಸಂಧ್ಯಾ ಭಾಷ್ಯ. 

ಯಾವುದೇ ಮಂತ್ರವನ್ನು ಹೇಳುವಾಗ ಋಷಿ ಛಂದಸ್ಸು ದೇವತೆಯನ್ನು ಸ್ಮರಿಸಬೇಕು. ಹಾಗೆ ಸ್ಮರಿಸುವ ಕಾಲದಲ್ಲಿ ಋಷಿಗಳ ಹೆಸರು ಹೇಳುವಾಗ ತಲೆಯನ್ನು ಮುಟ್ಟಬೇಕು. ಋಷಿಗಳು ಗುರುಪರಂಪರೆಯ ಜನಕರಾದ್ದರಿಂದ ಅವರಿಗೆ ನಮಿಸುತ್ತಿರುವೆ ಎಂಬ ಭಾವವಿರಬೇಕು. ಛಂದಸ್ಸು ಅಕ್ಷರಗಳ ನಿಯಮವಾದ್ದರಿಂದ ಅಕ್ಷರಗಳ ಉಚ್ಚಾರ ಸಾಧನ ಬಾಯಿಗೆ ಅಥವಾ ಅಲ್ಲಿ ನೆಲೆಸಿರುವ ದೇವತೆಗೆ ಸ್ಪರ್ಶದ ಮೂಲಕ ಕೃತಜ್ಞತೆ ಹೇಳಬೇಕು. ಮೂರನೆಯದಾಗಿ ನಮ್ಮ ಹೃದಯದಲ್ಲಿ ವಾಸವಾಗಿರುವ ಆ ಮಂತ್ರದ ದೇವತೆಯನ್ನು ಸ್ಪರ್ಶದ ಮೂಲಕ ನೆನೆಯಬೇಕು. ಯಾವುದೇ ಮಂತ್ರದ ಉಚ್ಚಾರಣಾ ಕಾಲದಲ್ಲಿ ಹೀಗೆ ಮಾಡಿದಾಗ ಗುರುಸ್ಮರಣೆಯೂ, ದೇವನ ಅನುಸಂಧಾನವೂ ಛಂದೋಜ್ಞಾನವೂ ಉಂಟಾಗುತ್ತದೆ. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩