ಧರ್ಮಾಚರಣೆ ೧೨
ಧರ್ಮಾಚರಣೆ---- ೧೨
ಅಸ್ನಾತ್ವಾ ವೈ ನ ಭುಂಜೀತ ತಥೈವಾಗ್ನಿಮಪೂಜ್ಯ ಚ | ನ ಪರ್ಣಪೃಷ್ಠೇ ಭುಂಜೀತ ರಾತ್ರೌ ದೀಪಂ ವಿನಾ ತಥಾ || ಪರಾಶರ ಸ್ಮೃತಿ ||
ಸ್ನಾನ ಮಾಡದೇ ಉಣ್ಣಬಾರದು. ದೇಹ ಶುದ್ಧಿ ಇಲ್ಲದಾಗ ಉಂಡ ಆಹಾರವು ಮಲಿನವಾಗಿ ರೋಗಗಳಿಗೆ ಆಹ್ವಾನ ನೀಡಿದಂತಾಗುವುದು. ಅಗ್ನಿ ಪೂಜೆ ಮಾಡದೆಯೂ ಆಹಾರ ಸ್ವೀಕರಿಸಬಾರದು. ದೇಹದ ಒಳಗೂ ಅಗ್ನಿ ಬೇಕು. ಆಹಾರ ಬೇಯಲೂ ಅಗ್ನಿ ಬೇಕು. ಇಂತಹ ಅಗ್ನಿಯ ಪ್ರಾರ್ಥನೆ ನಮ್ಮ ಇಹಪರಗಳ ಬದುಕಿಗೆ ಮಾರ್ಗದರ್ಶಕ. ಎಲೆಯಲ್ಲಿ ಊಟ ಮಾಡುವಾಗ ಅದರ ಹಿಂಭಾಗ ಸಲ್ಲದು. ಕ್ರಿಮಿ ಕೀಟಗಳಿಗೆ ಆಧಾರವಾದದ್ದು ಪರ್ಣಪೃಷ್ಠ. ಅಲ್ಲದೇ ಅದರ ಒರಟುತನವೂ ಉಣ್ಣಲು ಅಸಹಕಾರಿ. ಇನ್ನು ರಾತ್ರಿಯಲ್ಲಿ ಬೆಳಕಿಲ್ಲದೆ ಕತ್ತಲಲ್ಲಿ ಉಣ್ಣಬಾರದು. ಹುಳು ಹುಪ್ಪಟೆಗಳು ಕೂದಲು ಮೊದಲಾದವು ಉದರ ಸೇರಬಾರದು. ಹಾಗಾಗಿಯೇ ಹಿಂದುಗಳಲ್ಲಿ ರಾತ್ರಿ ಭೋಜನ ನಿಷಿದ್ಧ. ಜೈನರಲ್ಲಿ ಸೂರ್ಯಾಸ್ತದ ನಂತರದ ಭೋಜನ ನಿಷಿದ್ಧ. ಒಂದು ವೇಳೆ ಮಾಡುವುದಾದರೂ ಬೆಳಕಿನಲ್ಲಿ ನಿಧಾನಕ್ಕೆ ಉಣ್ಣಬೇಕು. ಹೀಗೆ ಸೇವಿಸುವ ಆಹಾರ ಬದುಕಿಗೆ ಪೂರಕ. ಇಲ್ಲದಿದ್ದರೆ ಅದೇ ದುಃಖಕಾರಕ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ