ಧರ್ಮಾಚರಣೆ ೨
ಧರ್ಮಾಚರಣೆ ---೨
ಪೂರ್ವಾಂ ಸಂಧ್ಯಾಂ ಸನಕ್ಷತ್ರಾಂ ಉತ್ತರಾಂ ಸದಿವಾಕರಾಂ| ಉತ್ತರಾಮುಪವಿಶ್ಯೈವ ವಾಗ್ಯತಃ ಸರ್ವದಾ ಜಪೇತ್||
ಬೆಳಗ್ಗಿನ ಸಂಧ್ಯಾವಂದನೆ ಅಥವಾ ಪೂಜಾದಿಗಳನ್ನು ನಕ್ಷತ್ರಗಳು ಕಾಣುತ್ತಿರುವಾಗಲೇ ಆರಂಭಿಸಬೇಕು. ಸೂರ್ಯೋದಯ ಆದ ಮೇಲೆ ಅಥವಾ ಬಿಸಿಲು ಬರುವ ಮುಂಚೆ ನಮ್ಮ ನಿತ್ಯಕರ್ಮ ಶುರುವಾಗಬೇಕು. ಅಂತೆಯೇ ಸಂಜೆಯ ಸಂಧ್ಯಾವಂದನೆ ಸೂರ್ಯನಿರುವಾಗಲೇ ಶ್ರೇಷ್ಠ. ಅರ್ಘ್ಯ- ಗಾಯತ್ರೀ ಜಪ ಬೆಳಿಗ್ಗೆ ನಿಂತು ಮಾಡಬಹುದು. ಸಂಜೆ ಕುಳಿತು ಮಾಡುವುದೊಳಿತು. ಜಪವನ್ನು ಮನದಲ್ಲೇ ಮೆಲುಕು ಹಾಕುತ್ತಾ ಆ ಸವಿತೃದೇವನ ಧ್ಯಾನದೊಂದಿಗೇ ಮಾಡಬೇಕು. ಜೋರಾಗಿ ಗಾಯತ್ರೀ ಜಪ ಸರಿಯಲ್ಲ. ಮನನವೇ ಮಂತ್ರದ ಸಿದ್ಧಿಗೆ ಪೂರಕ.
ಆಕರ-ಸ್ಮೃತಿಗಳು
ಸಂಗ್ರಹ- ಶ್ರೀನಿಧಿ ಅಭ್ಯಂಕರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ