ಧರ್ಮಾಚರಣೆ ೧೦

       ಧರ್ಮಾಚರಣೆ---- ೧೦

ಶ್ರದ್ಧಯಾ ಕರ್ಮ ಕುರ್ವೀತ ಧೌತವಸ್ತ್ರಧರೋ ಭವೇತ್ | ಅವ್ಯಗ್ರೋಲಂಕೃತೋ ಮೌನೀ ದಂಭಾಸೂಯಾದಿವರ್ಜಿತಃ || ಸಂಸ್ಕಾರರತ್ನಮಾಲಾ

ನಾವು ಯಾವ ಕರ್ಮಗಳನ್ನು ಮಾಡುವುದಿದ್ದರೂ ಅವುಗಳಲ್ಲಿ ಈ ಲಕ್ಷಣಗಳು ಇರಬೇಕು. ಮಾಡುವ ಕರ್ಮದಲ್ಲಿ ಅತ್ಯಂತ ಶ್ರದ್ಧೆ, ಬಿಳಿ ಬಟ್ಟೆ ಅಥವಾ ಸ್ವಚ್ಛವಾದ ವಸ್ತ್ರ ( ಕೊಳೆಯನ್ನು ಗುರುತಿಸುವುದು ಸುಲಭ) , ಯಾವ ಕಾರಣಕ್ಕೂ ಕೋಪ ಮಾಡಿಕೊಳ್ಳಬಾರದು, ಕೂದಲು ಕೆದರದೆ ಶಿಖೆಯನ್ನು ಕಟ್ಟಿಕೊಂಡು ಸ್ತ್ರೀಯರಾದರೆ ಕೇಶಕಟ್ಟಿಕೊಂಡು, ತಿಲಕ ಮೊದಲಾದವುಗಳಿಂದ ಅಲಂಕೃತರಾಗಿ, ಮೌನವಾಗಿ, ದ್ವೇಷ ಅಸೂಯೆ ಮೊದಲಾದ ಕಪಟತನವನ್ನು ಬಿಟ್ಟು ದೇವತೆಯನ್ನು ಧ್ಯಾನಿಸುತ್ತಾ ಮುಂದುವರಿಯಬೇಕು. ಪೂಜೆಗೆ ಅದರದ್ದೇ ಆದ ನಿಯಮಗಳನ್ನು ಪಾಲಿಸಬೇಕು.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩